ಟಿವಿ ರಿಮೋಟ್ ಜಗಳ: ಮಗನನ್ನೇ ಹತ್ಯೆಗೈದ ತಂದೆ!
– 2 ಖಾಸಗಿ ಬಸ್ಗಳಿಗೆ ಬೆಂಕಿ ತಗುಲಿ ಸುಟ್ಟು ಭಸ್ಮ
– ಅಡುಗೆ ಎಣ್ಣೆ ತುಂಬಿದ ಲಾರಿ ಪಲ್ಟಿ:ಎಣ್ಣೆ ಒಯ್ಯೋಕೆ ಮುಗಿಬಿದ್ದ ಜನ
– ಆನ್ಲೈನ್ ವೇಶ್ಯಾವಾಟಿಕೆ: 6 ಮಂದಿ ಅರೆಸ್ಟ್
– ಆಹಾರ ತಜ್ಞ ಕೆ.ಸಿ.ರಘು ಕ್ಯಾನ್ಸರ್ ರೋಗಕ್ಕೆ ಬಲಿ
NAMMUR EXPRESS NEWS
ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಕೂರಿನ ಎನ್ ಎಂಎಸ್ ಬಡಾವಣೆಯಲ್ಲಿ ಟಿವಿ ರಿಮೋಟ್ ವಿಚಾರಕ್ಕೆ ಇಬ್ಬರು ಮಕ್ಕಳ ನಡುವೆ ಜಗಳ ನಡೆದಿದ್ದು, ಇದರಿಂದ ಕೋಪಗೊಂಡ ತಂದೆ ಮಗನನ್ನು ಕೊಲೆ ಮಾಡಿದ ಘಟನೆ ನಡೆದಿದೆ.
ಕೊಲೆಯಾದ ಬಾಲಕ ಚಂದ್ರಶೇಖರ್ (16) ಎಂದು ತಿಳಿದುಬಂದಿದ್ದು, ತಂದೆ ಲಕ್ಷ್ಮಣ ಬಾಬು ಎಂಬಾತ ಕೊಲೆ ಮಾಡಿದ್ದಾನೆ.ಅಣ್ಣ-ತಮ್ಮಟಿವಿ ರಿಮೋಟ್ ಗಾಗಿ ಗಲಾಟೆ ಮಾಡುತ್ತಿದ್ದರು. ಈ ವೇಳೆ ತಂದೆ ಕೋಪಗೊಂಡು ಕತ್ತರಿಯಿಂದ ಮಗನಿಗೆ ಹೊಡೆದಿದ್ದಾರೆ.ಕಿವಿ ಭಾಗದಲ್ಲಿ ತೀವ್ರ ರಕ್ತಸ್ರಾವವಾಗಿ ಬಾಲಕ ಮೃತಪಟ್ಟಿದ್ದಾನೆ. ಸ್ಥಳಕ್ಕೆ ಪಿಎಸ್ಐ ಪಾಂಡುರಂಗ ಭೇಟಿ ನೀಡಿ ಪರಿಶೀಲನೆ ನಡೆಸಿದರು.
2 ಖಾಸಗಿ ಬಸ್ಗಳಿಗೆ ಬೆಂಕಿ ತಗುಲಿ ಸುಟ್ಟು ಭಸ್ಮ
ಅಕ್ಕಪಕ್ಕದಲ್ಲಿ ನಿಂತಿದ್ದ ಎರಡು ಬಸ್ಗಳು ಬೆಂಕಿಯ ಕೆನ್ನಾಲೆಗೆಯಿಂದ ಸಂಪೂರ್ಣ ಸುಟ್ಟು ಕರಕಲಾಗಿವೆ. ಹೀಗಾಗಿ ದಟ್ಟವಾದ ಹೊಗೆ ಆವರಿಸಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ನಂತರ ಅಗ್ನಿ ಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ದೌಡಾಯಿಸಿ ಬೆಂಕಿಯನ್ನು ನಂದಿಸುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ. ಖಾಸಗಿ ಕಂಪನಿಗೆ ಸೇರಿದ ಎರಡು ಸ್ತ್ರೀಪರ್ ಬಸ್ಗಳಿಗೆ ಬೆಂಕಿ ತಗುಲಿ ಧಗಧಗಿಸಿ ಸುಟ್ಟು ಕರಗಲಾದ ಘಟನೆ ಕಲಬುರಗಿ ನಗರದ ಹಾಗರಗಾ ರಸ್ತೆಯ ಮಹೆಫಿಲ್ ಎ ಖಾಸ್ ಡಾಬಾದ ಬಳಿ ಶನಿವಾರ ನಡೆದಿದೆ.
ಅಡುಗೆ ಎಣ್ಣೆ ತುಂಬಿದ ಲಾರಿ ಪಲ್ಟಿ: ಮುಗಿಬಿದ್ದ ಜನ
ವಿಜಯನಗರ: ಅಡುಗೆ ಎಣ್ಣೆ ತುಂಬಿದ್ದ ಲಾರಿ, ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿ ನಡುರಸ್ತೆಯಲ್ಲೇ ಬಿದ್ದಿರುವ ಘಟನೆ ವಿಜಯನಗರದ ಕೂಡ್ಲಿಗಿಯ ಬಣವಿಕಲ್ಲು ಗ್ರಾಮದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಘಟನೆ ನಡೆದಿದೆ.
ಅಡುಗೆ ಎಣ್ಣೆ ತುಂಬಿದ್ದ ಲಾರಿ ಕೂಡ್ಲಿಗಿ ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿತ್ತು. ಈ ಲಾರಿ ಚಾಲಕ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಅದೃಷ್ಟವಶಾತ್ ಲಾರಿ ಚಾಲಕ, ಕ್ಲಿನರ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ ಲಾರಿ ಒಳಗಿದ್ದ ಅಡುಗೆ ಎಣ್ಣೆ ಮಾತ್ರ ರಸ್ತೆ ಪಾಲಾಗಿದೆ.ಹೆದ್ದಾರಿ ಪಕ್ಕದಲ್ಲಿ ಅಪಾರ ಪ್ರಾಮಾಣ ಅಡುಗೆ ಎಣ್ಣೆ ಹರಿದು ಬಂದಿದೆ. ಇದನ್ನು ಗಮನಿಸಿದ ಜನ ಲಾರಿಯಲ್ಲಿದ್ದ ಎಣ್ಣೆ ತುಂಬಲು ಕೊಡ, ಕ್ಯಾನ್ ಹಿಡಿದು ಮುಗಿಬಿದ್ದಿದ್ದಾರೆ. ಹೆದ್ದಾರಿ ಪಕ್ಕದಲ್ಲಿ ಹರಿದ ಅಪಾರ ಪ್ರಾಮಾಣ ಅಡುಗೆ ಎಣ್ಣೆ ಹರಿದು ಬಂದಿದೆ. ಅಡುಗೆ ಎಣ್ಣೆ ತುಂಬಲು ಮುಂದಾಗಿದ್ದ ಜನರನ್ನ ಚದುರಿಸಲು ಹರಸಾಹಸ ಪಟ್ಟಿದ್ದಾರೆ.
ಆನ್ಲೈನ್ ವೇಶ್ಯಾವಾಟಿಕೆ: ಆರು ಮಂದಿಗೆಶಿಕ್ಷೆ
ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆನ್ ಲೈನ್ ವೇಶ್ಯಾವಾಟಿಕೆ ನಡೆಸುತ್ತಿದ್ದ 6 ಆರೋಪಿಗಳನ್ನು ಬಂಧಿಸಿದ ಘಟನೆ ನಡೆದಿದೆ. ಖಚಿತ ಮಾಹಿತಿ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಪೊಲೀಸ್ ಇನ್ಸ್ಪೆಕ್ಟರ್ ಹನುಮಂತರಾಯ ಭರ್ಜರಿ ಕಾರ್ಯಾಚರಣೆ ನಡೆಸಿ ಅರೆಸ್ಟ್ ಮಾಡಿದ್ದಾರೆ. ಬಂಧಿತರು ಮಂಜುನಾಥ್, ಶಿವರಾಜ್, ಉಮೇಶ್, ಬಸವರಾಜ್, ರಾಯ, ಪ್ರದೀಪ್ ಎಂದು ತಿಳಿದುಬಂದಿದೆ. ವೆಬ್ ಸೈಟ್ ಮೂಲಕ ಸುಂದರ ಯುವತಿಯರ ಫೋಟೊಗಳನ್ನು ಅಪ್ಲೋಡ್ ಮಾಡಿ, ಮೊಬೈಲ್ ನಂಬರ್ಗಳ ಮೂಲಕ ಲಾಗಿನ್ ಆಗುವ ಗಿರಾಕಿಗಳನ್ನು ಸೆಳೆಯುತ್ತಿದ್ದರು.
ಆಹಾರ ತಜ್ಞ ಕೆ.ಸಿ.ರಘು ಇನ್ನಿಲ್ಲ
ಮಾಧ್ಯಮ ಲೋಕದಲ್ಲಿ ತಮ್ಮದೇ ಛಾಪು ಮೂಡಿಸಿ ಆಹಾರ ಕ್ರಮದ ಕುರಿತು ಟಿಪ್ಸ್ ನೀಡುತ್ತಿದ್ದ ಹೆಸರಾಂತರ ಆಹಾರ ತಜ್ಞ ಕೆ.ಸಿ.ರಘು ಅನಾರೋಗ್ಯದಿಂದ ನಿಧನ ಹೊಂದಿದ್ದಾರೆ. ಈ ಕುರಿತು ರಘು ಅವರ ಪತ್ನಿ ಆಶಾ ರಘು ಮಾಹಿತಿ ನೀಡಿದ್ದಾರೆ. ಕೆ.ಸಿ.ರಘು ಬೆಳಗಿನ ಜಾವ ಸುಮಾರು 7.30 ಕ್ಕೆ ಅಗಲಿದ್ದಾರೆ. ರಘು ಅವರು ಲಂಗ್ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎಂದು ತಿಳಿದು ಬಂದಿದೆ. ಪ್ರಿಸ್ಟೀನ್ ಆರ್ಗ್ಯಾನಿಕ್ಸ್ ಎಂಬ ಸಂಸ್ಥೆಯಲ್ಲಿ ನವಜಾತ ಶಿಶುಗಳಲ್ಲಿ ಕಂಡು ಬರುವ ಮಾರಕ ಕಾಯಿಲೆಗಳಿಗೆ ಪೌಷ್ಟಿಕಾಂಶದ ಪರಿಹಾರವನ್ನು ಸಂಶೋಧನೆಯಿಂದ ಕಂಡು ಹಿಡಿದಿದ್ದರು. ಬಳಿಕ ದೇಶಾದ್ಯಂತ ಹಾಗೂ ವಿದೇಶಕ್ಕೂ ಒದಗಿಸುತ್ತಿದ್ದರು. ಈ ಕಾರ್ಯದಿಂದ ಸುಮಾರು 5 ಸಾವಿರ ನವಜಾತ ಶಿಶುಗಳನ್ನು ಸಾವಿನ ದವಡೆಯಿಂದ ಪಾರು ಮಾಡಲಾಗಿದೆ ಎನ್ನಲಾಗಿದೆ.