– ಅಂಕೋಲಾದ ನದಿಯಲ್ಲಿ ಮೊಸಳೆ!
– ಕಡೂರಲ್ಲಿ ತಹಸೀಲ್ದಾರ್ ಆಗಿದ್ದ ಉಮೇಶ್ ಅರೆಸ್ಟ್
– ಶಿವಮೊಗ್ಗ: ಮನೆಯಲ್ಲಿದ್ದ ಚಿನ್ನ ಬಸ್ ಚಾಲಕನಿಗೆ ತಂದು ಕೊಟ್ಟ ಬಾಲಕಿ!
NAMMUR EXPRESS NEWS
ಚಿಕ್ಕಮಗಳೂರು: ಕಡೂರಿನಲ್ಲಿ ಈ ಹಿಂದೆ ತಹಸೀಲ್ದಾರ್ ಆಗಿದ್ದ ಉಮೇಶ್ ರವರನ್ನು ಸಾವಿರಾರು ಎಕರೆ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿದ್ದ ಆರೋಪದಡಿಯಲ್ಲಿ ಅರೆಸ್ಟ್ ಮಾಡಲಾಗಿದೆ. ಮೀಸಲು ಅರಣ್ಯ ಜಾಗವನ್ನು 8 ಜನರಿಗೆ ಉಮೇಶ್ ತಹಸೀಲ್ದಾರ್ ಆಗಿದ್ದ ವೇಳೆಯಲ್ಲಿ ಪರಭಾರೆ ಮಾಡಿದ್ದರು. ಕಡೂರು ಠಾಣೆಯಲ್ಲಿ ಉಮೇಶ್ ಸೇರಿ ಮೂವರ ವಿರುದ್ಧ ಕೇಸ್ ದಾಖಲಾಗಿತ್ತು. ಕಡೂರಿನಲ್ಲಿ 3500 ಎಕರೆ ಭೂಮಿಯನ್ನ ಉಮೇಶ್ ಅಕ್ರಮವಾಗಿ ಮಂಜೂರು ಮಾಡಿದ್ದರು. ಇತ್ತೀಚೆಗೆ ಪ್ರಮೋಷನ್ ಆಗಿಸಾವಿರಾರು ಎಕರೆ ಭೂಮಿಯನ್ನ ಅಕ್ರಮವಾಗಿ ಮಂಜೂರು ಮಾಡಿದ್ದ ಆರೋಪದಡಿಯಲ್ಲಿ ಉಮೇಶ್ ರವರನ್ನು ಬಂಧಿಸಲಾಗಿದೆ.
ಸೇತುವೆ ಬಳಿ ಬೃಹತ್ ಗಾತ್ರದ ಮೊಸಳೆ ಪ್ರತ್ಯಕ್ಷ!
ಮೊಸಳೆ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಜನರು ನದಿಗಿಳಿಯುವ ಪ್ರಯತ್ನ ಮಾಡಬಾರದೆಂದು ಉತ್ತರ ಕನ್ನಡ ಜಿಲ್ಲೆ ಅಂಕೋಲ ತಾಲ್ಲೂಕು ಆಡಳಿತ ಎಚ್ಚರಿಗೆ ನೀಡಿದೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲ್ಲೂಕಿನಲ್ಲಿ ಹಿಲ್ಲೂರು ಹೆಸರಿನ ಗ್ರಾಮವೊಂದಿದ್ದು ಅಲ್ಲಿಮ ಹೊಸಕಂಬಿ ಸೇತುವೆ ಬಳಿ ಬೃಹತ್ ಗಾತ್ರದ ಮೊಸಳೆಯೊಂದುಕಾಣಿಸಿಕೊಂಡಿದೆ. ಸ್ಥಳೀಯರು ಹೇಳುವ ಪ್ರಕಾರ ಮೊಸಳೆ ಸುಮಾರು 7 ಅಡಿಗಳಷ್ಟು ಉದ್ದವಿದೆ. ಈ ಮೊಸಳೆ ಕಳೆದ ವಾರ ಕಾರವಾರ ಬಳಿಯ ಕದಂಬ ನೌಕಾನೆಲೆ ಬಳಿ ಕಾಣಿಸಿಕೊಂಡಿತ್ತು ಮತ್ತು ಅದನ್ನು ಹಿಡಿದು ಗಂಗಾವಳ ನದಿಯಲ್ಲಿ ಬಿಡಲಾಗಿತ್ತು. ಅದೀಗ ಹೊಸಕಂಬಿ ಸೇತುವೆ ಬಳಿ ಕಾಣಿಸಿಕೊಂಡಿದೆಯೆಂದು ಜನ ಹೇಳುತ್ತಿದ್ದಾರೆ.
ಚಾಲಕನಿಗೆ ಚಿನ್ನಾಭರಣ ಕೊಟ್ಟ ಬಾಲಕಿ!
ಅಚ್ಚರಿಯ ರೀತಿಯಲ್ಲಿ ಬಾಲಕಿಯೋರ್ವಳು ತನಗೆ ಪರಿಚಯನಾದ ಬಸ್ ಚಾಲನಿಗೆ ಮನೆಯಲ್ಲಿದ್ದ 2 ಲಕ್ಷದ 25 ಸಾವಿರ ರೂ ಮೌಲ್ಯದ ಚಿನ್ನಾಭರಣ ಮತ್ತು ನಗದು ನೀಡಿದ ಬಗ್ಗೆ ತಾಯಿ ದೂರು ದಾಖಲಿಸಿದ್ದಾರೆ. 6 ತಿಂಗಳ ಹಿಂದೆ ಈಸೂರು ಗ್ರಾಮಕ್ಕೆ ತೆರಳಲು ಖಾಸಗಿ ಬಸ್ ನಲ್ಲಿ ಪ್ರಯಾಣಿಸುವ ವೇಳೆ ಸುನೀಲ ಎಂಬ ಚಾಲಕ ಎಸ್ ಎಸ್ ಎಲ್ ಸಿ ಓದುತ್ತಿರುವ ಬಾಲಕಿಗೆ ಪರಿಚಯವಾಗಿರುತ್ತಾನೆ. ಪರಿಚಯವಾದ ಚಾಲಕ ಮನೆಯ ಬಳಿ ಮಹಿಳೆಯೋರ್ವಳ ಜೊತೆಗೆ ಬಂದು ಲಾರಿ ಖರೀದಿಸಬೇಕು ಹಣ ಬೇಕಿದೆ.
ಆತನ ಮಾತಿಗೆ ಮರುಳಾದ ಬಾಲಕಿ ಮನೆಯಲ್ಲಿದ್ದ 50 ಸಾವಿರ ಕ್ಯಾಶ್ 15 ಗ್ರಾಂ ಚಿನ್ನ ಮತ್ತು 5 ಗ್ರಾಂ ಚಿನ್ನದ ಉಂಗುರ ಕೊಟ್ಟು ಸಹಕರಿಸಿದ್ದಾಳೆ. ಅಲ್ಲದೆ ಮತ್ತೆ ಬಾಲಕಿ ಶಾಲೆಯಿಂದ ಮನೆಗೆ ಬರುವ ವೇಳೆ ಖರೀದಿಗೆ ಹಣ ಸಾಕಾಗುತ್ತಿಲ್ಲವೆಂದು ಹೇಳಿದ್ದಾನೆ. ಆ ವೇಳೆ ಕುತ್ತಿಗೆಯಲ್ಲಿದ್ದ ಚಿನ್ನಾಭರಣವನ್ನ ಬಾಲಕಿ ತೆಗೆದುಕೊಟ್ಟಿದ್ದಾಳೆ.ಈ ಘಟನೆ ಭಾರೀ ಕುತೂಹಲ ಮೂಡಿದೆ.