ಕೆಲಸ ಸಿಗದಿದ್ದಕ್ಕೆ ಕಳ್ಳನಾದ ಎಂಜಿನಿಯರ್!
– ನೋಕಿಯಾ ಕಂಪನಿ ಕೆಲಸ ಮಾಡಿದ್ದ ಟೆಕ್ಕಿ
– ಬೆಳಗ್ಗೆ ಬೀಗ ಹಾಕಿದ ಮನೆಗಳ ಗುರುತು: ರಾತ್ರಿ ಕಳ್ಳತನ
– ಜಾಮೀನು ಕೂಡಿಸಲು ವಕೀಲರನ್ನೇ ಕಿಡ್ನಾಪ್ ಮಾಡಿದ ರೌಡಿಗಳು!
NAMMUR EXPRESS NEWS
ಬೆಂಗಳೂರು: ಮನೆ ಕಳವು ಮಾಡುತ್ತಿದ್ದ ನೋಕಿಯಾ ಕಂಪೆನಿಯ ಮಾಜಿ ನೌಕರ, ಎಂಜಿನಿಯರ್ ನನ್ನು ಬೆಂಗಳೂರು ಬೈಯಪ್ಪನಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ತಮಿಳುನಾಡಿನ ಮಹಾಮನಿ (37) ಬಂಧಿತ. ಆರೋಪಿಯಿಂದ 29 ಲಕ್ಷ ರೂ. ಮೌಲ್ಯದ 512 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ. ತಮಿಳುನಾಡು ಮೂಲದ ಆರೋಪಿ ಎಲೆಕ್ಟ್ರಾನಿಕ್ ಎಂಜಿನಿಯರಿಂಗ್ (ಬಿಇ) ವ್ಯಾಸಂಗ ಮಾಡಿದ್ದು, ಚೆನ್ನೈನ ನೋಕಿಯಾ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 2019ರಲ್ಲಿ ಕಂಪೆನಿಯವರು ಕೆಲಸದಿಂದ ತೆಗೆದು ಹಾಕಿದ ಬಳಿಕ ಯಾವುದೇ ಕೆಲಸ ಸಿಗದಿದ್ದರಿಂದ ಮನೆ ಕಳವು ಮಾಡುವುದನ್ನು ರೂಢಿಗತ ಮಾಡಿಕೊಂಡಿದ್ದ. ಬೆಳಗ್ಗೆ ವೇಳೆ ಬೀಗ ಹಾಕಿದ ಮನೆಗಳನ್ನು ಗುರುತಿಸಿ ರಾತ್ರಿ ವೇಳೆ ಕಬ್ಬಿಣದ ರಾಡ್ನಿಂದ ಮನೆ ಬಾಗಿಲು ಮೀಟಿ ಕಳವು ಮಾಡುತ್ತಿದ್ದ. ಈತನ ವಿರುದ್ಧ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡಿನ ವಿವಿಧ ಠಾಣೆಗಳಲ್ಲಿ ದರೋಡೆ, ಕನ್ನ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎಂದು ಪೊಲೀಸರು ಹೇಳಿದರು.
2019ರಲ್ಲಿ ಠಾಣೆ ವ್ಯಾಪ್ತಿಯಲ್ಲಿ ಆರೋಪಿ ಎರಡು ಕಳವು ಕೃತ್ಯ ಎಸಗಿದ್ದ ಬಳಿಕ ನಗರದ ವಿವಿಧೆಡೆ ಕಳವು ಮಾಡಿ 2020ರಲ್ಲಿ ಎಚ್ಎಸ್ ಆರ್ ಲೇಔಟ್ ಠಾಣೆ ಪೊಲೀಸರಿಗೆ ಸಿಕ್ಕಿಬಿದ್ದಿದ್ದ. ಕಳೆದ ಎರಡು ವರ್ಷಗಳಿಂದ ಜೈಲಿನಲ್ಲಿದ್ದ. ಹಳೇ ಪ್ರಕರಣದ ಆರೋಪಿಯ ಬಗ್ಗೆ ಮಾಹಿತಿ ಸಂಗ್ರಹಿಸಿ ವಾರೆಂಟ್ ಪಡೆದು, ಪೊಲೀಸ್ ವಶಕ್ಕೆ ಪಡೆಯಲಾಗಿತ್ತು. ಈತನ ಮಾಹಿತಿ ಮೇರೆಗೆ ಚಿನ್ನಾಭರಣವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಹೇಳಿದರು. ಠಾಣಾಧಿಕಾರಿ ಪ್ರಶಾಂತ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆದಿದೆ.
ಶಾಲೆಯ ಬಿಸಿಯೂಟದಲ್ಲಿ ಕೊಳೆತ ತರಕಾರಿ !
ಶಾಲೆಯ ಬಿಸಿಯೂಟಕ್ಕೆ ಕೊಳೆತ ತರಕಾರಿ ಬಳಸಿದ ಹಿನ್ನೆಲೆಯಲ್ಲಿ ಸರಕಾರಿ ಪ್ರಾಥಮಿಕ ಮಾದರಿ ಶಾಲೆ ಮುಖ್ಯಶಿಕ್ಷಕಿಯೋರ್ವರಿಗೆ ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಕಾರಣ ಕೇಳಿ ನೋಟಿಸ್ ನೀಡಿದ್ದಾರೆ ಎನ್ನಲಾಗಿದೆ.
ಶಾಲೆಯಲ್ಲಿ ಕೊಳೆತ ತರಕಾರಿ ಬಳಸಿ ಬಿಸಿಯೂಟ ಬಡಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ್ ಹಾಗೂ ಅಕ್ಷರ ದಾಸೋಹ ತಂಡ ಶಾಲೆಗೆ ಭೇಟಿ ನೀಡಿ ಚರ್ಚಿಸಿದರು ಎನ್ನಲಾಗಿದೆ.
ಜಾಮೀನು ಕೂಡಿಸಲು ವಕೀಲರನ್ನೇ ಕಿಡ್ನಾಪ್ ಮಾಡಿದ ರೌಡಿಗಳು!
ರೌಡಿಗಳು ತಮ್ಮ ಕಡೆಯವರ ಜಾಮೀನಿಗಾಗಿ ವಕೀಲರನ್ನೇ ಕಿಡ್ರಾಪ್ ಮಾಡಿದ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.
ಜೈಲಿನಲ್ಲಿರುವ ತಮ್ಮ ಕಡೆಯ ಎಂಟು ಮಂದಿಗೆ ಜಾಮೀನು ಕೊಡಿಸಲು ಮೂರು ಜನ ರೌಡಿಶೀಟರ್ ಗಳು ವಕೀಲರಾದ ಗಿರಿಧರ್ ಅವರನ್ನು ಕಿಡ್ನಾಪ್ ಮಾಡಿದ್ದಲ್ಲದೇ ವಕೀಲರಿಂದಲರ ಹತ್ತುಸಾವಿರ ರೂಪಾಯಿ ಹಣ ಕಸಿದುಕೊಂಡಿದ್ದಾರೆ. ವಕೀಲ ಗಿರಧರ್ ಅವರನ್ನು ಅವರ ಕಾರಿನಲ್ಲೇ ಅಪಹರಿಸಿ ಜೈಲಿನಲ್ಲಿರುವ ತಮ್ಮ ಕಡೆಯ ಎಂಟು ಜನರಿಗೂ ನೀವು ಬೇಲ್ ವ್ಯವಸ್ಥೆ ಮಾಡಬೇಕು ಎಂದು ಹೇಳಿದ್ದಲ್ಲದೆ ವಕೀಲರ ಬಟ್ಟೆ ಬಿಚ್ಚಿಸಿ ಕಾರಿನ ಜಾಕ್ ರಾಡ್ ಹಾಗೂ ಸ್ನಾನರ್ ಬಳಸಿ ಹಲ್ಲೆ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ.
ನೀವು ಐದು ಲಕ್ಷ ರೂ. ಹಣ ತಂದು ಕೊಡಬೇಕು ಮತ್ತೆ ಈ ವಿಚಾರವನ್ನು ಪೊಲೀಸರಿಗೆ ತಿಳಿಸಿದರೆ ನಿಮ್ಮನ್ನು ಕೊಲ್ಲುವುದಾಗಿ ಬೆದರಿಕೆಯನ್ನೂ ಒಡ್ಡಿದ್ದಾರಂತೆ. ಬಳಿಕ ಗಿರಿಧರ್ ಅವರಿಂದ 10 ಸಾವಿರ ರೂ. ಕಸಿದುಕೊಂಡು ಬಿಟ್ಟು ಕಳಿಸಿದ್ದಾರೆ. ವಕೀಲರ ಮೇಲೆ ಹಲ್ಲೆ ಮತ್ತು ಹಣ ದೊಚಿದ ಪ್ರಮುಖ ಆರೋಪಿಗಳು ರೌಡಿಶೀಟರ್ ಗಳಾದ ರಾಜೇಶ್ ಅಲಿಯಾಸ್ ಕೋಳಿ ರಾಜೇಶ್, ಹರ್ಷಿತ್ ಅಲಿಯಾಸ್ ಆಪಲ್, ಜಾನ್ ಹಾಗೂ ಭರತ್ ವಿರುದ್ಧ ಚೆನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ ಕೂಡಲೇ ಆರೋಪಿಗಳ ಬಂಧನಕ್ಕೆ ಕಾರ್ಯಾಚರಣೆಗೆ ಮುಂದಾದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆಂದು ತಿಳಿದುಬಂದಿದೆ.
ಇದನ್ನೂ ಓದಿ : ಯುವ ನಿಧಿ ಗ್ಯಾರಂಟಿ ಯೋಜನೆಗೆ ಯಾರು ಅರ್ಹರು?
HOW TO APPLY : NEET-UG COUNSELLING 2023