ಬೀಚ್ನಲ್ಲಿ ಜೋಡಿ ಆತ್ಮಹತ್ಯೆ!
– ಬೆಂಗಳೂರಿನಿಂದ ಆಗಮಿಸಿ ಸಮುದ್ರಕ್ಕೆ ಹಾರಿದ ಜೋಡಿ
– ಶರಣ್ ಪಂಪ್ ವೆಲ್ ವಿರುದ್ದ ಕೇಸ್!
– ಶಾಂತಿಭಂಗ ಹಾಗೂ ಕೋಮು ಪ್ರಚೋದನೆ ಪ್ರಕರಣ ದಾಖಲು
NAMMUR EXPRESS NEWS
ಮಂಗಳೂರು: ಪಣಂಬೂರು ಬೀಚ್ನಲ್ಲಿ ಜೋಡಿ ಶವ ಪತ್ತೆಯಾದ ಘಟನೆ ನಡೆದಿದ್ದು, ಮಧ್ಯ ವಯಸ್ಸಿನ ಗಂಡಸು ಮತ್ತು ಮಹಿಳೆ ಸಮುದ್ರಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಮೃತರನ್ನು ಲಕ್ಷ್ಮಿ(40) ಮತ್ತು ಬೋರಲಿಂಗಯ್ಯ (45) ಎಂದು ಗುರುತ್ತಿಸಲಾಗಿದ್ದು, ಇವರು ಬೆಂಗಳೂರು ಮೂಲದವರು ಎನ್ನಲಾಗಿದೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆ ಪ್ರಕರಣ ಎಂದು ಶಂಕಿಸಲಾಗಿದೆ. ಬೆಂಗಳೂರು ಮೂಲದವರಾದ ಲಕ್ಷ್ಮಿ ಮತ್ತು ಬೋರಲಿಂಗಯ್ಯ ಬುಧವಾರ ಬೆಂಗಳೂರಿನಿಂದ ಆಗಮಿಸಿದ್ದು, ಮುಂಜಾನೆ 5 ಗಂಟೆ ಸುಮಾರಿಗೆ ಪಣಂಬೂರಿಗೆ ಬಂದು ಸಮುದ್ರಕ್ಕೆ ಧುಮುಕಿದ್ದಾರೆ ಎನ್ನಲಾಗಿದೆ. ಸಮುದ್ರಕ್ಕೆ ಹಾರುವ ಮುಂಚೆ ತಮ್ಮ ಮೊಬೈಲ್ ಮತ್ತಿರ ವಸ್ತುಗಳನ್ನು ತೀರದಲ್ಲೇ ಬಿಟ್ಟಿದ್ದರಿಂದ ಪೊಲೀಸರು ಸಂಬಂಧಿಕರನ್ನು ಸಂಪರ್ಕ ಮಾಡಿ ಮಾಹಿತಿ ನೀಡಿದ್ದಾರೆ. ಇಬ್ಬರ ಶವಗಳನ್ನು ಸ್ಥಳೀಯರ ಸಹಕಾರದಿಂದ ಮೇಲೆತ್ತಿ ಆಸ್ಪತ್ರೆ ಶವಾಗಾರದಲ್ಲಿ ಇಡಲಾಗಿದೆ. ಪಣಂಬೂರು ಪೊಲೀಸರು ಈ ಬಗ್ಗೆ ತನಿಖೆ ನಡಸುತ್ತಿದ್ದಾರೆ.
ಶರಣ್ ಪಂಪ್ ವೆಲ್ ವಿರುದ್ದ ಕೇಸ್!
– ಶಾಂತಿಭಂಗ ಹಾಗೂ ಕೋಮು ಪ್ರಚೋದನೆ ಪ್ರಕರಣ ದಾಖಲು
NAMMUR EXPRESS NEWS
ಮಂಗಳೂರು: ಮಂಗಳದೇವಿ ದೇವಸ್ಥಾನ ವಠಾರದಲ್ಲಿ ವ್ಯಾಪಾರಕ್ಕೆ ಸಂಬಂಧಿಸಿದ ಹೇಳಿಕೆ ನೀಡಿರುವ ವಿಹಿಂಪ ಪ್ರಾಂತ್ಯ ಸಹಕಾರ್ಯದರ್ಶಿ ಶರಣ್ ಪಂಪ್ವೆಲ್ ವಿರುದ್ಧ ಶಾಂತಿಭಂಗ ಹಾಗೂ ಕೋಮು ಪ್ರಚೋದನೆ ಆರೋಪದಡಿ ಪ್ರಕರಣ ದಾಖಲಾಗಿದೆ. ಮಂಗಳಾದೇವಿ ದೇವಸ್ಥಾನದ ನವರಾತ್ರಿ ಜಾತ್ರಾ ಮಹೋತ್ಸವದಲ್ಲಿ ಮುಸ್ಲಿಮರ ವ್ಯಾಪಾರಕ್ಕೆ ನಿರ್ಬಂಧಿಸುವಂತೆ ಹಿಂದೂ ಸಂಘಟನೆಗಳು ಕರೆ ನೀಡಿತ್ತು. ಈ ಹಿನ್ನಲೆ ವಿವಾದಕ್ಕೆ ಕಾರಣವಾಗಿತ್ತು. ಬಳಿಕ ಮಧ್ಯೆ ಪ್ರವೇಶಿಸಿದ ಜಿಲ್ಲಾಡಳಿತ ಹಿಂದೂಯೇತರರಿಗೂ ಅಂಗಡಿ ಇಡಲು ಅನುಮತಿ ನೀಡಲಾಗಿತ್ತು. ಹೀಗಾಗಿ ಹಿಂದೂ ವ್ಯಕ್ತಿಗಳ ಅಂಗಡಿಗಳ ಮೇಲೆ ಕೇಸರಿ ಧ್ವಜ ಇಟ್ಟು ಎಲ್ಲಾ ಹಿಂದುಗಳು ಸಾಮಗ್ರಿಗಳನ್ನು ಹಿಂದುಗಳ ಅಂಗಡಿಗಳಿಂದಲೇ ಪಡೆದುಕೊಳ್ಳುವಂತೆ ಹೇಳಿಕೆ ನೀಡಿದ್ದರು. ಅ.16ರಂದು ಮಂಗಳಾದೇವಿಯ ರಥಬೀದಿಯ ಹಿಂದೂಗಳ ಸ್ಟಾಲ್ಗಳಿಗೆ ವಿಶ್ವ ಹಿಂದೂ ಪರಿಷತ್ ಭಗವಾನ್ಧ್ಬಜ ಕಟ್ಟಿದ್ದರು. ಸಾಮರಸ್ಯಕ್ಕೆ ಧಕ್ಕೆ ಮಾಡಿದ್ದಾರೆ ಎಂದು ಪೊಲೀಸರು ಶರಣ್ ಪಂಪ್ ವೆಲ್ ವಿರುದ್ದ ಶಾಂತಿಭಂಗ ಹಾಗೂ ಕೋಮು ಪ್ರಚೋದನೆ ಆರೋಪದಡಿ , ಐಪಿಸಿ 153A, 34 ಅಡಿಯಲ್ಲಿ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.