ಎಲ್ಲೆಲ್ಲೂ ಮನೆ ಮಾಡಿದ ವರಮಹಾಲಕ್ಷ್ಮಿ ಹಬ್ಬದ ಸಡಗರ!
– ದೇವಸ್ಥಾನಗಳಲ್ಲಿ ವಿಶೇಷ ಪೂಜೆ: ಮುಂಜಾನೆಯಿಂದ ಭಕ್ತರ ಕ್ಯೂ
– ಅಂಗಡಿ, ಮನೆ, ಕಚೇರಿಗಳಲ್ಲಿ ವಿಶೇಷ ಪೂಜೆ
NAMMUR EXPRESS NEWS
ರಾಜ್ಯದಲ್ಲಿ ವರಮಹಾಲಕ್ಷ್ಮಿ ಹಬ್ಬದ ಸಡಗರ ಎಲ್ಲೆಡೆ ಕಂಡು ಬರುತ್ತಿದೆ. ಮಂಗಳಕರ ವಸ್ತುಗಳನ್ನು ತಂದರೆ ಮನೆಯಲ್ಲಿ ಸಂಪತ್ತು ತುಂಬಿ ತುಳುಕುತ್ತೆ ಎಂಬುದು ಪ್ರತೀತಿ. ಹೀಗಾಗಿ ದೇಗುಲಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ. ಮುಂಜಾನೆಯಿಂದಲೇ ದೇವಾಲಯಗಳಲ್ಲಿ ಭಕ್ತರು ಸರದಿ ಸಾಲಲ್ಲಿ ನಿಂತು ದೇವರ ದರ್ಶನ ಪಡೆಯುತ್ತಿದ್ದಾರೆ.
ಹಿಂದೂ ಧರ್ಮದ ಪ್ರಕಾರ ಲಕ್ಷ್ಮಿ ದೇವರನ್ನು ಸಂಪತ್ತಿನ ಪ್ರಮುಖ ದೇವತೆಯಾಗಿ ಆರಾಧಿಸುವುದು ಮೊದಲಿನಿಂದಲೂ ರೂಢಿಯಲ್ಲಿದ್ದು, ಲಕ್ಷ್ಮಿಯನ್ನು ಆರಾಧಿಸುವುದರಿಂದ ಸಕಲ ಸಂಪತ್ತು ಒದಗಿಬರಲಿದೆ ಎಂಬ ನಂಬಿಕೆ ಇದೆ. ಇಂದು ಕರ್ನಾಟಕದ ಮೂಲೆ ಮೂಲೆಯಲ್ಲೂ ವರಮಹಾಲಕ್ಷ್ಮಿ ಹಬ್ಬದ ಸಂಭ್ರಮ ಮನೆ ಮಾಡಿದೆ.
ಇಳಿಕೆಯಾದ ಚಿನ್ನದ ದರ
ವರಮಹಾಲಕ್ಷ್ಮಿ ಹಬ್ಬದ ಮಹಿಳೆಯರಿಗೆ ಚಿನ್ನದ ದರ ಕುಸಿತ ಕಂಡಿದ್ದು ಖುಷಿ ಕೊಟ್ಟಿದೆ.ಮದುವೆ ಮತ್ತು ಗೃಹ ಪ್ರವೇಶ ಸೇರಿ ಹವು ಶುಭ ಕಾರ್ಯಗಳು ಶುರುವಾಗಿವೆ.
ಚಿನ್ನದ ಅಂಗಡಿಗಳು, ಬಟ್ಟೆ ಅಂಗಡಿಗಳಲ್ಲಿ ಜನ ಹೆಚ್ಚಾಗಿದ್ದು ಕಂಡು ಬಂತು.
ಹೂವು, ಹಣ್ಣಿಗೆ ಭಾರೀ ಡಿಮ್ಯಾಂಡ್
ವರ ಮಹಾಲಕ್ಷ್ಮಿ ಹಬ್ಬದ ಅಂಗವಾಗಿ ಹಣ್ಣು, ಹೂವು ದರ ಹೆಚ್ಚಾಗಿದೆ. ಎಲ್ಲೆಡೆ ವ್ಯಾಪಾರ ಭರ್ಜರಿಯಾಗಿ ಕಂಡು ಬಂದಿತು.