- ಹಣದ ಆಸೆಗೆ ಜೀವ, ಜೀವನ ಹಾಳು: ಕೇಳೋರ್ಯಾರು?
- ಪೊಲೀಸ್ ಇಲಾಖೆ ಮೌನ: ಎಲ್ಲೆಲ್ಲೂ ಬೆಟ್ಟಿಂಗ್
NAMMUR EXPRESS NEWS
ಯುವ ಪೀಳಿಗೆ ಈಗ ಬರೀ ಫೋನ್ ಎಂಬ ಮಾಯಾಜಾಲದ ಒಳಗೆ ಸೇರಿ ತಮ್ಮ ಅಮೂಲ್ಯ ಬದುಕು ಹಾಳು ಮಾಡಿಕೊಳ್ಳುತ್ತಿದೆ.
ಮೊಬೈಲ್ ಕ್ರಿಕೆಟ್ ಬೆಟ್ಟಿಂಗ್, ಗೇಮ್ ಬೆಟ್ಟಿಂಗ್, ಫೋನ್ ಹುಚ್ಚಿಗೆ ಜೀವ, ಜೀವನ ಕಳೆದುಕೊಳ್ಳುತ್ತಿರುವ ಪ್ರಕರಣ ಹೆಚ್ಚಾಗಿದೆ.
ಉದ್ಯೋಗ ಮಾಡದೇ, ಇರುವ ಅವಕಾಶ ಬಳಸಿಕೊಳ್ಳದೆ ಕಡಿಮೆ ಸಮಯದಲ್ಲಿ ಹೆಚ್ಚೂ ದುಡ್ಡು ಮಾಡುವ ದುರಾಸೆಯಿಂದ ಬೆಟ್ಟಿಂಗ್ ದಂಧೆಗೆ ಬಿದ್ದು ಹಣ, ಅಸ್ತಿ ಪಾಸ್ತಿ ಕಳೆದುಕೊಂಡು ಬೀದಿಗೆ ಬೀಳುವ ಪ್ರಕರಣಗಳು ಹೆಚ್ಚಿವೆ. ಇಂತಹ ವ್ಯಕ್ತಿಗಳು ಬದುಕು ಹಾಳು ಮಾಡಿಕೊಳ್ಳುವ ಜೊತೆಗೆ ಸಮಾಜದಲ್ಲಿ ಘನತೆ ಗೌರವವನ್ನು ಕಳೆದುಕೊಂಡು ಬದುಕಲೂ ಆಗದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.
ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚಿಗೆ ತೀರ್ಥಹಳ್ಳಿ ತಾಲೂಕಿನ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ, ಪ್ರತಿ ನಿತ್ಯ ಹತ್ತಾರು ಮಂದಿ ಜೀವ ಕಳೆದುಕೊಳ್ಳುತ್ತಿದ್ದಾರೆ.
ಬೆಟ್ಟಿಂಗ್ ಪೊಲೀಸ್ ಇಲಾಖೆ ಮೌನ!?: ಉಡುಪಿ ಜಿಲ್ಲೆ ಸಾಲಿಗ್ರಾಮದಲ್ಲಿ ಕ್ರಿಕೆಟ್ ಬೆಟ್ಟಿಂಗ್ ವೇಳೆ ಕೋಟ ಪೊಲೀಸರ ದಾಳಿ ನಡೆಸಿ 5 ಮಂದಿಯ ಬಂಧನ ಮಾಡಿದ್ದು , 32 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆಡಿದ್ದಾರೆ. ಇದೊಂದು ಉದಾಹರಣೆ ಅಷ್ಟೇ ದಿನಕ್ಕೆ ಇಂಥಹ ಘಟನೆ ನಡೆಯುತ್ತಲೇ ಇರುತ್ತವೆ. ಯುವ ಜನತೆ ತಮ್ಮ ಕುಟುಂಬ, ಬದುಕಿನ ಬಗ್ಗೆ ಯೋಚಿಸದೆ ಶೋಕಿ ಜೀವನ ಹಾಗೂ ಹಣದ ಆಸೆಗೆ ಬಿದ್ದು ಎಲ್ಲವನ್ನು ಕಳೆದುಕೊಳ್ಳುತ್ತಿದ್ದಾರೆ.
ಸರ್ಕಾರ ಬ್ಯಾನ್ ಮಾಡದೇ ಬಡವರು ಬಲಿ!
ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಟ್ಟಿಂಗ್, ಆನ್ಲೈನ್ ಗೇಮಿಂಗ್ ಆಪ್ ಗಳನ್ನು ನಿಷೇದ ಮಾಡದೇ ಅವುಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿವೆ. ಇದರಿಂದ ಪ್ರತಿ ದಿನ ನೂರಾರು ಮಂದಿ ಬದುಕು ಕಳೆದುಕೊಳ್ಳುತ್ತಿದ್ದಾರೆ. ಭಾರತ ದೇಶದ ಅಮೂಲ್ಯ ಮಾನವ ಸಂಪನ್ಮೂಲ ಬೇಡದಕ್ಕೆ ವ್ಯರ್ಥವಾಗುತ್ತಿದೆ. ಕೂಡಲೇ ಸಂಬಂಧಪಟ್ಟವರು ಗಮನ ಹರಿಸಬೇಕಿದೆ.