ಹಿಂದೂಗಳ ಮೇಲೆ ದೌರ್ಜನ್ಯಕ್ಕೆ ಹೋರಾಟದ ಕಿಚ್ಚು!
– ತೀರ್ಥಹಳ್ಳಿಯಲ್ಲಿ ಹಿಂದೂ ಕಾರ್ಯಕರ್ತರ ಮೌನ ಮೆರವಣಿಗೆ
– ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ಪ್ರತಿಭಟನೆ
NAMMUR EXPRESS NEWS
ತೀರ್ಥಹಳ್ಳಿ: ಬಾಂಗ್ಲಾದೇಶದ ಆಮಾಯಕ ಹಿಂದುಗಳ ಕೊಲೆ ಅತ್ಯಾಚಾರ ಹಾಗೂ ಹಿಂದು ಮಂದಿರಗಳನ್ನು ಹಾಳು ಮಾಡುವುದನ್ನು ತಡೆಯುವ ಬಗ್ಗೆ ಹಿಂದೂ ಕಾರ್ಯಕರ್ತರ ಮೌನ ಮೆರವಣಿಗೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಹಿಂದೂ ಹಿತರಕ್ಷಣಾ ಸಮಿತಿ ವತಿಯಿಂದ ತೀರ್ಥಹಳ್ಳಿ ಪಟ್ಟಣದಲ್ಲಿ ಮೌನ ಮೆರವಣಿಗೆ ನಡೆಸಲಾಯಿತು.
ಮೆರವಣಿಗೆ ನಡೆಸಿದ ಬಳಿಕ ತಾಲೂಕ್ ಆಫೀಸ್ ಆವರಣದಲ್ಲಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶಾಸಕ ಆರಗ ಜ್ಞಾನೇಂದ್ರ,ಬಾಂಗ್ಲಾದೇಶದ ಹಿಂದುಗಳ ಮೇಲೆ ನಡೆಯುವಂತ ಹತ್ಯೆ ಮತ್ತು ದೌರ್ಜನ್ಯದ ವಿರುದ್ಧ ನಮ್ಮ ಭಾರತ ಸರ್ಕಾರ ಕ್ರಮ ಕೈಗೊಳ್ಳುವಂತಾಗಬೇಕು. ನಮ್ಮಲ್ಲಿ ಸೆಕ್ಯುಲರ್ ಗಳು ಯಾರು ಇದರ ವಿರುದ್ಧ ದನಿಯ ಎತ್ತುವುದಿಲ್ಲ, ಮತ್ತು 70ರ ದಶಕದಲ್ಲಿ ಪಾಕಿಸ್ತಾನ ಬಾಂಗ್ಲಾದೇಶಕ್ಕೆ ಮಿಲಿಟರಿನ ನುಗ್ಗಿಸಿ ರಕ್ತಪಾತ ಮಾಡಿದ್ದು ಆ ಸಮಯದಲ್ಲಿ ಭಾರತ ಮಧ್ಯ ಪ್ರವೇಶಿಸಿ ಗಲಭೆಯನ್ನು ನಿ್ಲಿಸಿದ್ದು, ಆದರೆ ಬಾಂಗ್ಲಾ ಆ ಕೃತಜ್ಞತೆಯನ್ನು ಇಟ್ಟಿಲ್ಲ. ಅಲ್ಲಿ ಹಿಂದುಗಳ ವಿರುದ್ಧ ದೌರ್ಜನ್ಯ ನಡೆಯುತ್ತಿದೆ. ಆದರೆ ಇದನ್ನು ಭಾರತ ಎಂದು ಸಹಿಸುವುದಿಲ್ಲ ಎಂದರು. ತಾಲೂಕು ದಂಡಾಧಿಕಾರಿ ಜಕ್ಕಣ್ಣ ಗೌಡರ್ ಅವರಿಗೆ ಮನವಿಪತ್ರ ರಾಷ್ಟ್ರಪತಿ ಅವರಿಗೆ ನೀಡಲಾಯಿತು.
ವಾಸುದೇವ್ ಜೆ.ಆರ್. ಜಿಲ್ಲಾ ಅಧ್ಯಕ್ಷರು ವಿಶ್ವ ಹಿಂದು ಪರಿಷತ್,, ಭಾರತಿಪುರ ದಿನೇಶ್,ಮತ್ತು ವಾಸುದೇವ್ ಜೆ,,ಆರ್, ಜಿಲ್ಲಾಧ್ಯಕ್ಷರು ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.