ತೀರ್ಥಹಳ್ಳಿಗೆ ಬಂತು ಫ್ಲೈ ಓವರ್!
– 56 ಕೋಟಿ ವೆಚ್ಚದಲ್ಲಿ ಹೊಸ ಪ್ಲೇ ಓವರ್ ನಿರ್ಮಾಣ
– ಭಾರತಿಪುರ ಕ್ರಾಸ್ ನಿಂದ ತೀರ್ಥಹಳ್ಳಿ ಪಟ್ಟಣಕ್ಕೆ ಸಂಪರ್ಕ
– ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರ ಸಾಧನೆ
– ಕಾಮಗಾರಿ ಶುರು: ತೀರ್ಥಹಳ್ಳಿ ಆಗುತ್ತಿದೆ ಹೈಟೆಕ್
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಪ್ರತಿಷ್ಠಿತ ಹಾಗೂ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪಟ್ಟಣಗಳಲ್ಲಿ ಒಂದಾದ ತೀರ್ಥಹಳ್ಳಿಗೆ ಇದೀಗ ಫ್ಲೈ ಓವರ್ ಭಾಗ್ಯ ಬಂದಿದೆ. ತೀರ್ಥಹಳ್ಳಿಯ ಭಾರತಿ ಪುರ ಕ್ರಾಸ್ ಬಳಿ ಸುಮಾರು 56 ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣ ಕಾಮಗಾರಿ ಶುರುವಾಗಿದ್ದು, ಇದೀಗ ಕಾಮಗಾರಿಗೆ ಚಾಲನೆ ಸಿಕ್ಕಿದೆ. ಭಾರತಿಪುರದಿಂದ ತೀರ್ಥಹಳ್ಳಿ ಪಟ್ಟಣಕ್ಕೆ ಸಂಪರ್ಕಿಸುವ ಈ ಫ್ಲೈ ಓವರ ಕಾಮಗಾರಿ ಡಿಸೆಂಬರ್ ನಲ್ಲಿ ಶುರುವಾಗಿದ್ದು 2024 ಜೂನ್ ನಲ್ಲಿ ಕಾಮಗಾರಿ ಪೂರ್ಣಗೊಳ್ಳಲಿದೆ.
ಬೆಂಗಳೂರು ಮಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿರುವ ಫ್ಲೈ ಓವರ್ ಮಾದರಿ ಅತಿ ಆಧುನಿಕ ಫ್ಲೈ ಓವರ್ ನಿರ್ಮಾಣವಾಗುತ್ತಿದ್ದು, ವಾಹನಗಳು ಫ್ಲೈ ಓವರ್ ಮೇಲೆ ಚಲಿಸಲಿವೆ. ಮಳೆಗಾಲದಲ್ಲಿ ಗುಡ್ಡ ಕುಸಿತ, ನೀರಿನ ತೊಂದರೆ ಸೇರಿದಂತೆ ಭಾರತಿ ಪುರ ಕ್ರಾಸ್ ಅಕ್ಕಪಕ್ಕ ಅನೇಕ ಅಪಘಾತಗಳು ಸಂಭವಿಸಿದ್ದು ಇದೀಗ ಅಪಘಾತ ತಪ್ಪಿಸುವ ಉದ್ದೇಶದಿಂದ ಫ್ಲೈ ಓವರ್ ನಿರ್ಮಾಣ ಮಾಡಲಾಗಿದೆ.
ಬೆಂಗಳೂರಿನ ಕೃಷಿ ಇನ್ಫೋಟೆಕ್ ಕಂಪನಿ ಈ ಫ್ಲೈ ಓವರ್ ಕಾಮಗಾರಿಯನ್ನು ಮಾಡುತ್ತಿದ್ದು ಈಗಾಗಲೇ ಕಾಮಗಾರಿಯ ಸ್ಕೆಚ್ ಸಿದ್ದಗೊಂಡಿದೆ. ಈಗಾಗಲೇ ಕಾಮಗಾರಿ ಭರದಿಂದ ಸಾಗಿದೆ.
ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸಾಧನೆ!
ತೀರ್ಥಹಳ್ಳಿ ಅಭಿವೃದ್ಧಿಯಲ್ಲಿ ಹೆಚ್ಚು ಕೊಡುಗೆ ನೀಡಿರುವ ಆರಗ ಜ್ಞಾನೇಂದ್ರ ಅವರು ಗೃಹ ಸಚಿವರಾಗಿದ್ದ ಅವಧಿಯಲ್ಲಿ ಈ ಫ್ಲೈ ಓವರ್ ಮಂಜೂರಾಗಿದೆ. ತಮ್ಮ ಮಗಳನ್ನು ಇದೇ ತಿರುವಿನಲ್ಲಿ ಅಪಘಾತದಲ್ಲಿ ಕಳೆದುಕೊಂಡಿದ್ದ ಆರಗ ಅವರು ಈ ಫ್ಲೈ ಓವರ್ ತಂದಿದ್ದಾರೆ. ತೀರ್ಥಹಳ್ಳಿಗೆ ಇದೊಂದು ಹೊಸ ಕಳೆ ನೀಡಲಿದೆ.
ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?
HOW TO APPLY : NEET-UG COUNSELLING 2023