ಮಳೆಗೆ ಮರ ಬಿದ್ದು ಓರ್ವ ದುರ್ಮರಣ!
– ತೀರ್ಥಹಳ್ಳಿ ತಾಲೂಕು ದೇಮಲಾಪುರದಲ್ಲಿ ಘಟನೆ
– ಮಳೆಗಾಲದಲ್ಲಿ ಇನ್ನಷ್ಟು ಬಲಿಯಾಗುವ ಆತಂಕ
– ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ!
NAMMUR EXPRESS NEWS
ತೀರ್ಥಹಳ್ಳಿ: ಭಾರೀ ಮಳೆ ಗಾಳಿಗೆ ಮರ ಬೈಕ್ ಸವಾರನ ಮೇಲೆ ಬಿದ್ದು ಓರ್ವ ಮೃತಪಟ್ಟಿರುವ ಘಟನೆ ತೀರ್ಥಹಳ್ಳಿ ತಾಲೂಕು ದೇಮಲಾಪುರದಲ್ಲಿ ಗುರುವಾರ ಸಂಜೆ ನಡೆದಿದೆ. ಅರಣ್ಯ ಇಲಾಖೆ ನಿರ್ಲಕ್ಷ್ಯದಿಂದ ಈ ಘಟನೆ ನಡೆದಿದ್ದು, ನೀಲಗಿರಿ ಮರಗಳು ರಸ್ತೆಗೆ ತಾಗಿಕೊಂಡಿದ್ದರೂ ಇದುವರೆಗೂ ಕಡಿತಲೆ ಮಾಡಿರಲಿಲ್ಲ. ಇದೀಗ ಸಂಜೆ ಮಳೆ ಗಾಳಿಗೆ ಬೈಕ್ ಅಲ್ಲಿ ತೀರ್ಥಹಳ್ಳಿಯಿಂದ ಮನೆಗೆ ಹೋಗುತ್ತಿದ್ದ ಜಯಂತ್ ಭಟ್( 60) ಎಂಬುವರ ಮೇಲೆ ಬಿದ್ದಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತರು ಓರ್ವ ಹೆಣ್ಣು, ಓರ್ವ ಗಂಡು ಮಗ, ಪತ್ನಿ, ಅಪಾರ ಬಂಧುಗಳನ್ನು ಅಗಲಿದ್ದಾರೆ.
ಅರಣ್ಯ ಇಲಾಖೆ ವಿರುದ್ಧ ಗ್ರಾಮಸ್ಥರ ಆಕ್ರೋಶ!
ಕಳೆದ 10 ವರ್ಷಗಳಿಂದ ಇಲ್ಲಿ ನೀಲಗಿರಿ ಮರಗಳು ಬಾಗಿ ಅನೇಕ ಬಾರಿ ಅಪಘಾತ ಸಂಭವಿಸಿದೆ. ಕಳೆದ ವರ್ಷ ಕೂಡ ಒಬ್ಬರ ಮೇಲೆ ಬೈಕ್ ಬಿದ್ದು ಗಂಭೀರ ಗಾಯಗೊಂಡು ಮಣಿಪಾಲ ಆಸ್ಪತ್ರೆ ಸೇರಿದ್ದರು. ಶಾಲಾ ಮಕ್ಕಳು, ಜನರ ಮೇಲೆ ಮರ ಬಿದ್ದು ಅನಾಹುತ ಸಂಭವಿಸಬಹುದು ಎಂದು ಅರಣ್ಯ ಇಲಾಖೆ ಸಾಕಷ್ಟು ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳದ ಕಾರಣ ಇದೀಗ ಓರ್ವರ ಬಲಿಯಾಗಿದೆ.
ಮಳೆಗಾಲದಲ್ಲಿ ಇನ್ನಷ್ಟು ಬಲಿಯಾಗುವ ಆತಂಕ ಇದೆ. ಜತೆಗೆ ಈ ದುರಂತಕ್ಕೆ ಅರಣ್ಯ ಇಲಾಖೆಯೇ ಕಾರಣ. ಇಲಾಖೆ, ಸರ್ಕಾರ ಪರಿಹಾರ ಕೊಡಬೇಕು. ಶಾಶ್ವತವಾಗಿ ಮರಗಳನ್ನು ಕಡಿಯಬೇಕು ಎಂದು ಗ್ರಾಮಸ್ತರು ಅಗ್ರಹಿಸಿದ್ದಾರೆ.