ಟಾಪ್ 3 ನ್ಯೂಸ್ ತೀರ್ಥಹಳ್ಳಿ
ವಿಕಲ ಚೇತನರಿಗೆ ತ್ರಿಚಕ್ರ ವಾಹನ ಭಾಗ್ಯ!
– ತೀರ್ಥಹಳ್ಳಿಯಲ್ಲಿ ಶಾಸಕ ಆರಗ ಜ್ಞಾನೇಂದ್ರ ಅವರಿಂದ ವಿತರಣೆ
– ಯಡೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಪ್ರಶಾಂತ್ ಹಂದಿಗೆ ಮನೆ
– ರೋಟರಿ ಸಂಸ್ಥೆಯಿಂದ ಐವರು ಸಾಧಕ ಶಿಕ್ಷಕರಿಗೆ ಸನ್ಮಾನ
NAMMUR EXPRESS NEWS
ತೀರ್ಥಹಳ್ಳಿ :ಸೆ. 27ರಂದು ಪಟ್ಟಣದ ಗ್ರಾಮೀಣಾಭಿವೃದ್ಧಿ ಭವನದಲ್ಲಿ 10 ಮಂದಿಗೆ ತ್ರಿಚಕ್ರ ವಾಹನ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಆರಗ ಜ್ಞಾನೇಂದ್ರ ವಿಕಲಚೇತನ ಬಂಧುಗಳಿಗೆ ಓಡಾಡಲು ಸಾಧ್ಯವಿಲ್ಲ ಎಂಬ ಕಾರಣದಿಂದ ಈ ಅನುಕೂಲ ಸೌಲಭ್ಯವನ್ನು ನೀಡಲಾಗುತ್ತಿದೆ. ತ್ರಿಚಕ್ರದ ಮೂಲಕ ವಿಕಲಚೇತನರಲ್ಲಿ ಆತ್ಮ ವಿಶ್ವಾಸ ಮೂಡಿ ತ್ರಿಚಕ್ರ ವಾಹನದಲ್ಲಿ ತಾನು ಓಡಾಡಬಲ್ಲೆ ಭಾವನೆಯ ಜೊತೆಗೆ ಜೀವನದಲ್ಲಿ ಹೊಸ ಉತ್ಸಾಹಕ್ಕೆ ನೆರವಾಗಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವಿಕಲಚೇತನ ಇಲಾಖೆ ತಾಲ್ಲೂಕು ಸಂಯೋಜಕರಾದ ದಿವಾಕರ್ ಬಿ. ಆರ್,ಪಟ್ಟಣ ಪಂಚಾಯತ್ ಸದಸ್ಯರಾದ ಜ್ಯೋತಿ ಮೋಹನ್, ತಾಲೂಕು ಮಹಿಳಾ ಮೋರ್ಚಾ ಅಧ್ಯಕ್ಷರಾದ ಯಶೋದಾ ಮಂಜುನಾಥ್ ಸೇರಿ ಹಲವರು ಉಪಸ್ಥಿತರಿದ್ದರು.
ಯಡೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಪ್ರಶಾಂತ್ ಹಂದಿಗೆ ಮನೆ
ಯಡೂರು ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷರಾಗಿ ಎಸ್ ಎನ್ ಜಿ ವಿ ಸಂಘಟನೆ ತಾಲೂಕು ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಹಂದಿಗೆ ಮನೆ ಅವರು ಅವಿರೋಧ ಆಯ್ಕೆ ಆಗಿದ್ದು ಅಧಿಕಾರ ಸ್ವೀಕಾರ ಮಾಡಿದ್ದಾರೆ. ಈಡಿಗ ಸಮಾಜದ ಪ್ರಮುಖರು, ಹೊಸ ನಗರ ಎಸ್ ಎನ್ ಜಿವಿ ಅಧ್ಯಕ್ಷರಾದ ಮಾಸ್ತಿಕಟ್ಟೆ ವಾಸಪ್ಪ ಅವರು ಅಭಿನಂದನೆ ಸಲ್ಲಿಸಿದ್ದಾರೆ.
ರೋಟರಿ ಸಂಸ್ಥೆಯಿಂದ ಶಿಕ್ಷರಿಗೆ ರಾಷ್ಟ್ರ ನಿರ್ಮಾಣ ಪ್ರಶಸ್ತಿ
ತೀರ್ಥಹಳ್ಳಿ: ತೀರ್ಥಹಳ್ಳಿ ರೋಟರಿ ಭವನದಲ್ಲಿ ನಡೆದ “ನೇಷನ್ ಬಿಲ್ಡರ್ಸ್ ಅವಾರ್ಡ್ “ಕಾರ್ಯಕ್ರಮದಲ್ಲಿ ತೀರ್ಥಹಳ್ಳಿ ತಾಲೂಕಿನ 4 ಜನ ಶಿಕ್ಷಕರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ದಾನೇಶ್, ಪ್ರೌಢಶಾಲೆ ಆರಗ, ಶ್ರೀಮತಿ ಅನ್ನಪೂರ್ಣ, ಶಿಕ್ಷಕಿ, ಮೇಗರವಳ್ಳಿ,ಶ್ರೀಮತಿ ಜ್ಯೋತಿ, ಬಿದರಗೊಡು,ಶ್ರೀಮತಿ ಗಾಯತ್ರಿ,ಸ .ಹಿ ಪ್ರಾಥಮಿಕ ಪಾಠಶಾಲೆ ,ಬಾವಿಕೈಸರು, ಇವರನ್ನು ರೋಟರಿ ಸಂಸ್ಥೆಯ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಈ ಪ್ರಶಸ್ತಿಯಿಂದ ನಮ್ಮ ಜವಾಬ್ದಾರಿ ಜಾಸ್ತಿ ಆಗಿದೆ, ನಮ್ಮನ್ನು ಗುರುತಿಸಿ ಗೌರವಿಸಿದಕ್ಕೆ ಎಲ್ಲಾ ಶಿಕ್ಷಕರು ಕ್ರತಜ್ಞತೆಯನ್ನು ಸಮರ್ಪಿಸಿದರು. ರೋಟರಿ ಅಧ್ಯಕ್ಷರಾದ ಅನಿಲ್ ಕುಮಾರ್, ರೊ. ಮನೋಜ್ ಆಚಾರ್ಯ, ರೊ ರಾಘವೇಂದ್ರ ಆಚಾರ್ಯ, ರೊ ಪಿ ವಿ ಭರತ್ ಕುಮಾರ್ ನಿಯೋಜಿತ ಅಧ್ಯಕ್ಷರು, ಮತ್ತು ರೊ ಜ್ಯೋತಿ ದಿಲೀಪ್ ಇವರು ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು.ವೇದಿಕೆಯಲ್ಲಿ ಡಾ ಬಿ ಜಿ ನಂದ ಕಿಶೋರ್, ಅಧ್ಯಕ್ಷರು ರೋಟರಿ ಐಎಮ್ಎ ಚಾರಿಟೇಬಲ್ ಟ್ರಸ್ಟ್, ತೀರ್ಥಹಳ್ಳಿ ಇವರು ಉಪಸ್ಥಿತರಿದ್ದು ಸನ್ಮಾನ ಕಾರ್ಯಕ್ರಮದಲ್ಲಿ ಸಹಕರಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ರೊ ಅನಿಲ್ ಕುಮಾರ್ ,ಅಧ್ಯಕ್ಷರು ,ರೋಟರಿ ಕ್ಲಬ್ ತೀರ್ಥಹಳ್ಳಿ ಇವರ ವಹಿಸಿದ್ದರು. ಕಾರ್ಯದರ್ಶಿ , ಎಂ ಎಸ್ ,ಶಿವಪ್ರಸಾದ್ ಇವರು ವಂದನಾರ್ಪಣೆ ಮಾಡಿದರು.