ಆಧಾರ್ ಸರ್ವರ್ ಡೌನ್ – ಡೌನ್ : ಮಧ್ಯರಾತ್ರಿ ಕ್ಯೂ ನಿಂತ ಜನ!
– ತೀರ್ಥಹಳ್ಳಿ ಸೇರಿದಂತೆ ಬಹುತೇಕ ಕಡೆ ಆಧಾರ್, ಇತರೆ ಆನ್ ಲೈನ್ ಸರ್ವರ್ ಸ್ಥಗಿತ
– ಮಧ್ಯರಾತ್ರಿಯಿಂದಲೇ ಕ್ಯೂ ನಿಂತು ಜನರ ಪರದಾಟ
NAMMUR EXPRESS NEWS
ತೀರ್ಥಹಳ್ಳಿ: ( Thirthahalli ) ಸರ್ಕಾರದ ವಿವಿಧ ಸೌಲಭ್ಯಗಳಿಗೆ ಆಧಾರ್ ಲಿಂಕ್ ಕಡ್ಡಾಯವಾಗಿರುವುದರಿಂದ ಇದೀಗ ಆಧಾರ್ ಲಿಂಕ್ ಮಾಡಿಸಲು ಜನ ಹಗಲು ರಾತ್ರಿ ಕ್ಯೂ ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ತೀರ್ಥಹಳ್ಳಿಯ ಪೋಸ್ಟ್ ಆಫೀಸ್ ಮುಂದೆ ಸುಮಾರು 3 ಗಂಟೆಗೆ ಬಂದು ಜನ ಕ್ಯೂ ನಿಂತಿರುವ ಘಟನೆ ಗುರುವಾರ ನಡೆದಿದೆ. ಜೊತೆಗೆ ತೀರ್ಥಹಳ್ಳಿ ಮಾತ್ರವಲ್ಲದೆ ಬಹುತೇಕ ತಾಲೂಕು ಕೇಂದ್ರ ಹಾಗೂ ಹೋಬಳಿ ಕೇಂದ್ರಗಳಲ್ಲಿ ಆಧಾರ್ ಕಾರ್ಡ್ ತಿದ್ದುಪಡಿ ಜೊತೆಗೆ ಆಧಾರ್ ಲಿಂಕ್ ಮಾಡಲು ಜನ ಪರದಾಟ ಮಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಒಂದು ಕಡೆ ಆಧಾರ್ ಸೇರಿದಂತೆ ಬಹುತೇಕ ಆಪ್ ಹಾಗೂ ವೆಬ್ ಸೈಟ್ ಗಳ ಸರ್ವರ್ ಡೌನ್ ಆಗಿದ್ದು, ಕೆಲವು ಕಡೆ ಇಂಟರ್ನೆಟ್ ಸ್ಥಗಿತಗೊಂಡಿದೆ. ಇನ್ನು ಮಳೆಯ ಕಾರಣದಿಂದಾಗಿ ಹಲವು ಕಡೆ ವಿದ್ಯುತ್ ಹಾಗೂ ಇಂಟರ್ನೆಟ್ ಸೌಲಭ್ಯ ಇಲ್ಲ. ಇನ್ನು ಸರ್ಕಾರದ ಈ ವೆಬ್, ಸಾಫ್ಟ್ವೇರ್ ಅಪ್ಡೇಟ್ ಆಗಿಲ್ಲ ಹೀಗಾಗಿ ಜನರು ಕೆಲಸ ಬಿಟ್ಟು ಅಂಗಡಿ ಕಟ್ಟೆ ಅಲೆಯುವಂತಾಗಿದೆ. ಪ್ರತಿದಿನ ಕೆಲಸ ಬಿಟ್ಟು ಸೈಬರ್ ಹಾಗೂ ಗ್ರಾಮ ಒನ್ ಮುಂದೆ ನಿಲ್ಲುವ ಜನ ಆಡಳಿತ ವ್ಯವಸ್ಥೆಗೆ ಶಾಪ ಹಾಕುತ್ತಿದ್ದಾರೆ.
ರಾತ್ರಿಯಿಂದಲೇ ಕ್ಯೂ!
ತೀರ್ಥಹಳ್ಳಿಯ ಅಂಚೆ ಕಚೇರಿಯಲ್ಲಿ ಆಧಾರ್ ಅಪ್ಡೇಟ್ ಗಾಗಿ ಕಳೆದೆರಡು ದಿನಗಳಿಂದ ರಾತ್ರಿ ಎರಡು ಮೂರು ಗಂಟೆಯಿಂದ ಜನ ಕ್ಯು ನಿಂತರು ಅವರ ಕೆಲಸ ಆಗುತ್ತಿಲ್ಲ. ಪ್ರತಿನಿತ್ಯ ಮೂವತ್ತು ಅರ್ಜಿಗಳನ್ನು ಮಾತ್ರ ವಿಲೇವಾರಿ ಮಾಡಲಾಗುತ್ತಿದೆ ಎಂಬ ದೂರು ನೀಡಿದ್ದಾರೆ. ಇನ್ನು ಅಲ್ಲಿನ ಅಧಿಕಾರಿಗಳು, ಕೆಲವು ಸಿಬ್ಬಂದಿಗಳ ಬೇಜವಾಬ್ದಾರಿಯಿಂದಾಗಿ ಜನರು ಪ್ರತಿನಿತ್ಯ ಬರುವಂತಾಗಿದೆ. ಹೀಗಾಗಿ ತಕ್ಷಣ ಸಂಬಂಧ ಪಟ್ಟ ಜಿಲ್ಲಾಡಳಿತ ಗಮನಿಸಬೇಕಿದೆ ಎಂಬುದು ಇಲ್ಲಿನ ಜನರ ಆಗ್ರಹವಾಗಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023