ತಾಲ್ಲೂಕು ಮಟ್ಟದಲ್ಲಿ ಹೆಗ್ಗೋಡು ಶಾಲಾ ವಿದ್ಯಾರ್ಥಿಗಳ ಸಾಧನೆ!
– ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆ
– ವಿಜೇತರಾದ ಪ್ರಥಮ್ ಕೆ.ಪಿ ಮತ್ತು ಆರ್ವಿ ಬಿ.ಎ
NAMMUR EXPRESS NEWS
ತೀರ್ಥಹಳ್ಳಿ: ನ.30ರಂದು ಸೇವಾಭಾರತಿ ಶಾಲೆಯಲ್ಲಿ ನಡೆದ ತೀರ್ಥಹಳ್ಳಿ ತಾಲ್ಲೂಕು ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಸ. ಹಿ. ಪ್ರಾ.ಶಾಲೆ ಹೆಗ್ಗೋಡಿನ ವಿದ್ಯಾರ್ಥಿಗಳು ಭಾಗವಹಿಸಿದ್ದು, ಇದರಲ್ಲಿ ಕುಮಾರ ಪ್ರಥಮ್ ಕೆ.ಪಿ ಭಕ್ತಿಗೀತೆಯಲ್ಲಿ ಪ್ರಥಮ ಸ್ಥಾನ ಹಾಗೂ ಕುಮಾರಿ ಆರ್ವಿ ಬಿ.ಎನ್ ಅಭಿನಯಗೀತೆಯಲ್ಲಿ ತೃತೀಯ ಸ್ಥಾನವನ್ನು ಪಡೆದು ಹೆಗ್ಗೋಡು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಈ ಕಾರ್ಯಕ್ರಮದಲ್ಲಿ ವಿಜೇತರಾದವರು ಮತ್ತು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ ಶಾಲೆಯ ಎಲ್ಲಾ ವಿದ್ಯಾರ್ಥಿಗಳನ್ನು ಮುಖ್ಯ ಶಿಕ್ಷಕರು-ಶಿಕ್ಷಕ ವೃಂದ, ಶಾಲಾಭಿವೃದ್ಧಿ ಮಂಡಳಿ, ಪೋಷಕರು ಹಾಗೂ ಹಿರಿಯ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಅಭಿನಂದಿಸಿ ಶುಭಹಾರೈಸಿದ್ದಾರೆ.