ಚೆಸ್ ಕ್ರೀಡೆಯಲ್ಲಿ ಸಹೋದರಿಯರ ಸಾಧನೆ!
– ಮಂಗಳೂರಲ್ಲಿ ನಡೆದ ಸ್ಪರ್ಧೆಯಲ್ಲಿ ಪಾವನಿ, ಗಾನವಿ ಗೆಲುವು
– ಸಹ್ಯಾದ್ರಿ ಸಂಸ್ಥೆಯ ಆಡಳಿತ ಮಂಡಳಿ, ಶಿಕ್ಷಕ ವರ್ಗದ ಅಭಿನಂದನೆ
NAMMUR EXPRESS NEWS
ತೀರ್ಥಹಳ್ಳಿ: ಸಹ್ಯಾದ್ರಿ ಪ್ರೌಢಶಾಲೆ, ಕುಶಾವತಿ, ತೀರ್ಥಹಳ್ಳಿಯ ಸಹೋದರಿ ವಿದ್ಯಾರ್ಥಿಗಳಾದ ಕು.ಪಾವನಿ ಮತ್ತು ಕು.ಗಾನವಿ ಅವರಿಗೆ ಚೆಸ್ ಕ್ರೀಡೆಯಲ್ಲಿ ಪ್ರಶಸ್ತಿ ಲಭಿಸಿದೆ.
“King s Chess Academy “ ದಕ್ಷಿಣ ಕನ್ನಡ ಇವರ ಆಶ್ರಯದಲ್ಲಿ ಜುಲೈ 2ರಂದು ಮಂಗಳೂರಿನಲ್ಲಿ ನಡೆದ “3rd KCA Trophy Inter State District Chess Tournment 2023′ ನಲ್ಲಿ ನಮ್ಮ ಸಂಸ್ಥೆಯ ವಿದ್ಯಾರ್ಥಿಗಳಾದ ಕುಮಾರಿ ಪಾವನಿ 8ನೇ ತರಗತಿ ಉತ್ತಮ ಪ್ರದರ್ಶನ ನೀಡಿ ದ್ವಿತೀಯ ಸ್ಥಾನ ಹಾಗೂ ಕುಮಾರಿ ಗಾನವಿ 9ನೇ ತರಗತಿ ಆರನೇ ಸ್ಥಾನವನ್ನು ಪಡೆದು ಶಿಕ್ಷಣ ಸಂಸ್ಥೆಗೆ, ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಪೋಷಕರಿಗೆ ಕೀರ್ತಿಯನ್ನು ತಂದಿರುತ್ತಾರೆ.
ಈ ಪ್ರತಿಭೆಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ಆಡಳಿತಾಧಿಕಾರಿಗಳು, ಪ್ರಾಂಶುಪಾಲರು, ಶಿಕ್ಷಕ ವೃಂದದವರು ಹಾರ್ದಿಕ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.
ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?
HOW TO APPLY : NEET-UG COUNSELLING 2023