ತೀರ್ಥಹಳ್ಳಿ ವೈದ್ಯರ ಮೇಲೆ ಹಲ್ಲೆ: ವೈದ್ಯರ ದೂರು!
– ಸರ್ಕಾರಿ ಆಸ್ಪತ್ರೆ ವೈದ್ಯರ ಮೇಲೆ ನಡೆದಿರುವ ಹಲ್ಲೆ ಖಂಡಿಸಿ ಪ್ರತಿಭಟನೆ: ವೈದ್ಯರ ಮನವಿ ಕೇಳಿದ ಆರಗ ಜ್ಞಾನೇಂದ್ರ
– ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ ತಾಲೂಕು ಡಾಕ್ಟರ್ಸ್ ಅಸೋಸಿಯೇಶನ್ ಆಕ್ರೋಶ
– ಆಸ್ಪತ್ರೆಗೆ ಬೇಕು ಸೆಕ್ಯೂರಿಟಿ: ಏನಿದು ಘಟನೆ..?
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಜೆಸಿ ಆಸ್ಪತ್ರೆಯ ವೈದ್ಯರ ಮೇಲೆ ನಡೆದಿರುವ ಹಲ್ಲೆ ಖಂಡನೀಯವಾಗಿದ್ದು ನೆರೆಯ ತಾಲೂಕುಗಳಿಂದಲೂ ಅಧಿಕ ಸಂಖ್ಯೆಯಲ್ಲಿ ರೋಗಿಗಳು ಬರುತ್ತಿರುವ ತಾಲೂಕಿನ ಸರ್ಕಾರಿ ಜೆಸಿ ಆಸ್ಪತ್ರೆಗೆ ಸೂಕ್ತ ಸೆಕ್ಯೂರಿಟಿ ಒದಗಿಸುವ ಅಗತ್ಯವಿದ್ದು ನೂರು ಹಾಸಿಗೆಯ ಆಸ್ಪತ್ರೆಯಲ್ಲಿ ಸರಿಯಾದ ಸೆಕ್ಯೂರಿಟಿ ಇಲ್ಲದ ಕಾರಣವೇ ಇಂತಹ ಘಟನೆ ಸಂಭವಿಸಿದೆ ಎಂದು ಶಾಸಕ ಆರಗಜ್ಞಾನೇಂದ್ರ ಹೇಳಿದ್ದಾರೆ.
ಜಸಿ ಆಸ್ಪತ್ರೆಯಲ್ಲಿ ಈಚೆಗೆ ಹಿರಿಯ ವೈದ್ಯರ ಮೇಲೆ ವ್ಯಕ್ತಿಯೊಬ್ಬ ನಡೆಸಿರುವ ಹಲ್ಲೆಯನ್ನು ಖಂಡಿಸಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಹಾಗೂ ತಾಲೂಕು ಡಾಕ್ಟರ್ಸ್ ಅಸೋಸಿಯೇಶನ್ ವತಿಯಿಂದ ನೀಡಲಾದ ಮನವಿಯನ್ನು ಸ್ವೀಕರಿಸಿ, ಎಲ್ಲಾ ಸವಲತ್ತುಗಳನ್ನು ಹೊಂದಿರುವ ಜೆಸಿ ಆಸ್ಪತ್ರೆಗೆ ರೋಗಿಗಳ ಒತ್ತಡ ಹೆಚ್ಚಿದ್ದು ತಾಲೂಕು ಮಾತ್ರವಲ್ಲದೇ ನೆರೆಯ ತಾಲೂಕುಗಳಿಂದಲೂ ರೋಗಿಗಳು ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ಸರಿಯಾದ ಸೆಕ್ಯೂರಿಟಿ ಇಲ್ಲದ ಕಾರಣ ಇಂತಹಾ ಘಟನೆ ಸಂಭವಿಸಿದೆ. ಈ ಬಗ್ಗೆ ಕನಿಷ್ಠ ರಾತ್ರಿ ಪಾಳಿಯಲ್ಲಿ ಕಾರ್ಯ ನಿರ್ವಹಿಸುವಂತೆ ಕನಿಷ್ಠ ಓರ್ವ ಹೋಂಗಾರ್ಡ್ ನೇಮಕ ಮಾಡಲು ಸಂಬಂಧಿಸಿದ ಹಿರಿಯ ಅಧಿಕಾರಿಗಳನ್ನು ಕೋರುವುದಾಗಿ ತಿಳಿಸಿದರು.
ಹಿರಿಯ ವೈದ್ಯರುಗಳಾದ ಡಾ.ಟಿ.ನಾರಾಯಣಸ್ವಾಮಿ, ಡಾ.ಎಸ್. ಮನೋಹರರಾವ್, ಡಾ.ಬಿ.ಜಿ.ನಂದಕಿಶೋರ್, ಡಾ.ಗಣೇಶ್ ಕಾಮತ್, ಡಾ.ಪದ್ಮಜಾಜಯರಾಂ, ಡಾ.ಗಣೇಶ್ ನಾಯಕ್, ಡಾ.ಸದಾಶಿವ ನಿಲುವಾಸೆ, ಡಾ.ಅನಂತಮೂರ್ತಿ ಐತಾಳ್ ಮುಂತಾದವರು ಇದ್ದರು.