ತೀರ್ಥಹಳ್ಳಿ ಗಾಯಕಿ ಬಾಳೆಬೈಲು ಉಷಾ ಅವರಿಗೆ ಪ್ರಶಸ್ತಿ
– ಸಂಗೀತ ಕ್ಷೇತ್ರದ ಸಾಧನೆಗಾಗಿ
ವಿಶ್ವ ಸಂಗೀತ ಲೋಕ ದ್ರುವ ತಾರೆ ರಾಷ್ಟ್ರೀಯ ಪ್ರಶಸ್ತಿ
– ಹುಬ್ಬಳ್ಳಿಯಲ್ಲಿ ಜು.20ರಂದು ಪ್ರಶಸ್ತಿ ಪ್ರದಾನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಗಾಯಕಿ ಉಷಾ ಅವರಿಗೆ ಇದೀಗ ಮತ್ತೊಂದು ಪ್ರಶಸ್ತಿ ಒಲಿದು ಬಂದಿದೆ.
ಉಷಾ ಅವರು ವಿಶ್ವ ಸಂಗೀತ ಲೋಕ ದ್ರುವ ತಾರೆ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಹುಬ್ಬಳ್ಳಿ- ಧಾರವಾಡ ಭಾಗದಲ್ಲಿ ಅತ್ಯಂತ ಪ್ರಸಾರವುಳ್ಳ ಡಾ. ಎಸ್.ಎಸ್ ಪಾಟೀಲ್ ಅವರ ಸಾರಥ್ಯದ, ವಿಶ್ವ ದರ್ಶನ ಕನ್ನಡ ದಿನಪತ್ರಿಕೆ ಹಾಗೂ ಕನ್ನಡ ಪ್ರಜಾ ದರ್ಶನ ಪತ್ರಿಕೆ, ಮತ್ತು ಕರ್ನಾಟಕ ಪ್ರಜಾ ಜನಪರ ಟ್ರಸ್ಟ್ ವತಿಯಿಂದ ಸಂಗೀತ, ಸಾಹಿತ್ಯ, ಕಲೆ, ರಾಜಕೀಯ, ಧಾರ್ಮಿಕ, ಆಧ್ಯಾತ್ಮ,ಜಾನಪದ, ಸಾಂಸ್ಕೃತಿಕ, ಮಾಧ್ಯಮ ಸೇರಿದಂತೆ ವಿವಿಧ ಕ್ಷೇತ್ರದಲ್ಲಿ ಗಣನೀಯವಾಗಿ ಸೇವೆ ಸಲ್ಲಿಸುತ್ತಿರುವ ಎಲ್ಲಾ ಜಿಲ್ಲೆಯ ಸಾಧಕರಿಗೆ ಪ್ರತಿ ವರ್ಷ ಸನ್ಮಾನ ಸಮಾರಂಭವನ್ನು ಹಮ್ಮಿಕೊಂಡಿದ್ದು ಶಿವಮೊಗ್ಗ ಜಿಲ್ಲೆಯಿಂದ ಮಲೆನಾಡ ತೀರ್ಥಹಳ್ಳಿಯ ಹೆಮ್ಮೆಯ ಗಾಯಕಿ ಬಾಳೆಬೈಲಿನ ಉಷಾ.ಹೆಚ್. ಎಸ್ ಇವರ ಸಂಗೀತ ಕ್ಷೇತ್ರದ ಸಾಧನೆಗಾಗಿ ವಿಶ್ವ ಸಂಗೀತ ಲೋಕ ದ್ರುವ ತಾರೆ ರಾಷ್ಟ್ರೀಯ ಪ್ರಶಸ್ತಿ-2023 ಪಡೆದಿದ್ದಾರೆ.
ಪ್ರಶಸ್ತಿ ಪ್ರದಾನವು ಜುಲೈ 20 ಗುರುವಾರದಂದು ಧಾರವಾಡದ ರಂಗಾಯಣ ಸಭಾಭವನದಲ್ಲಿ ವಿವಿಧ ಗಣ್ಯರು ಮತ್ತು ನಾಡಿನ ಶರಣರ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಿದೆ.
ತೀರ್ಥಹಳ್ಳಿಯ ಅವರ ಸ್ನೇಹಿತರು, ಸಂಗೀತ ಪ್ರಿಯರು ಅಭಿನಂದನೆ ಸಲ್ಲಿಸಿದ್ದಾರೆ.
ಇದನ್ನೂ ಓದಿ : ಶಿವಮೊಗ್ಗ, ಕಾರ್ಕಳ ಶಿರಸಿ ಸೇರಿ ರಾಜ್ಯದ ವಿವಿಧ ಮಾರುಕಟ್ಟೆಗಳಲ್ಲಿ ಇವತ್ತಿನ ಅಡಿಕೆ ಧಾರಣೆ ಎಷ್ಟಿದೆ?
HOW TO APPLY : NEET-UG COUNSELLING 2023