ಚುನಾವಣೆ ಬಂದಾಗ ಶಸ್ತ್ರಭ್ಯಾಸ ಮಾಡಲ್ಲ!
– ಮೋದಿ ಅವರನ್ನು ಮತ್ತೆ ಪ್ರಧಾನಿ ಸ್ಥಾನದಲ್ಲಿ ನೋಡ್ಬೇಕು: ಸಂಸದ ರಾಘವೇಂದ್ರ
– ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ವಿರುದ್ಧ ಆಕ್ರೋಶ
NAMMUR EXPRESS NEWS
ತೀರ್ಥಹಳ್ಳಿ: ಹಿರಿಯರ ಸಂಘಟನೆ ಕಟ್ಟಿದ ಪರಿಣಾಮ ಎಲ್ಲಾ ಕಾರ್ಯಕರ್ತರ ಶ್ರಮದಿಂದ ಕೇಂದ್ರ ಸರ್ಕಾರವು 9 ವರ್ಷ ಪೂರೈಸಿದೆ. ದೇಶದ ಹಿತ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರು ಮತ್ತೆ ಆ ಸ್ಥಾನದಲ್ಲಿ ಕೂರಬೇಕು. ಅಲ್ಲಿಯವರೆಗೂ ನಮ್ಮೆಲ್ಲಾ ಕಾರ್ಯಕರ್ತರು ಶ್ರಮ ಪಡಬೇಕು ಎಂದು ಶಿವಮೊಗ್ಗ ಸಂಸದ ಬಿ.ವೈ ರಾಘವೇಂದ್ರ ಹೇಳಿದ್ದಾರೆ.
ಶನಿವಾರ ತೀರ್ಥಹಳ್ಳಿಯಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ಸೇತುವೆ ಕಾಮಗಾರಿ ವೀಕ್ಷಣೆಗಾಗಿ ಬಂದಿದ್ದ ಅವರು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ,
ಚುನಾವಣೆ ಬಂದಾಗ ಶಸ್ತ್ರಾಭ್ಯಾಸ ಮಾಡುವುದಿಲ್ಲ. ಯಾವತ್ತೂ ಕೂಡ ಕ್ರಿಯಾಶೀಲವಾಗಿ ನಮ್ಮ ಕಾರ್ಯಕರ್ತರು ಕೆಲಸ ಮಾಡಿದ್ದಾರೆ. ಲೋಕಸಭಾ ಚುನಾವಣೆಗೂ ಮೊದಲು ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಚುನಾವಣೆಗಳು ಬರಲಿವೆ. ಹಾಗಾಗಿ ನಿರಂತರವಾಗಿ ನಮ್ಮ ಕಾರ್ಯಕರ್ತರು ಕೆಲಸವನ್ನ ನಿರ್ವಹಿಸಲಿದ್ದಾರೆ ಎಂದರು.
ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಮಂತ್ರಿಗಳಾಗಿ 9 ವರ್ಷ ಪೂರೈಸಿದ ಈ ಸಂದರ್ಭದಲ್ಲಿ ಈ ಒಂದು ತಿಂಗಳು ಪೂರ್ತಿ ಕಾರ್ಯಕ್ರಮ ನಡೆಯುತ್ತಿದೆ. ಅದರಲ್ಲಿ ವಿಶೇಷವಾಗಿ ನಮ್ಮ ಸಂಘಟನೆಯ ಹಿರಿಯರನ್ನು ಅವರ ಜೊತೆಗೆ ಸಂವಾದ ಕಾರ್ಯಕ್ರಮ, ವಿಶೇಷವಾಗಿ ವರ್ತಕರ ಜೊತೆ ಸಂವಾದ ಕಾರ್ಯಕ್ರಮ ಪ್ರಭಾವಿ ಪ್ರಮುಖರನ್ನು ಭೇಟಿ ಮಾಡುವಂತಹ ಕಾರ್ಯಕ್ರಮ ಇದೆ.
ಬಿಜೆಪಿ ಕಾರ್ಯಕರ್ತರು ಕೇಂದ್ರ ರಾಜ್ಯ ಸರ್ಕಾರ ಮತ್ತು ಆ ಭಾಗದ ಶಾಸಕರು, ಸಂಸದರು ಮಾಡಿದಂತಹ ಅಭಿವೃದ್ಧಿ ಕರಪತ್ರವನ್ನು ಪ್ರತಿ ಮನೆ ಮನೆಗೆ ಮತ್ತೊಮ್ಮೆ ಮನೆ ಮುಟ್ಟುವಂತಹ ಮಾಡುವ ಕೆಲಸ ನಮ್ಮ ಸಂಘಟನೆ ಮಾಡುತ್ತಿದೆ. ಯಡಿಯೂರಪ್ಪನವರ ನೇತೃತ್ವದಲ್ಲಿ ಇಡೀ ಜಿಲ್ಲೆಯ ಸಂಘಟನೆ ಆಗುತ್ತದೆ. ನಮ್ಮ ಕೇಂದ್ರ ಸರ್ಕಾರ 9 ವರ್ಷಗಳಲ್ಲಿ ಮಾಡಿದಂತಹ ಸಾಧನೆ ಇದರಿಂದ ಜನರ ಮನಸ್ಸನ್ನು ಗೆಲ್ಲುವುದರ ಮುಖಾಂತರ ಮತ್ತೆ ದೇಶದ ಹಿತ ದೃಷ್ಟಿಯಿಂದ ಪ್ರಧಾನಮಂತ್ರಿಗಳು ಮತ್ತೆ ಆ ಜಾಗದಲ್ಲಿ ಕೂರಬೇಕು ಅಲ್ಲಿಯವರೆಗೂ ಕೂಡ ನಾವು ಯಾರು ಕಾರ್ಯಕರ್ತರು ಅದಕ್ಕೆ ಬೇಕಾದ ಎಲ್ಲ ಶ್ರಮವನ್ನು ಹಾಕುತ್ತೇವೆ ಎಂದರು.
ತೀರ್ಥಹಳ್ಳಿ ಜನತೆಗೆ ಧನ್ಯವಾದ ಅರ್ಪಣೆ
ತೀರ್ಥಹಳ್ಳಿ ಕ್ಷೇತ್ರದ ಎಲ್ಲಾ ಮುಖಂಡರು, ಕಾರ್ಯಕರ್ತರು ಎಲ್ಲರೂ ಒಟ್ಟಾಗಿ ಎಲ್ಲಾ ರೀತಿಯ ಪ್ರಯತ್ನ ಮಾಡಿದ್ದರಿಂದ ಜನಪ್ರಿಯ ನಾಯಕ ಜ್ಞಾನೇಂದ್ರ ಅವರನ್ನು ಉಳಿಸಿಕೊಳ್ಳುವಂತಹ ಕೆಲಸ ಆಯಿತು. ಕಾಂಗ್ರೆಸ್ನ ಅಲೆಯ ಮಧ್ಯೆಯೂ ಕೂಡ ತೀರ್ಥಹಳ್ಳಿ ಕ್ಷೇತ್ರದಲ್ಲಿ ಹಿನ್ನಡೆಯಾಗದಂತೆ ಜನರು ಗೆಲ್ಲಿಸಿದ್ದಾರೆ.
ಅವರು ಗೃಹ ಸಚಿವರಾಗಿದ್ದಾಗ ತೆಗೆದುಕೊಂಡ ಕೆಲವು ನಿಲುವುಗಳು ರಾಜ್ಯದಲ್ಲಿ ಮತ್ತು ತೀರ್ಥಹಳ್ಳಿಯಲ್ಲಿ ಇದರ ಪರಿಣಾಮ ಬೀರಿದೆ. ಇವರ ಗೆಲುವಿನ ಹಿಂದೆ ಕಾರ್ಯಕರ್ತರ ಪರಿಶ್ರಮವಿದೆ, ಜ್ಞಾನೇಂದ್ರ ಅವರ ಜನಪ್ರಿಯತೆ ಇದೆ. ಹಾಗಾಗಿ ತೀರ್ಥಹಳ್ಳಿ ಜನತೆಗೆ ನಾನು ಹೃದಯಪೂರ್ವಕವಾಗಿ ಕೃತಜ್ಞತೆ ಸಲ್ಲಿಸುತ್ತೇನೆ ಎಂದರು.
ಅಕ್ಕಿ ಕೊಡಲು ಸುಳ್ಳು ನೆಪ!
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಯ ಬಗ್ಗೆ ಜನರಿಗೆ ವಿಶ್ವಾಸ ಬಂದಿರಬಹುದು. ಆದ್ದರಿಂದ ನಮ್ಮನ್ನು ಸೈಡಿಗೆ ಸರಿಸುವಂತಹ ಕೆಲಸ ಆಗಿರಬಹುದು. ಅಕ್ಕಿಯ ವಿಚಾರದಲ್ಲಿ ತಾವು ತಪ್ಪಿಸಿಕೊಳ್ಳಲು ಕೇಂದ್ರ ಸರ್ಕಾರದ ಕಡೆ ಬೆಟ್ಟು ಮಾಡುತ್ತಿದ್ದಾರೆ. ಈಗ 5 ಕೆಜಿ ಅಕ್ಕಿ ನರೇಂದ್ರ ಮೋದಿ ಸರ್ಕಾರ ಕೊಡುತ್ತಿದೆ. ಕೇಂದ್ರ ಸರ್ಕಾರದ 5 ಕೆ.ಜಿ ಹೊರತುಪಡಿಸಿ ಕಾಂಗ್ರೆಸ್ ಸರ್ಕಾರ 10 ಕೆಜಿ ಅಕ್ಕಿಯನ್ನು ನೀಡಬೇಕು. ಆದಷ್ಟು ಬೇಗ ಈ ಅಕ್ಕಿಯನ್ನು ಕೊಡುವಂತಹ ಕೆಲಸ ಆಗಬೇಕು ಎಂದು ರಾಘವೇಂದ್ರ ಹೇಳಿದ್ದಾರೆ.
ಸರ್ಕಾರಿ ಬಸ್ಸಿನಲ್ಲಿ ಓಡಾಡುವಂತಹ ಎಲ್ಲಾ ಮಹಿಳೆಯರಿಗೂ ಉಚಿತ ಬಸ್ ಪಾಸ್ ಎಂದು ಹೇಳಿದ್ದೀರಿ. ಆಗ ನೀಲಿ ಬಸ್ಸು ಕೆಂಪು ಬಸ್ಸು ಎಂದು ಯಾರಿಗೂ ಹೇಳಿರಲಿಲ್ಲ.. ಈಗ ನಮ್ಮ ವಿನಂತಿ ಏನೆಂದರೆ, ಮಲೆನಾಡ ಭಾಗದಲ್ಲಿ ಸರ್ಕಾರಿ ಬಸ್ ಬಾರಿ ಕಡಿಮೆ ಇದೆ. ತೀರ್ಥಹಳ್ಳಿ ಕ್ಷೇತ್ರದಲ್ಲೇ ಸರ್ಕಾರಿ ಬಸ್ ಗಳಿಗಿಂತ ಖಾಸಗಿ ಬಸ್ ಗಳೇ ಹೆಚ್ಚು ಓಡಾಡುತ್ತಿದೆ. ತೀರ್ಥಹಳ್ಳಿ ಜನರು ಕೂಡ ಕಾಂಗ್ರೆಸ್ ಪಕ್ಷಕ್ಕೆ ಮತವನ್ನು ನೀಡಿದ್ದಾರೆ. ಹಾಗಾಗಿ ಖಾಸಗಿ ಬಸ್ ಗಳಿಗೆ ಓಡಾಡುವಂಥ ಮಹಿಳೆಯರಿಗೂ ಪಾಸ್ ವಿತರಣೆ ಮಾಡಿ ಸಬ್ಸಿಡಿ ನೀಡಬೇಕು ಎಂದು ಆಗ್ರಹಿಸಿದರು. ನೀವು ಕೊಡುತ್ತೇನೆ ಎಂದು ಹೇಳಿ ಕೊಡದೆ ಇರುವುದು ಈ ಎಲ್ಲಾ ವಿಚಾರವನ್ನು ಜನರು ಗಮನಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರ ಕೊಟ್ಟಂತಹ ಗ್ಯಾರಂಟಿಯನ್ನು ನೀಡದೆ ಇದ್ದಲ್ಲಿ ರಸ್ತೆಗೆ ಇಳಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಮಾಜಿ ಗೃಹಸಚಿವ ಆರಗ ಜ್ಞಾನೇಂದ್ರ, ಧನಂಜಯ ಸರ್ಜಿ, ಟಿ ಡಿ ಮೇಘರಾಜ್, ಬಾಳೆಬೈಲು ರಾಘವೇಂದ್ರ, ನವೀನ್ ಹೆದ್ದೂರು, ಪ್ರಶಾಂತ್ ಕುಕ್ಕೆ, ರಕ್ಷಿತ್ ಮೇಗರವಳ್ಳಿ, ಬೇಗುವಳ್ಳಿ ಸತೀಶ್, ಅಶೋಕ್ ಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023