ತೀರ್ಥಹಳ್ಳಿ ತಾಲೂಕಲ್ಲಿ ದಸರಾ ಸಂಭ್ರಮ!
– ತೀರ್ಥಹಳ್ಳಿ ಶ್ರೀ ರಾಮೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ
– ಚಿಲುಮೆ ಜಡ್ಡು ಶಿವನಾಗ ಕ್ಷೇತ್ರದಲ್ಲಿ ಭರ್ಜರಿ ನವರಾತ್ರಿ ಉತ್ಸವ
– ಇಂದಾವರ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ದಸರಾ ರಂಗು ಮನೆ ಮಾಡಿದೆ. ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ ನಡೆಯಲಿದೆ. ರಾಮೇಶ್ವರ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 12ರವರೆಗೆ ಸನ್ನಿಧಿಯಲ್ಲಿ ನವರಾತ್ರಿ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನೆರವೇರಲಿದೆ.
ಅ. 3ರಿಂದ ಪ್ರತಿ ದಿನ ಸಪ್ತಶತೀ ಪಾರಾಯಣ ಪಂಚಾಮೃತ ಅಭೀಷೇಕ, ಕುಂಕುಮಾರ್ಚನೆ, ರುದ್ರಾಭೀಷೇಕ, ಮಹಾಮಂಗಳಾರತಿ ಮೊದಲಾದ ಉಪಚಾರಗಳಿಂದ ಶ್ರೀ ಸಾನ್ನಿಧ್ಯದಲ್ಲಿ ದೇವತಾ ಕಾರ್ಯ ನಡೆಯಲಿದೆ.
12.10.2024 ನೇ ಶನಿವಾರ ಬೆಳಿಗ್ಗೆ ವಿಜಯದಶಮಿಯಂದು ದುರ್ಗಾಹೋಮ ಸಂಪನ್ನಗೊಳ್ಳಲಿದೆ.
ಭಗವದ್ಭಕ್ತರು ಈ ವಿಶೇಷ ದೇವ್ಯತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ದೇವರ ಸಿರಿಮುಡಿ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಮಾಡಲಾಗಿದೆ.
ಸಪ್ತಶತೀ ಪಾರಾಯಣ, ದುರ್ಗಾಹೋಮ* ಸೇವೆ ಮಾಡಿಸಲು ಇಚ್ಚಿಸುವ ಭಕ್ತಾಧಿಗಳು ಮುಂಚಿತವಾಗಿ ದೇವಸ್ಥಾನದ ಅರ್ಚಕರಲ್ಲಿ ಹೆಸರು, ರಾಶಿ, ನಕ್ಷತ್ರ ನೋಂದಾಯಿಸಲು ಕೋರಿದೆ.
– ಚಿಲುಮೆ ಜಡ್ಡು ಶಿವನಾಗ ಕ್ಷೇತ್ರದಲ್ಲಿ ಭರ್ಜರಿ ನವರಾತ್ರಿ ಉತ್ಸವ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಚಿಲುಮೆಜೆಡ್ಡು
ಶ್ರೀ ಶಿವನಾಗ ಕ್ಷೇತ್ರದ ಶ್ರೀಬ್ರಾಹ್ಮರಿ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಅ.3ರಿಂದ 12ರ ವರೆಗೆ ಭರ್ಜರಿ ನವರಾತ್ರಿ ಉತ್ಸವ ಹಮ್ಮಿಕೊಳ್ಳಲಾಗಿದೆ. 9 ದಿನ ಅಮ್ಮನವರಿಗೆ ತ್ರಿಕಾಲ ಪೂಜೆ, ವಿಶೇಷ ಅಲಂಕಾರ, ಹೋಮ, ಅನ್ನಸಂತರ್ಪಣೆ ಹಾಗೂ ಸಂಜೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ವಿಜಯ ದಶಮಿ ದಿನದಂದು ಅಮ್ಮನವರ ಪಲ್ಲಕ್ಕಿ ಉತ್ಸವ, ಬನ್ನಿ ಮುಡಿಯುವ ಕಾರ್ಯಕ್ರಮ ಜರುಗಲಿದೆ. ಭಕ್ತಾದಿಗಳು ಉತ್ಸವದಲ್ಲಿ ಪಾಲ್ಗೊಳ್ಳುವಂತೆ ಧರ್ಮದರ್ಶಿ, ನಾಗಪಾತ್ರಿ ರಮೇಶ್ ಅವರು ತಿಳಿಸಿದ್ದಾರೆ.
ಇಂದಾವರ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಸಂಭ್ರಮ
ಇಂದಾವರ ಶ್ರೀ ಮಹಾಲಕ್ಷ್ಮಿ ದೇವಸ್ಥಾನದಲ್ಲಿ ಅಕ್ಟೋಬರ್ 3 ರಿಂದ 11ನೇ ತಾರೀಕಿನವರೆಗೆ ನವರಾತ್ರಿ ಪ್ರಯುಕ್ತ ಪ್ರತಿದಿನ ಬೆಳಿಗ್ಗೆ 9 ರಿಂದ ಪಂಚಾಮೃತ ಅಭಿಷೇಕ, ಶ್ರೀ ದೇವಿ ಪಾರಾಯಣ, ಮಂಗಳಾರತಿ ಇರುತ್ತದೆ. ಅಕ್ಟೋಬರ್ 10 ನೇ ತಾರೀಕು ಗುರುವಾರ ಬೆಳಿಗ್ಗೆ 10 ಗಂಟೆಗೆ ದುರ್ಗಾಹೋಮ,ಮದ್ಯಾಹ್ನ 12.30 ಗೆ ಪೂರ್ಣಹುತಿ ಇರುತ್ತದೆ, ಮಂಗಳಾರತಿ ನಡೆಯುತ್ತದೆ, ಮತ್ತು ಅನ್ನ ಸಂತರ್ಪಣೆ ಇರುತ್ತದೆ.ಸಂಜೆ 5.30 ಗೆ ದೀಪ ನಮಸ್ಕಾರ ನಡೆಯುತ್ತದೆ. ಈ ಎಲ್ಲಾ ಪೂಜಾ ಕಾರ್ಯದಲ್ಲಿ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ದೇವಿಯ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ..
ಪಾರಾಯಣ ಮತ್ತು ದುರ್ಗಾ ಹೋಮ, ದೀಪ ನಮಸ್ಕಾರ ಮಾಡಿಸುವವರು ಮುಂಚಿತವಾಗಿ ಈ ಕೆಳಗಿನ ನಂಬರ್ ಗೆ ಸಂಪರ್ಕಿಸಬಹುದು… 998031406