ತೀರ್ಥಹಳ್ಳಿಯಲ್ಲಿ ಅ.10 ರಂದು ದಸರಾ ಕವಿಗೋಷ್ಠಿ
– ವಾಗ್ದೇವಿ ಶಾಲೆಯ ನಾಲ್ಕು ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ
– ಮಾಳೂರು ಪ್ರೌಢ ಶಾಲೆ ವಿದ್ಯಾರ್ಥಿ ದೀಕ್ಷಿತ್ ಸಾಧನೆ
– ಹೋರಾಟಗಾರ ರಿಪ್ಪನ್ ಪೇಟೆಯ ಕೃಷ್ಣಪ್ಪ, ಸೊರಬದ ವಾಮದೇವ ಗೌಡರಿಗೆ ಗೌರವ
– ದಸರಾ ಕ್ರೀಡಾಕೂಟಕ್ಕೆ ತುಂಗಾ ಕಾಲೇಜಿನ ಜಯಸೂರ್ಯ ಆಯ್ಕೆ
NAMMUR EXPRESS NEWS
ತೀರ್ಥಹಳ್ಳಿ : ಭದ್ರಾವತಿಯಲ್ಲಿ ನಡೆದ ಜಿಲ್ಲಾಮಟ್ಟದ ಚೆಸ್ ಹಾಗೂ ಯೋಗಾಸನ ಸ್ಪರ್ಧೆಗಳಲ್ಲಿ ಪಟ್ಟಣದ ಪ್ರತಿಷ್ಠಿತ ವಾಗ್ದೇವಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ತೇಜಸ್ ಎಂ ಶೆಣೈ ( 10 ನೆಯ ತರಗತಿ ), ಪ್ರಥಮ್ ಟಿ ಎನ್ ರಾವ್ (8 ನೆಯ ತರಗತಿ), ಆದ್ಯ ಹೆಚ್ ಕೆ ( 7 ನೆಯ ತರಗತಿ) ಚೆಸ್ ನಲ್ಲಿ ಪ್ರಥಮ ಸ್ಥಾನವನ್ನು ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದರೆ ಸಂಹಿತಾ (6 ನೆಯ ತರಗತಿ) ರಿದಮಿಕ್ ಯೋಗದಲ್ಲಿ ಡಿವಿಜನ್ ಗೆ ಆಯ್ಕೆಯಾಗಿದ್ದಾರೆ.
ಇವರ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಜಗದೀಶ್ ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಅಭಿನಂದಿಸಿ ಮುಂದಿನ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ.
ತೀರ್ಥಹಳ್ಳಿಯಲ್ಲಿ ಅ.10 ರಂದು ದಸರಾ ಕವಿಗೋಷ್ಠಿ
ತೀರ್ಥಹಳ್ಳಿ: ಪ್ರತಿ ವರ್ಷದಂತೆ ಶ್ರೀ ರಾಮೇಶ್ವರ ದೇವರ ದಸರಾ ಉತ್ಸವದ ಅಂಗವಾಗಿ ದಸರಾ ಸಾಂಸ್ಕೃತಿಕ ಸಮಿತಿ ವಿಭಾಗದ ವತಿಯಿಂದ ಈ ವರ್ಷ ಕೂಡಾ ಅಕ್ಟೋಬರ್ 10 ನೇ ತಾರೀಕಿನಂದು ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಮಟ್ಟದ ಕವಿಗೋಷ್ಠಿಯನ್ನು ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸಲಾಗಿದೆ.ದಸರಾ ಕವಿಗೋಷ್ಠಿ ಸಂಚಾಲಕರಾದ ಡಾನ್ ರಾಮಣ್ಣ ತಿಳಿಸಿದ್ದಾರೆ.
ಪಟ್ಟಣದ ತುಂಗಾ ಮಹಾವಿದ್ಯಾಲಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಕೋಣಂದೂರಿನ ಶರಾವತಿ ಪ್ರಥಮದರ್ಜೆಕಾಲೇಜಿನ
ಸಹಯೋಗದೊಂದಿಗೆ ನಡೆಯುವ ಈ ಕವಿಗೋಷ್ಠಿಯಲ್ಲಿ ಕರಾವಳಿ ಮತ್ತು ಮಲೆನಾಡಿನ ಹಿರಿಯ ಮತ್ತು ಉದಯೋನ್ಮುಖ ಸಾಹಿತಿಗಳು
ಈ ಕವಿಗೋಷ್ಠಿಯಲ್ಲಿ ಪಾಲ್ಗೊಳ್ಳಲಿದ್ದಾರೆ.
ಪ್ರಥಮ ಬಹುಮಾನ 5000 ರೂ, ದ್ವಿತೀಯ 3000 ರೂ, ತೃತೀಯ 2000 ಹಾಗೂ ಸಮಾಧಾನಕರ 1000 ರೂ ನಗದು ಬಹುಮಾನದೊಂದಿಗೆ ಸ್ಮರಣಿಕೆ ನೀಡಿ ಗೌರವಿಸಲಾಗುವುದು. ತಾಲೂಕಿನವರನ್ನು ಹೊರತು ಪಡಿಸಿ ಹೊರಗಿನಿಂದ ಬರುವವರಿಗೆ ಬಸ್ ಪ್ರಯಾಣ ವೆಚ್ಚವನ್ನೂ ನೀಡಲಾಗುವುದು.
ಕವನವನ್ನು ಕಳುಹಿಸಲು ಕೊನೆಯ ದಿನ 9-10-2024 ಆಗಿರಲಿದೆ. ಈ ಮೊದಲು ಬೇರೆಡೆ ಪ್ರಸ್ತುತ ಪಡಿಸದ ಸಾಮಾಜಿಕ ಕಳಕಳಿಯ ಕವನಗಳಿಗೆ ಸ್ವಾಗತ. ಒಂದು ಪುಟಕ್ಕೆ ಸೀಮಿತವಾಗಿದ್ದು ವಾಚನ ಸಮಯ ಮೂರು ನಿಮಿಷ ಮೀರದಂತಿರಲಿ. ಕವನವನ್ನು
ಕಳುಹಿಸುವವರು ಪೂರ್ಣ ವಿಳಾಸದೊಂದಿಗೆ ತಮ್ಮ
ಪರಿಚಯವನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಬೇಕು.ಕವನ ಕಳುಹಿಸಿದವರಿಗೆ ಮಾಹಿತಿ ನೀಡಲಾಗುವುದು ಎಂದು ಡಾನ್ ರಾಮಣ್ಣ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 9480924888, 9480924088
ಮಾಳೂರುಶಾಲೆ ವಿದ್ಯಾರ್ಥಿ ದೀಕ್ಷಿತ್ ಸಾ ಪ್ರೌಢ ಧನೆ
ಭದ್ರಾವತಿಯಲ್ಲಿ ನಡೆದ ಪ್ರೌಢಶಾಲಾ ವಿಭಾಗದ ಚೆಸ್ ಪಂದ್ಯಾವಳಿಯಲ್ಲಿ ಮಾಳೂರು ಪ್ರೌಢ ಶಾಲೆ ವಿದ್ಯಾರ್ಥಿ ದೀಕ್ಷಿತ್ ಪ್ರಥಮ ಸ್ಥಾನ ಪಡೆಯುವ ಮುಖಾಂತರ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಹಾಗೂ ಪೋಷಕರಿಗೆ,ತಾಲ್ಲೂಕಿಗೆ ಕೀರ್ತಿಯನ್ನು ತಂದಿದ್ದಾನೆ.
ಹೋರಾಟಗಾರ ರಿಪ್ಪನ್ ಪೇಟೆಯ ಕೃಷ್ಣಪ್ಪ, ಸೊರಬದ ವಾಮದೇವ ಗೌಡರಿಗೆ ಗೌರವ
ತೀರ್ಥಹಳ್ಳಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ತೀರ್ಥಹಳ್ಳಿ ಶಾಖೆಗೆ ಸೌಹಾರ್ಧಯುತ ಭೇಟಿ ನೀಡಿದ್ದ ಹಿರಿಯ ಸೈಕ್ಲಿಷ್ಟ್, ಸಾಮಾಜಿಕ ಹೋರಾಟಗಾರ ರಿಪ್ಪನ್ ಪೇಟೆಯ ಕೃಷ್ಣಪ್ಪ ಹಾಗೂ ಹಿರಿಯ ಸಾಮಾಜಿಕ ಹೋರಾಟಗಾರ ಸೊರಬದ ವಾಮದೇವ ಗೌಡರನ್ನು ಆತ್ಮೀಯವಾಗಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು, ಸಂಘದ ಮ್ಯಾನೇಜರ್ ಕಾಡಪ್ಪ ಗೌಡ ಇದ್ದರು.
ದಸರಾ ಕ್ರೀಡಾಕೂಟಕ್ಕೆ ತುಂಗಾ ಕಾಲೇಜಿನ ಜಯಸೂರ್ಯ ಆಯ್ಕೆ
ತೀರ್ಥಹಳ್ಳಿ: ತುಮಕೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಂತಹ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ ತುಂಗಾ ಕಾಲೇಜಿನ ದ್ವಿತೀಯ ಬಿ.ಕಾಂ ವಿಭಾಗದ ವಿದ್ಯಾರ್ಥಿಯಾದ ಜಯಸೂರ್ಯರವರು 110 ಮೀಟರ್ ಹರ್ಡಲ್ಸ್ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ಹೆಸರಾಂತ ಮೈಸೂರು ಜಿಲ್ಲೆಯಲ್ಲಿ ನಡೆಯುವ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಆಯ್ಕೆ ಆಗಿರುತ್ತಾರೆ.ಇವನು ರಾಜ್ಯ ಮಟ್ಟದ ಕ್ರೀಡಾ ಪಟು ಹಾಗೂ ದೇವಂಗಿ ಶಾಲೆಯ ಮುಖ್ಯ ಶಿಕ್ಷಕಿ ಭಾರತಿ ಅವರ ಪುತ್ರ. ತುಂಗಾ ಕಾಲೇಜಿನ ಪ್ರಾಂಶುಪಾಲರು ಮತ್ತು ಆಡಳಿತ ಮಂಡಳಿ ಶುಭ ಹಾರೈಸಿದ್ದಾರೆ.