ಕೋಣಂದೂರು ವಾರದ ಸಂತೆಯಲ್ಲಿ ಮೀನು ಗೋಲ್ ಮಾಲ್?!
– ತಿನ್ನಲು ಯೋಗ್ಯವಲ್ಲದ ಮೀನುಗಳ ಮಾರಾಟ
– ಗೋಪಿ ನೇತೃತ್ವದಲ್ಲಿ ಗ್ರಾಮ ಪಂಚಾಯತ್ ಆಡಳಿತದಿಂದ ಎಚ್ಚರಿಕೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕು ಕೋಣಂದೂರಲ್ಲಿ ಮಂಗಳವಾರ ವಾರದ ಸಂತೆ ನಡೆಯುತ್ತಿದ್ದು , ಈ ಸಂತೆಯಲ್ಲಿ ಕೆಲ ಮೀನು ವ್ಯಾಪಾರಿಗಳು ಈಗಾಗಲೇ ನಿಷೇಧ ಮಾಡಿರುವ ಮುರುಗೋಡು ಮೀನಿನಂತೆ ಕಾಣುವ ಆಫ್ರಿಕನ್ ಕ್ಯಾಟ್ ಫಿಷ್ ಮತ್ತು ಬಾಳೆಮೀನುಗಳನ್ನು ಕದ್ದು ಮುಚ್ಚಿ ವ್ಯಾಪಾರ ಮಾಡುತ್ತಿದ್ದಾರೆ. ಈ ಬಗ್ಗೆ ಕೋಣಂದೂರು ಗ್ರಾಮ ಪಂಚಾಯತ್ ಆಡಳಿತ ಖಡಕ್ ಕ್ರಮ ಕೈಗೊಂಡಿದೆ.
ಇಲ್ಲಿ ಮಾರಾಟವಾಗುತ್ತಿದ್ದ ಕೆಲವು ಮೀನುಗಳು ಆರೋಗ್ಯಕ್ಕೆ ಹಾನಿಕಾರಕವಾಗಿದೆ ದೇಶ ವಿದೇಶಗಳಲ್ಲಿ ತಿನ್ನಲು ಯೋಗ್ಯವಲ್ಲ ಮನುಷ್ಯನ ದೇಹ ಮಲೆ ವ್ಯತಿರಿಕ್ತವಾಗಿ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಬ್ಯಾನ್ ಮಾಡಲಾಗಿದೆ ಎಂದು ತಿಳಿದುಬಂದಿದ್ದು, ಇದನ್ನು ಮನಗಂಡು ಕೋಣಂದೂರು ಗ್ರಾಮ ಪಂಚಾಯತಿ ಅಧ್ಯಕ್ಷ ಮಂಗಳ ಗೋಪಿ, ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮಂಜುನಾಥ್, ಪಂಚಾಯತ್ ಅಡಳಿತಾಧಿಕಾರಿ ನಾಗರಾಜ್ ಮತ್ತು ಸಂತೋಷ್ ಸಂತೆಯಲ್ಲಿ ಈ ಮೀನುಗಳನ್ನು ಕದ್ದು ಮಾರುತ್ತಿದ್ದ ಅಂಗಡಿಗಳಿಗೆ ಧಿಡೀರ್ ಭೇಟಿ ನೀಡಿ ಇನ್ನು ಮುಂದೆ ಮಾರಿದಲ್ಲಿ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಗ್ರಾಮ ಪಂಚಾಯತ್ ಆಡಳಿತತ ಈ ಕ್ರಮಕ್ಕೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.