ಮಕ್ಕಳಿಗೆ ಉಚಿತ ಯೋಗ ತರಬೇತಿ ಕಾರ್ಯಕ್ರಮ!!– ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ತೀರ್ಥಹಳ್ಳಿ ವಿದ್ಯಾರ್ಥಿಗಳಿಗೆ ತರಬೇತಿ!
– ಜೀವನದಲ್ಲಿ ಯೋಗ ಜ್ಞಾನ ಪಡೆಯುವುದು ಅತೀ ಮುಖ್ಯ!
NAMMUR EXPRESS NEWS
ತೀರ್ಥಹಳ್ಳಿ: ಭಾರತೀಯ ಯೋಗಶಿಕ್ಷಣ ಸಮಿತಿ ತೀರ್ಥಹಳ್ಳಿ ವತಿಯಿಂದ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ತೀರ್ಥಹಳ್ಳಿಯಲ್ಲಿ ನ. 16ರಂದು ಉಚಿತ ಯೋಗ ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಬಿ. ಇ. ಒ ಗಣೇಶ್ ದೀಪಬೆಳಗಿಸಿ ಉದ್ಘಾಟನೆ ಮಾಡಿ ಮಾತನಾಡಿದ ಅವರು ಯೋಗ ಎನ್ನುವುದು ಸಾಮಾನ್ಯವಾದದಲ್ಲ, ಮನಸ್ಸಿದ್ದರೆ ಪ್ರತಿಯೊಬ್ಬರೂ ಯೋಗ ಮಾಡಬಹುದು, ಯೋಗ ಹುಟ್ಟಿರುವುದು ಭಾರತದಲ್ಲಿ ಆದರೆ ಭಾರತೀಯ ಜನರಿಗೆ ಸಂಪೂರ್ಣ ಯೋಗ ಜ್ಞಾನವಿಲ್ಲ.
ಬೇರೆ ರಾಷ್ಟ್ರದಲ್ಲಿ ಜನರು ಯೋಗದ ಪ್ರಯೋಜನಕಾರಿ ಪಡೆಯುತ್ತಿದ್ದು, ಭಾರತದಲ್ಲಿ ಯುವಕರು ಇದರ ಪ್ರಯೋಜನ ಪಡೆಯುತ್ತಿಲ್ಲ.ಆದ್ದರಿಂದ ಬಾಲ್ಯದಿಂದಲೇ ಯೋಗದ ಪ್ರಯೋಜನ ಪಡೆಯುವುದು ನೀವು ಅತೀ ಮುಖ್ಯ ಎಂದು ಹೇಳಿದರು.
ಯೋಗ ಶಿಕ್ಷಕರಿಂದ ಯೋಗಾಸನದ ಬಗ್ಗೆ ಮಾಹಿತಿ ತಿಳಿದು ಯೋಗದ ಜ್ಞಾನ ಪಡೆಯಬೇಕು ಅಭ್ಯಾಸ ಮಾಡಬೇಕೆಂದು ಕುವೆಂಪು ಶಾಲೆ ತೀರ್ಥಹಳ್ಳಿ ಎಸ್. ಡಿ. ಎಂ. ಸಿ ಅಧ್ಯಕ್ಷರು ಸತೀಶ್ ಶೆಟ್ಟಿ ತಿಳಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ ತೀರ್ಥಹಳ್ಳಿಯಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿನಿತ್ಯ ಬೆಳಗ್ಗೆ ಯೋಗ ತರಬೇತಿ ನೀಡಲಾಗುತ್ತದೆ.ಇದು ನಿಜಕ್ಕೂ ಸಂಸ್ಥೆಯ ಉತ್ತಮ ಕಾರ್ಯ ಎಂದು ಎಸ್. ಡಿ. ಎಂ. ಸಿ ಅಧ್ಯಕ್ಷರಾದ ಅವರು ಸದಸ್ಯರು ಹಾಗೂ ಶಿಕ್ಷಕರ ವರ್ಗದವರನ್ನು ಅಭಿನಂದಿಸಿದರು.
ನಂತರ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಶರೀರ ಸಂಚಲನ, ಸೂರ್ಯ ನಮಸ್ಕಾರ ಹಾಗೂ ಇತರೆ ಐದು ಆಸನಗಳನ್ನು ಮಕ್ಕಳಿಗೆ ಅಭ್ಯಾಸ ಮಾಡಿಸಲಾಯಿತು. ಶಾಲಾ ಶಿಕ್ಷಕಿ ಸುರೇಖಾ ನೀತಿ ಕಥೆ ಹೇಳಿದರು.
ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ವೆಂಕಟೇಶ್ ಟಿ. ಆರ್ ಮತ್ತು ಪ್ರಕಾಶ್ ಟಿ. ವಿ, ಶಾಲೆಯ ಮುಖ್ಯ ಶಿಕ್ಷಕರು ನಾಗರಾಜ್ ಜೆ, ಶಿಕ್ಷಕರಾದ ಶೋಭಲತಾ, ಶಿವಪುತ್ರಪ್ಪ, ಅಶ್ವಿನಿ, ಸಂಗೀತ, ಸುಲೋಚನಾ ಇವರುಗಳು ಉಪಸ್ಥಿತರಿದ್ದರು.