ತೀರ್ಥಹಳ್ಳಿಯಲ್ಲಿ ಗಾಂಧಿ ಜಯಂತಿ ಸಂಭ್ರಮ!
– ಶ್ರಮದಾನ, ಸ್ವಚ್ಛತೆ ಮೂಲಕ ಮಾದರಿಯಾಗಿ ಆಚರಣೆ
– ತೀರ್ಥಹಳ್ಳಿ ಆಗುಂಬೆ ಬಸ್ ನಿಲ್ದಾಣ ಸ್ವಚ್ಛ ಮಾಡಿದ ಸುನ್ನಿ ಸಂಘಟನೆ
– ಶಾಲಾ, ಕಾಲೇಜುಗಳಲ್ಲಿ ಆಚರಣೆ: ಗಾಂಧಿಗೆ ನಮನ
– ತೂದೂರಲ್ಲಿ ಮಧುರಾಜ್ ಹೆಗ್ಡೆ ನೇತೃತ್ವದಲ್ಲಿ ಸ್ವಚ್ಛತೆ ಕಾರ್ಯ
– ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘದಿಂದ ಶ್ರಮದಾನ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಎಲ್ಲೆಡೆ ಗಾಂಧಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿ ಜಯಂತಿಯನ್ನು ಶ್ರಮದಾನ, ಕಾರ್ಯಕ್ರಮಗಳ ಮೂಲಕ ಆಚರಣೆ ಮಾಡಲಾಯಿತು.
ವಿವಿಧ ಪಕ್ಷಗಳು, ಸಂಘ ಸಂಸ್ಥೆಗಳು, ಶಾಲಾ ಕಾಲೇಜಿನಲ್ಲಿ ಗಾಂಧಿಗೆ ನಮನ ಸಲ್ಲಿಸಲಾಯಿತು.
ಸುನ್ನಿ ಸಂಘಟನೆಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ
ಮಹಾತ್ಮ ಗಾಂಧೀಜಿ ದಿನದಂದು ಸುನ್ನಿ ಸಂಘಟನೆಯ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ ಆಗುಂಬೆ ಬಸ್ ನಿಲ್ದಾಣ ಸುತ್ತಮುತ್ತ ಸ್ವಚ್ಛತೆ ನಡೆಯಿತು. SSF SVS ಸಂಘಟನೆಯ ಕೂಡ ಸ್ವಚ್ಛತಾ ಅಭಿಯಾನವನ್ನು ಮಾಡಬೇಕು ಎಂದು ನಿರ್ಧಾರವನ್ನ ಮಾಡಲಾಗಿತ್ತು.ತೀರ್ಥಹಳ್ಳಿಯ ಹೃದಯ ಭಾಗವಾದ ಆಗುಂಬೆ ಬಸ್ ಸ್ಟಾಂಡ್ ಸ್ವಚ್ಛಗೊಳಿಸಲಾಯಿತು. ಮುಸ್ಲಿಂ ಸಮುದಾಯದ ಪ್ರಮುಖರು, ನ್ಯಾಷನಲ್ ಸಂಸ್ಥೆಯ ರೆಹಮಾನ್ ಇತರರು ಇದ್ದರು.
ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಜಯಂತಿ
ತೀರ್ಥಹಳ್ಳಿ ಬಸ್ ಸ್ಟಾಂಡ್ ಸಮೀಪದ ಕಾಂಗ್ರೆಸ್ ಕಚೇರಿಯಲ್ಲಿ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಯಿತು. ಡಾ.ಆರ್.ಎಂ.ಮಂಜುನಾಥ ಗೌಡ, ಕೆಸ್ತೂರು ಮಂಜುನಾಥ್, ಮೂಡುಬ ರಾಘವೇಂದ್ರ ಸೇರಿ ಕಾಂಗ್ರೆಸ್ ನಾಯಕರು, ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
ಎಲ್ಲಾ ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಆಚರಣೆ
ತೀರ್ಥಹಳ್ಳಿ ತಾಲೂಕಿನ ಎಲ್ಲಾ ಶಾಲೆ ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಗಾಂಧಿ ಜಯಂತಿಯನ್ನು ಆಚರಣೆ ಮಾಡಲಾಯಿತು. ಶ್ರಮದಾನ ಮೂಲಕ ಸ್ವಚ್ಛತೆ ಮಾಡಲಾಯಿತು.
ತೂದೂರಲ್ಲಿ ಸ್ವಚ್ಛತಾ ಕಾರ್ಯಕ್ರಮ
ತೀರ್ಥಹಳ್ಳಿ ತಾಲೂಕಿನ ತೂದೂರಿನ ರಾಷ್ಟ್ರೀಯ ಹೆದ್ದಾರಿ ಅಕ್ಕಪಕ್ಕ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಮಧುರಾಜ್ ಹೆಗಡೆ ಹಾಗೂ ಇತರರು ಸ್ವಚ್ಛಗೊಳಿಸಿದರು. ಗುರುಪ್ರಸಾದ್ ಫ್ಯಾಕ್ಟರಿ ಕಾರ್ಮಿಕರು, ತುದೂರು ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷರು, ಸದಸ್ಯರು, ಶಾಲಾ ಶಿಕ್ಷಕರು ಹಾಗೂ ಶಾಲಾ ಮಕ್ಕಳು ಮತ್ತು ವಿನಾಯಕ ಸಂಘದ ಸದಸ್ಯರು ಭಾಗಿಯಾಗಿದ್ದರು.
ಸರ್ಕಾರಿ ನೌಕರರ ಸಂಘದ ಸ್ವಚ್ಛತೆ
ತೀರ್ಥಹಳ್ಳಿ ಸರ್ಕಾರಿ ನೌಕರರ ಸಂಘ ಕೂಡ ಗಾಂಧಿ ಜಯಂತಿಯನ್ನು ಸ್ವಚ್ಛತೆ ಮೂಲಕ ಆಚರಣೆ ಮಾಡಿತು