ತೀರ್ಥಹಳ್ಳಿಗೆ ಗಣೇಶ್ ನೂತನ ಶಿಕ್ಷಣಾಧಿಕಾರಿ!
– ಅಧಿಕಾರ ವಹಿಸಿಕೊಂಡ ಮೊದಲ ದಿನವೇ ಹೋರಾಟದ ಸ್ವಾಗತ
– ಮೂಡಬಿದ್ರೆಯಿಂದ ವರ್ಗಾವಣೆ: ತೀರ್ಥಹಳ್ಳಿಯ ಶಿಕ್ಷಣ ವ್ಯವಸ್ಥೆಗೆ ಬೇಕು ಮಾಸ್ಟರ್ ಪ್ಲಾನ್
NAMMUR EXPRESS NEWS
ತೀರ್ಥಹಳ್ಳಿ ತಾಲೂಕಿನಲ್ಲಿ ಕಳೆದೆರಡು ತಿಂಗಳಿನಿಂದ ಖಾಲಿಯಿದ್ದ ಶಿಕ್ಷಣಾಧಿಕಾರಿಗಳ ಹುದ್ದೆಗೆ ಮೂಡಬಿದ್ರೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗಣೇಶ್ ಎಂಬುವರನ್ನು ನೇಮಕ ಮಾಡಲಾಗಿದೆ. ಅವರು ತೀರ್ಥಹಳ್ಳಿ ನೂತನ ಬಿಇಓ ಆಗಿ ಸೇವೆ ಸಲ್ಲಿಸಲು ಆಗಮಿಸಿದ್ದಾರೆ.
ಹೊಸನಗರ ತಾಲೂಕು ರಿಪ್ಪಿನಪೇಟೆ ಮೂಲದ ಗಣೇಶ್ ಅವರು ಉತ್ತಮ ಅಧಿಕಾರಿ ಎಂದೇ ಹೆಸರು ಪಡೆದಿದ್ದು ಕರಾವಳಿ ಶಿಕ್ಷಣ ವ್ಯವಸ್ಥೆಯಲ್ಲಿ ಕೆಲಸ ಮಾಡಿದ ಅನುಭವ ಇದೆ. ತೀರ್ಥಹಳ್ಳಿಯ ಆಡಳಿತ ಅವರನ್ನು ಸ್ವಾಗತಿಸಿದೆ.
ಹೊಸ ಬಿಇಓಗೆ ಹೋರಾಟದ ಸ್ವಾಗತ
ತೀರ್ಥಹಳ್ಳಿ ಸೊಪ್ಪುಗುಡ್ಡೆ ವಿಶೇಷ ಚೇತನ ಶಾಲೆ ಮುಖ್ಯ ಉಪಾಧ್ಯಾಯರಾಗಿದ್ದ ಕುಮಾರ್ ಅವರನ್ನು ವರ್ಗಾವಣೆ ಮಾಡಿರುವ ಪ್ರಕರಣ ಈಗ ಹೋರಾಟದ ಸ್ವರೂಪ ಪಡೆದಿದೆ. ಮಂಗಳವಾರ ಬೆಳಿಗ್ಗೆ 11ಗಂಟೆಗೆ ತಾಲೂಕು ಕಚೇರಿ ಎದುರು ಸೊಪ್ಪುಗುಡ್ಡೆ ವಿಶೇಷ ಚೇತನ ಮಕ್ಕಳು ನಿರಶನ ನಡೆಸಲಿದ್ದಾರೆ. ಶಾಲೆಯ ಮಕ್ಕಳ ಪೋಷಕರು ಭಾಗವಹಿಸಲಿದ್ದಾರೆ. ನೂತನ ಶಿಕ್ಷಣ ಅಧಿಕಾರಿಗೆ ಈ ಪ್ರಕರಣ ಬಗೆ ಹರಿಸುವ ಹೊಣೆ ಸಿಗಲಿದೆ.
ತೀರ್ಥಹಳ್ಳಿ ಶಿಕ್ಷಣ ವ್ಯವಸ್ಥೆಗೆ ಬೇಕು ಮಾಸ್ಟರ್ ಪ್ಲಾನ್!
ತೀರ್ಥಹಳ್ಳಿ ಶಿಕ್ಷಣ ಇಲಾಖೆ ಕಳೆದ ಕೆಲವು ವರ್ಷಗಳಿಂದ ಜಡ್ಡುಗಟ್ಟಿದೆ.ಅಭಿವೃದ್ಧಿ ಯೋಚನೆಗಳು, ಹೊಸತನ ಇಲ್ಲದಾಗಿದೆ ಎಂಬ ಆರೋಪ ಇದೆ. ಈ ಹಿನ್ನೆಲೆ ಗಣೇಶ್ ಅವರ ಮೇಲೆ ದೊಡ್ಡ ಜವಾಬ್ದಾರಿ ಇದೆ.
ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?
HOW TO APPLY : NEET-UG COUNSELLING 2023