ಗಣೇಶೋತ್ಸವ ವಿಶೇಷ ಟಾಪ್ ನ್ಯೂಸ್
– ಅರಳಾಪುರದ ಗಣೇಶೋತ್ಸವ ಸಂಭ್ರಮದಲ್ಲಿ ಸಾಧಕರಿಬ್ಬರಿಗೆ ಸನ್ಮಾನ
– ಶೀರೂರಿನ ಗಣೇಶೋತ್ಸವದಲ್ಲಿ ಗಮನ ಸೆಳೆದ ಮಹಿಳೆಯರ ಡ್ಯಾನ್ಸ್
– ಬೆಜ್ಜವಳ್ಳಿಯಲ್ಲಿ ಹಬ್ಬದ ಅಂಗವಾಗಿ ಸಿಹಿ ಹಂಚಿದ ಮುಸ್ಲಿಂ ಬಾಂಧವರು!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹೊದಲ ಅರಳಾಪುರ ಗ್ರಾ.ಪಂ.ವ್ಯಾಪ್ತಿಯ ಅರಳಾಪುರ ನವೋದಯ ಯುವಕ ಸಂಘ(ರಿ) ಹಾಗೂ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿ ವತಿಯಿಂದ ಇದೇ ಗ್ರಾಮದ ಸಾಧಕರಾದ ನಿವೃತ್ತ ಯೋಧ ಅರಳಾಪುರದ ಸಂತೋಷ್ ಎ.ಕೆ.ಮತ್ತು ಮೂಲತಃ ವಡ್ಡಿನಬಯಲಿನ ಉಪನ್ಯಾಸಕ,ಸಾಹಿತಿ ಹರೀಶ್ ಟಿ.ಜಿ. ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಅರಳಾಪುರದ ವಜ್ರ ರಂಗಮಂದಿರದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಯೋಧ ಸಂತೋಷ್ ಎ.ಕೆ. ದೇಶದ ಸೇನೆ ಸೇರುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ,ಇದು ನನ್ನ ಪುಣ್ಯ ಅಂತಹದೊಂದು ಯೋಗ ನನಗ ಸಿಕ್ತು,ಇಂದಿನ 16ವರುಷದಿಂದ 21ವರುಷದೊಳಗಿನ ಯುವಕರು ನಮ್ಮ ದೇಶದ ಸೇನೆ ಸೇರುವ ಬಗ್ಗೆ ಗುರಿ ಹೊಂದಬೇಕು ಎಂದು, ತನ್ನ 24 ವರುಷಗಳ ಸೇನಾ ಬದುಕಿನ ಹಲವು ಅನುಭವಗಳನ್ನು ಹಂಚಿಕೊಂಡರು.
ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ಉಪನ್ಯಾಸಕ,ಸಾಹಿತಿ ಹರೀಶ್ ಟಿ.ಜಿ.ಮಾತನಾಡಿ ನಾನು ಬೆಳೆದ ಪರಿಸರ,ನನ್ನ ಬಾಲ್ಯದ ದಿನಗಳ ಬದುಕಿನ ಅನುಭವಗಳೇ ಸಾಹಿತ್ಯದ ಬರವಣಿಗೆಗೆ ಪ್ರೇರಣೆಯಾಗಿದೆ,ಇಲ್ಲಿನ ಪರಿಸರ,ನಮ್ಮೊಂದಿಗಿದ್ದ ವ್ಯಕ್ತಿಗಳು ಬರಹಗಳಲ್ಲಿ ಪಾತ್ರರಾಗಿದ್ದಾರೆ,ಈ ಹುಟ್ಟೂರಿನ ಸನ್ಮಾನ ಎಂದಿಗೂ ಮರೆಯಲಾಗದ ಸನ್ಮಾನವಾಗಿದೆ ಎಂದರು.
ವೇದಿಕೆಯಲ್ಲಿ ನಿವೃತ್ತ ಉಪನ್ಯಾಸಕ,ವ್ಯಂಗ್ಯಚಿತ್ರ ಕಲಾವಿದ ನಟರಾಜ್ ಅರಳಸುರಳಿ, ಕೃಷಿಕ ವಡ್ಡಿನಬಯಲು ಜಗದೀಶ್,ಯುವಕ ಸಂಘ ಹಾಗೂ ಶ್ರೀ ವಿದ್ಯಾಗಣಪತಿ ಸೇವಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಹೊದಲ -ಅರಳಾಪುರದ ವರಸಿದ್ಧಿ ವಿನಾಯಕ ಮಹಿಳಾ ಭಜನಾ ತಂಡದಿಂದ ಭಜನೆ ಮತ್ತು ಹೆಸರಾಂತ ಸ್ಯಾಕ್ಸಫೋನ್ ಕಲಾವಿದ ಹಂಗಾರುಕೊಡಿಗೆ ಪುಟ್ಟಣ್ಣರವರಿದ ಗಾನ ಸಂಜೆ ಏರ್ಪಡಿಸಲಾಗಿತ್ತು.
ಶೀರೂರಿನ ಗಣೇಶೋತ್ಸವದಲ್ಲಿ ಗಮನ ಸೆಳೆದ ಮಹಿಳೆಯರ ಡ್ಯಾನ್ಸ್
ತಾಯಿಯನ್ನೂ ವಿಲನ್ ಆಗಿ ತೋರಿಸುತ್ತಿರುವ ಮಾನಗೆಟ್ಟ ನಿರ್ದೇಶಕರ ಧಾರಾವಾಹಿಗಳ ಅಬ್ಬರದಲ್ಲಿ, ಅಶ್ಲೀಲ ಸಂಭಾಷಣೆಗಳೇ ಹಾಸ್ಯ ಎಂದು ಕಾಮಿಡಿ ಶೋಗಳ ಹೊಲಸಿನ ನಡುವೆ ಕಳೆದುಹೋಗಿದ್ದ ತಾಯಂದಿರು ಬಹುಶಃ ಅವುಗಳಿಂದ ಬೇಸತ್ತು ಮರಳಿ ರಂ ಪ್ರೇ ಮಡಿದಂತಿದೆ.
ಮೇಗರವಳ್ಳಿ ಸಮೀಪದ ಶೀರೂರಿನ ಗಣೇಶೋತ್ಸವದಲ್ಲಿ ಹೊಸ ಹೆಂಗಸರೆಲ್ಲ ಸೇರಿ ನೃತ್ಯಕ್ಕೆ ಹಾಡಿಗೆ ಧ್ವನಿಯಾಗಿದ್ದು ವಿಶೇಷ. ಇವರನ್ನೆಲ್ಲ ವೇದಿಕೆ ಹತ್ತಿಸುವಲ್ಲಿ ಶೀರೂರಿನ ಯುವಕರ ಶ್ರಮವೂ ಇದರಲ್ಲಿ ಪ್ರಮುಖವಾಗಿದೆ.
ಬೆಜ್ಜವಳ್ಳಿಯಲ್ಲಿ ಹಬ್ಬದ ಅಂಗವಾಗಿ ಸಿಹಿ ಹಂಚಿದ ಮುಸ್ಲಿಂ ಬಾಂಧವರು!
ಗಣೇಶ ಹಬ್ಬ ಶಾಂತಿ ಸೌಹಾರ್ದತೆಯ ಹಬ್ಬ. ಬೆಜ್ಜವಳ್ಳಿಯಲ್ಲಿ ಮುಸ್ಲಿಂ ಬಾಂಧವರು ಸಿಹಿ ಹಂಚುವ ಮೂಲಕ ಗಣೇಶೋತ್ಸವದಲ್ಲಿ ಭಾಗಿಯಾದರು.