ತೀರ್ಥಹಳ್ಳಿಯಲ್ಲೂ ಹೈಟೆಕ್ ವೇಷ್ಯಾವಾಟಿಕೆ ದಂಧೆ!
– ಮಲೆನಾಡಿನ ಹಲವು ತಾಲೂಕಿಗೂ ಲಿಂಕ್..?
– ಸಿಕ್ಕಿಬಿದ್ದಿದ್ದು ಯುವತಿಯರಲ್ಲ, ಮಹಿಳೆಯರು!
– ಹೇಗೆ ಸಿಕ್ಕಿಬಿದ್ದರು…ಹೇಗೆ ದಂಧೆ ನಡೆಯುತ್ತಿತ್ತು..?
– ತೀರ್ಥಹಳ್ಳಿ ಪೊಲೀಸರ ಖಡಕ್ ಕೆಲಸಕ್ಕೆ ಮೆಚ್ಚುಗೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಹೈಟೆಕ್ ವೇಷ್ಯಾವಾಟಿಕೆ ದಂಧೆ ಬಯಲಾಗಿದ್ದು ಇದೀಗ ಈ ದಂಧೆ ಮಲೆನಾಡಿನ ಎಲ್ಲಾ ತಾಲೂಕಲ್ಲಿ ಕಾರ್ಯಚರಣೆ ಮಾಡುತ್ತಿದೆ ಎಂಬ ಸುಳಿವು ಸಿಕ್ಕಿದೆ. ಮೊಬೈಲ್ ಮೂಲಕವೇ ವ್ಯವಹಾರ ಮಾಡುವ ಈ ದಂಧೆಯಲ್ಲಿ ಮಹಿಳೆಯರು ಹೆಚ್ಚಾಗಿದ್ದಾರೆ ಎಂದು ತಿಳಿದು ಬಂದಿದೆ.
ಏನಿದು ಘಟನೆ?:
ತೀರ್ಥಹಳ್ಳಿ ಪೊಲೀಸರು ಪೇಟೆಯಲ್ಲಿಯೇ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ರೇಡ್ ನಡೆಸಿ, ಆರೋಪಿಗಳನ್ನು ಬಂಧಿಸಿದ್ದಾರೆ. ಸಾಂತ್ವನ ಕೇಂದ್ರ ಅಧಿಕಾರಿಯು ಸೇರಿದಂತೆ ಪೊಲೀಸರ ತಂಡ ಮಾಹಿತಿ ಆಧರಿಸಿ ದಾಳಿ ನಡೆಸಿದೆ. ಈ ವೇಳೆ ವಾಸದ ಮನೆಯಲ್ಲಿದ್ದ ಮೂವರು ಮಹಿಳೆಯರನ್ನು ರಕ್ಷಿಸಲಾಗಿದೆ. ಈ ಸಂಬಂಧ ಪೊಲೀಸರೇ ನೀಡಿರುವ ಪ್ರಕಟಣೆಯ ಪ್ರಕಾರ, ಇಬ್ಬರನ್ನ ಬಂಧಿಸಲಾಗಿದೆ. ಪ್ರಶಾಂತ್ ಕೆ.ಎಸ್. 33 ವರ್ಷ, ಜೆ.ಪಿ. ನಗರ, ಕಮ್ಮರಡಿ ಗ್ರಾಮ, ಆಗುಂಬೆ, ತೀರ್ಥಹಳ್ಳಿ ಮತ್ತು ಮಂಜುನಾಥ. ಎಂ, 37 ವರ್ಷ, ಮೇಲಿನ ಕುರುವಳ್ಳಿ, ತೀರ್ಥಹಳ್ಳಿ ಬಂಧಿತರು. ಈಗ ಮತ್ತಷ್ಟು ತನಿಖೆ ನಡೆಯುತ್ತಿದೆ.
ಮೊಬೈಲ್ ಮೂಲಕ ವ್ಯವಹಾರ?!
ತೀರ್ಥಹಳ್ಳಿ ಪೇಟೆಯ ಆ ಮನೆಯಲ್ಲಿ ವೇಶ್ಯಾವಾಟಿಕೆ ದಂಧೆ ನಡೆಯುತ್ತಿದೆ ಎಂಬುದು ಅಲ್ಲಿನ ಸ್ಥಳೀಯರಿಗೂ ಗೊತ್ತಿರಲಿಲ್ಲ. ಮೊಬೈಲ್ ಸಂಪರ್ಕದ ಮೂಲಕ ವ್ಯವಹಾರ ನಡೆಯುತ್ತಿತ್ತು. ಹೊರ ರಾಜ್ಯಗಳಿಂದಲೂ ಇಲ್ಲಿಗೆ ಯುವತಿಯರನ್ನ ಕರೆಸಿ ಪುನಃ ಅವರುಗಳ ಊರಿಗೆ ವಾಪಸ್ ಕಳುಹಿಸುತ್ತಿದ್ದರಂತೆ. ಹೀಗೆ ಕರೆಸಿಕೊಳ್ಳುವಾಗಲೂ ವಾಟ್ಸಾಪ್ ಮೂಲಕ ಕಾಂಟಾಕ್ಟ್ ಮಾಡುತ್ತಿದ್ದ ಆರೋಪಿಗಳು, ಅದೇ ಹೊತ್ತಿನಲ್ಲಿ ಯುವತಿಯರ ಫೋಟೋಗಳನ್ನ ತಮ್ಮ ಪರಿಚಯದ ಗ್ರಾಹಕರಿಗೆ ಕಳುಹಿಸುತ್ತಿದ್ದರಂತೆ. ಗ್ರಾಹಕರು ಇಷ್ಟಾರ್ಥದ ಮೇರೆಗೆ ನಿರ್ದಿಷ್ಟ ಜಾಗ ಹಾಗೂ ಯುವತಿಯನ್ನು ಫಿಕ್ಸ್ ಮಾಡುತ್ತಿದ್ದ ಆರೋಪಿಗಳು, ನಿರಾಂತಕವಾಗಿ ದಂಧೆ ನಡೆಸ್ತಿದ್ದರು ಎನ್ನಲಾಗಿದೆ.
ಒಂದು ಮನೆಯಲ್ಲಿ ಎರಡು ದಿನ ಕಾಲ ನಡೆಯುತ್ತಿದ್ದ ದಂಧೆ ಆನಂತರ ಇನ್ನೊಂದು ಮನೆ, ಇನ್ನೊಂದು ಜಾಗಕ್ಕೆ ಶಿಫ್ಟ್ ಆಗುತ್ತಿತ್ತು. ಹಾಗಾಗಿ ಇಲ್ಲಿ ಯಾರಿಗೂ ಅನುಮಾನ ಬರಲು ಸಾದ್ಯವಿರಲಿಲ್ಲ. ಸದ್ಯ ತೀರ್ಥಹಳ್ಳಿ ಪೊಲೀಸರು ಸ್ಥಳೀಯರು ನೀಡಿದ ಮಾಹಿತಿಯನ್ನೇ ಆಧರಿಸಿ, ದಂಧೆಗೆ ಕಡಿವಾಣ ಹಾಕಿದ್ದಾರೆ.
ಜಿಲ್ಲಾ ರಕ್ಷಣಾಧಿಕಾರಿ ಮಿಥುನ್ ಕುಮಾರ್, ಹೆಚ್ಚುವರಿ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ ಮಾರ್ಗದರ್ಶನದಲ್ಲಿ ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ತೀರ್ಥಹಳ್ಳಿ ಇನ್ಸ್ಪೆಕ್ಟರ್ ಅಶ್ವಥಗೌಡ, ಪಿಎಸ್ಐ ಸಾಗ ಅತ್ತರವಾಲ, ಪಿಎಸ್ಐ ಗಾದಿಲಿಂಗಪ್ಪ ಗೌಡರ್, ಪೊಲೀಸ್ ಸಿಬ್ಬಂದಿ, ಮಹಿಳಾ ಸಾಂತ್ವನ ಕೇಂದ್ರದ ಕಿರಣ್ ಕುಮಾರಿ ದಾಳಿಯಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ : ಗೃಹಜ್ಯೋತಿ ಅರ್ಜಿ ನೋಂದಣಿಗೆ ಹೊಸ ಲಿಂಕ್!
HOW TO APPLY : NEET-UG COUNSELLING 2023