ಹಿಲಿಕೇರಿ – ದೇವಂಗಿ ಗಣೇಶ ಸಂಭ್ರಮ!
– 5ನೇ ದಿನ 2 ಗಣಪತಿಗಳ ಸಮಾಗಮ: ಮಿನಿ ತೆಪ್ಪೋತ್ಸವಕ್ಕೆ ಸಿದ್ಧತೆ ಸಜ್ಜು
– ಮಾದರಿ ಕಾರ್ಯಕ್ರಮ ಆಯೋಜನೆಗಳ ಮೂಲಕ ಹಿಲೀಕೆರೆ, ದೇವಂಗಿ ಗಣಪತಿ ವಿಶೇಷ
– ಹಿಲಿಕೆರೆಯಲ್ಲಿ ಇಂದು ಆರ್ಕೆಸ್ಟ್ರಾ: ಸಾಧಕರಿಗೆ ಸನ್ಮಾನ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಗಣಪತಿ ಉತ್ಸವಗಳಲ್ಲಿ ಪ್ರಸಿದ್ಧಿ ಪಡೆದಿರುವ ದೇವಂಗಿ ಗಣಪತಿ ಹಾಗೂ ಹಿಲಿಕೇರಿ ಗಣಪತಿಯ ವಿಸರ್ಜನೆಯ ಸಂಭ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ.
ಈಗಾಗಲೇ ಹಿಲಿಕೇರಿಯಲ್ಲಿ ಮಂಗಳವಾರ ವಿಶೇಷ ಸತ್ಯನಾರಾಯಣ ಪೂಜೆ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮಗಳು ನಡೆದಿದ್ದು, ಇದೀಗ ಬುಧವಾರ ದೇವಂಗಿಯಲ್ಲಿ ಕಾರ್ಯಕ್ರಮ ನಡೆಯಲಿದೆ, ಹಾಗೆ ಅಂದು ಸಂಜೆ ವಿಶೇಷ ರಾಜಬೀದಿ ಮೆರವಣಿಗೆಯೊಂದಿಗೆ ಪಟಾಕಿಗಳ ಚಿತ್ತಾರ ಹಾಗೂ ವಿಶೇಷವಾದ ಕಾರ್ಯಕ್ರಮಗಳು ನಡೆಯಲಿದೆ. ಈಗಾಗಲೇ ಹಿಲಿಕೇರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 48ನೇ ವರ್ಷದ ಗಣೇಶೋತ್ಸವ ಕಾರ್ಯಕ್ರಮ ನಡೆಯುತ್ತಿದ್ದು, ದೇವಂಗಿಯಲ್ಲಿ 98ನೇ ವರ್ಷದ ಗಣೇಶೋತ್ಸವ ನಡೆಯುತ್ತಿದ್ದು ಈಗಾಗಲೇ ಎರಡು ಯುವಕ ಸಂಘಗಳು ಅದ್ದೂರಿ ವಿಸರ್ಜನಾ ಕಾರ್ಯಕ್ರಮಕ್ಕೆ ದ್ತೆ ಮಾಡಿೊಂಡಿದ್ದಾರೆ.
ಹಿಲಿಕೆರೆಯಲ್ಲಿ ಅದ್ದೂರಿ ಕಾರ್ಯಕ್ರಮ: ಇಂದು ಆರ್ಕೆಸ್ಟ್ರಾ
ಹಿಲಿಕೆರೆಯಲ್ಲಿ ಸಾಮೂಹಿಕ ಸತ್ಯನಾರಾಯಣ ವೃತ, ಅನ್ನಸಂತರ್ಪಣೆ ನಡೆಯಿತು. ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಭಾಗಿಯಾದರು.
ಮಂಗಳವಾರ ರಾತ್ರಿ ಆರ್ಕೆಸ್ಟ್ರಾ ನಡೆಯಲಿದೆ.
ಸೇವಕರು, ಶಿಕ್ಷಕರಿಗೆ, ಸಾಧಕರಿಗೆ ಸನ್ಮಾನ
ಮಂಜುಶ್ರೀ ಚಾರಿಟೇಬಲ್ ಟ್ರಸ್ಟ್ ಮಂಜುನಾಥ್ ಕೆ ಎನ್, ಶಿಕ್ಷಕಕಿಯರಾದ ಭಾಗ್ಯ, ಆಶಾ ಕಾರ್ಯಕರ್ತೆಯರಾದ ಸುಮಿತ್ರಾ, ಮುಖ್ಯ ಶಿಕ್ಷಕಿ ಶೈಲಾ, ಆಶಾ ಕಾರ್ಯಕರ್ತ ಕವಿತಾ, ಅಂಗನವಾಡಿ ಶಿಕ್ಷಕರಾದ ಸರೋಜ, ಮೊರಾರ್ಜಿ ಮುಖ್ಯ ಶಿಕ್ಷಕರಾದ ಚಂದ್ರಪ್ಪ, ಬದ್ರಿನಾರಾಯಣ, ಉಮೇಶ್ , ಅಣ್ಣಪ್ಪ ಅರಬರಕಟ್ಟೆ, ಲೈನ್ ಮ್ಯಾನ್ ಪ್ರದೀಪ್, ರಶೀದ್ ಅವರನ್ನು ಸನ್ಮಾನಿಸಲಾಯಿತು.