ಹೋಟೆಲ್ ಉದ್ಯಮಿ ಅರಾಧನಾ ವೆಂಕಟೇಶ್ ವಿಧಿವಶ
– ಅನಾರೋಗ್ಯದಿಂದ ನಿಧನ: ಇಂದು ಸಂಜೆ ತವರಲ್ಲಿ ಅಂತಿಮ ದರ್ಶನ
– ಡಿ.3ರ ಬೆಳಿಗ್ಗೆ ಅಜ್ಜನಹಳ್ಳಿಯಲ್ಲಿ ಅಂತ್ಯ ಸಂಸ್ಕಾರ
ತೀರ್ಥಹಳ್ಳಿ: ಬೆಂಗಳೂರು ಪ್ರಸಿದ್ಧ ಆರಾಧನಾ ಹೋಟೆಲ್ ಮಾಲೀಕರಾಗಿದ್ದ ಹೋಟೆಲ್ ಉದ್ಯಮಿ ಆರಾಧನಾ ವೆಂಕಟೇಶ್ ಅವರು ಬೆಂಗಳೂರಲ್ಲಿ ಅನಾರೋಗ್ಯದಿಂದ ಭಾನುವಾರ ನಿಧನರಾಗಿದ್ದಾರೆ. ಮೃತರ ದೇಹವನ್ನು ಇದೀಗ ಬೆಂಗಳೂರಿಂದ ತೀರ್ಥಹಳ್ಳಿಗೆ ತರಲಾಗುತ್ತಿದ್ದು, ಸಂಜೆ ಏಳು ಗಂಟೆಗೆ ತಲುಪಲಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ಕಮ್ಮರಡಿ ಸಮೀಪದ ಅಜ್ಜನಹಳ್ಳಿಯಲ್ಲಿ ಸಾರ್ವಜನಿಕರ ದರ್ಶನಕ್ಕೆ ನೀಡಲಾಗುವುದು ಹಾಗೂ ಮಂಗಳವಾರ ಬೆಳಿಗ್ಗೆ ಅಂತ್ಯ ಸಂಸ್ಕಾರ ನಡೆಯಲಿದೆ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ.
ಮೃತರು ಉದ್ಯಮಿ ಆರಾಧನಾ ವಸಂತ್ ಅವರ ಸಹೋದರರಾಗಿದ್ದಾರೆ.
ಮೃತರಿಗೆ ಭಾವಪೂರ್ಣ ಶ್ರದ್ಧಾಂಜಲಿ