ಕಮ್ಮರಡಿ, ರಾಮಕೃಷ್ಣಪುರದಲ್ಲಿ ಸ್ವಾತಂತ್ರ್ಯ ಹಬ್ಬದ ಸಂಭ್ರಮ!
– ಸರ್ಕಾರಿ, ಖಾಸಗಿ ಸಾರ್ವಜನಿಕರಿಗೆ ಸಿಹಿ ಹಂಚಿ ಆಚರಣೆ
– ಸಾಧಕರಿಗೆ ಸನ್ಮಾನ: ಎಲ್ಲೆಲ್ಲೂ ಸ್ವಾತಂತ್ರ್ಯ ಹಬ್ಬ
– ಕಲಿತ ಶಾಲೆಗೆ ಸೇವೆ ನೀಡಿದ ರಾಮಕೃಷ್ಣಪುರದ ಸಮರ್ಪಣಾ ತಂಡ
NAMMUR EXPRESS NEWS
ತೀರ್ಥಹಳ್ಳಿ: ಆಟೋ ಚಾಲಕರು ಮತ್ತು ಮಾಲೀಕರ ಸಂಘ ಕಮ್ಮರಡಿ (ಕೊಪ್ಪ ಸರ್ಕಲ್ ) ಇವರ ವತಿಯಿಂದ ಸ್ವಾತಂತ್ರ್ಯ ದಿನಾಚರಣೆಯನ್ನು ಗಣ್ಯರಿಗೆ ಸನ್ಮಾನ ಮಾಡಿ ಗೌರವಿಸುವ ಮೂಲಕ ಯಶಸ್ವಿಯಾಗಿದೆ.
ಕಮ್ಮರಡಿಯಲ್ಲಿನ ಅಂಗನವಾಡಿ, ವಿಶ್ವತೀರ್ಥ ಪ್ರೌಢ ಶಾಲೆ , ಮಾದರಿ ಪ್ರಾರ್ಥಮಿಕ ಶಾಲೆ, ಬಾನೊಳ್ಳಿ ಹಿರಿಯ ಪ್ರಾರ್ಥಮಿಕ ಶಾಲೆ, ಚಿಕ್ಕಳೂರು ಪ್ರಾರ್ಥಮಿಕ ಶಾಲೆ, ಹಾಗೂ ಸಾರ್ವಜನಿಕರಿಗೆ ಸಿಹಿ ಹಂಚುವ ಕಾರ್ಯಕ್ರಮ ಯಶಸ್ವಿಯಾಗಿದೆ.
ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ೀಲಕಂ ಭಟ್ರು (ಹಿರಿಯ ನಾಟಿ ವೈದ್ಯರು )ಹಾಲುಗೋಡು ಕಮ್ಮರಡಿ, ಸಮರ್ಥ್ ಹೆಬ್ಬಾರ್ಡಿ (ಸಲಹೆಗಾರರು ), ಶ್ರೀಧರ್ ಶಿಕ್ಷಕರು, ವೆಂಕಟೇಶ್ ಶಿಕ್ಷಕರು, ಜ್ಯೋತಿ ಶಿಕ್ಷಕರು, ಚಂದ್ರು ನಾಯಕ್ (ಆಟೋ ಚಾಲಕರ ಸಂಘದ ಅಧ್ಯಕ್ಷರು )ಕಮ್ಮರಡಿ ಕೊಪ್ಪ ಸರ್ಕಲ್ ಇವರಿಗೆ ಸನ್ಮಾನಿಸಿ ಗೌರವಿಸಲಾಯಿತು. ಸ್ಥಳೀಯರು ಗ್ರಾಮಸ್ಥರು ಭಾಗವಹಿಸಿದ್ದರು.
ತಾವು ಕಲಿತ ಶಾಲೆಗೆ ಸೇವೆ ನೀಡಿದ ರಾಮಕೃಷ್ಣಪುರದ ಸಮರ್ಪಣಾ ತಂಡ
ತಾವು ಕಲಿತ ಶಾಲೆಗೆ ಏನಾದರೂ ಕೊಡಬೇಕು ಎಂಬ ಭಾವನೆ ಪ್ರತಿ ವಿದ್ಯಾರ್ಥಿಗೂ ಇರುತ್ತದೆ. ಇಂತಹ ಆಲೋಚನೆಯಲ್ಲಿಯೇ ರಾಮಕೃಷ್ಣಪುರದ ಸಮರ್ಪಣಾ ತಂಡದ ಮಿತ್ರರು ತಾವು ವಿದ್ಯೆ ಕಲಿತ ಪ್ರಾಥಮಿಕ, ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಲೇಖನ ಸಾಮಗ್ರಿಗಳನ್ನು ನೀಡುವುದರೊಂದಿಗೆ ಶಿಕ್ಷಣಾಭಿಮಾನವನ್ನು ಮೆರೆದಿದ್ದಾರೆ.
ಸ್ವಾತಂತ್ರ್ಯ ದಿನದ ಅಂಗವಾಗಿ ಮುತ್ತುವಳ್ಳಿ, ಚಿಪ್ಪಳಕಟ್ಟೆ ಹಾಗೂ ರಾಮಕೃಷ್ಣಪುರದ ಶಾಲೆಗಳ ಮಕ್ಕಳಿಗೆ ಭಾಷಣ ಸ್ಪರ್ಧೆ ಏರ್ಪಡಿಸಿ ಮಕ್ಕಳಲ್ಲಿ ರಾಷ್ಟ್ರದ ಬಗ್ಗೆ ಅಭಿಮಾನ ಮತ್ತು ಮಾತನಾಡುವ ಕಲೆಯನ್ನು ಬಿತ್ತಿದ್ದಾರೆ.
ಅಲ್ಲದೇ ಮೂರೂ ಶಾಲೆಯ ಸುಮಾರು ನೂರಕ್ಕೂ ಹೆಚ್ಚಿನ ಮಕ್ಕಳಿಗೆ ನೋಟ್ ಬುಕ್ ಹಾಗೂ ಲೇಖನಾ ಸಾಮಗ್ರಿಗಳನ್ನು ವಿತರಿಸಿದ್ದಾರೆ..
ಕಳೆದ ವರ್ಷದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದು ಉತ್ತೀರ್ಣಗೊಂಡ ಮೂರು ಮಕ್ಕಳಿಗೆ ನಗದು ಬಹುಮಾನದೊಂದಿಗೆ ಸನ್ಮಾನಿಸಿ ಆ ಮಕ್ಕಳ ಮುಂದಿನ ಭವಿಷ್ಯಕ್ಕೆ ಪ್ರೇರಣೆಯಾಗಿದ್ದಾರೆ.