ತೀರ್ಥಹಳ್ಳಿಯಲ್ಲಿ ಪತ್ರಕರ್ತರ ದಿನಾಚರಣೆ ಸಂಭ್ರಮ!
– ಜುಲೈ 29ರಂದು ಸಂಜೆ ತೀರ್ಥಹಳ್ಳಿಯಲ್ಲಿ ಕಾರ್ಯಕ್ರಮ
– 19 ಮಂದಿ ಸಾಧಕರಿಗೆ ಸನ್ಮಾನ: ಸರ್ವರಿಗೂ ಸ್ವಾಗತ
NAMMUR EXPRESS NEWS
ತೀರ್ಥಹಳ್ಳಿ: ( Thirthahalli ) ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತೀರ್ಥಹಳ್ಳಿ ಘಟಕದ ಆಶ್ರಯದಲ್ಲಿ ಜು.29 ರಂದು ಶನಿವಾರ ಸಂಜೆ 4-30 ಗಂಟೆಗೆ ತೀರ್ಥಹಳ್ಳಿಯ ತುಂಗಾ ಸೇತುವೆ ಸಮೀಪವಿರುವ ಲಯನ್ಸ್ ಭವನದಲ್ಲಿ ಪತ್ರಿಕಾ ದಿನಾಚರಣೆ ಕಾರ್ಯಕ್ರಮ ನಡೆಯಲಿದೆ. ತೀರ್ಥಹಳ್ಳಿಯಲ್ಲಿ ಪತ್ರಕರ್ತರ ದಿನಾಚರಣೆ ಸಂಭ್ರಮಕ್ಕೆ ಸರ್ವರಿಗೂ ಪತ್ರಕರ್ತರ ಸಂಘ ಸ್ವಾಗತ ಮಾಡಿದೆ. ಪತ್ರಿಕಾ ದಿನಾಚರಣೆಯ ಕಾರ್ಯಕ್ರಮದಲ್ಲಿ 19 ಮಂದಿ ಸಾಧಕರಿಗೆ ಸನ್ಮಾನ ಮಾಡಲಾಗುತ್ತದೆ. ಕಾರ್ಯಕ್ರಮವನ್ನು ಶಾಸಕ ಹಾಗೂ ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಉದ್ಘಾಟಿಸುವರು. ತೀರ್ಥಹಳ್ಳಿ ತುಂಗಾ ಮಹಾವಿದ್ಯಾಲಯದ ನಿವೃತ್ತ ಪಾಂಶುಪಾಲ ಮತ್ತು ಪ್ರಸಿದ್ದ ವ್ಯಂಗ್ಯಚಿತ್ರಕಾರರಾದ ನಟರಾಜ್ ಅರಳಸುರುಳಿ ಅವರು ದಿಕ್ಸೂಚಿ ಭಾಷಣ ಮಾಡುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತೀರ್ಥಹಳ್ಳಿ ತಾ. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಮೋಹನ್ ಮುನ್ನೂರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಾ.ಪ.ಸಂ.ನ ಅಧ್ಯಕ್ಷ ಶಿವಕುಮಾರ್, ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್, ರಾಜ್ಯ ಅಪೆಕ್ಸ್ ಬ್ಯಾಂಕ್ ಮಾಜಿ ಅಧ್ಯಕ್ಷ ಡಾ.ಆರ್.ಎಂ. ಮಂಜುನಾಥ ಗೌಡ, ತೀರ್ಥಹಳ್ಳಿ ಪ.ಪಂ.ಅಧ್ಯಕ್ಷೆ ಸುಶೀಲಾ ಶೆಟ್ಟಿ, ಯುವ ಮುಖಂಡರು, ಶ್ರೀ ನಾರಾಯಣಗುರು ವಿಚಾರ ವೇದಿಕೆಯ ರಾಜ್ಯ ಕಾರ್ಯದರ್ಶಿ ಮುಡುಬ ರಾಘವೇಂದ್ರ, ಜಿಲ್ಲಾ ಕಾ.ಪ.ಸಂ. ದ ಉಪಾಧ್ಯಕ್ಷ ಹಾಲಸ್ವಾಮಿ, ತೀರ್ಥಹಳ್ಳಿ ಪೋಲಿಸ್ ವೃತ್ತದ ಪೊಲೀಸ್ ಉಪ ಅಧೀಕ್ಷಕ ಗಜಾನನ ರಾಮನ ಸುತಾರ, ಜಿಲ್ಲಾ ಕಾ.ಪ.ಸಂ.ದ ವಿಶೇಷ ಪ್ರತಿನಿಧಿ ಟಿ.ಕೆ.ರಮೇಶ್ ಶೆಟ್ಟಿ, ಜಿಲ್ಲಾ ಕಾ. ಪ.ಸಂ.ದ ವಿಶೇಷ ಪ್ರತಿನಿಧಿ ಟಿ.ಜೆ.ಅನಿಲ್ , ತಾ.ಕಾ.ಪ.ಸಂ.ದ ಪ್ರಧಾನ ಕಾರ್ಯದರ್ಶಿ ಮುರುಘರಾಜ್ ಕೋಣಂದೂರು ಆಗಮಿಸುವರು.
ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ತೀರ್ಥಹಳ್ಳಿ ತಾಲೂಕು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿರುವ ಜಿ.ಎಸ್. ನಾರಾಯಣರಾವ್ ( ಅಧ್ಯಕ್ಷರು, ರಾಷ್ಟ್ರೀಯ ಶಿಕ್ಷಣ ಸಂಸ್ಥೆ, ಶಿವಮೊಗ್ಗ), ಮಹಮ್ಮದ್ ಶಫಿ ( ಆಜಾದ್ ಫ್ಲೈ ವುಡ್, ನಿರ್ದೇಶಕರು , ಆಜಾದ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ತೀರ್ಥಹಳ್ಳಿ), ಕುಮಾರ್ ಮಾಸ್ಟರ್ ( ಶಿಕ್ಷಕರು ಹಾಗೂ ವಿಶೇಷ ಚೇತನ ಮಕ್ಕಳ ಟ್ರೈನರ್, ತೀರ್ಥಹಳ್ಳಿ), ಬಿ.ಮಂಜುನಾಥ ಶೆಟ್ಟಿ ( ವಾಹನ ಚಾಲನಾ ಕ್ಷೇತ್ರ), ಮ್ಯಾಥ್ಯೂ ಸುರಾನಿ ( ರಂಗ ನಟ, ನಿರ್ದೇಶಕ), ಕೊಕ್ಕೊಡ್ತಿ ಕೃಷ್ಣಮೂರ್ತಿ ( ಕೊಕ್ಕೊಡ್ತಿ ಕೃಷ್ಣಾಚಾರ್), (ಹಿರಿಯ ಯಕ್ಷಗಾನ ಕಲಾವಿದ), ಗೋಪಾಲ ಪೂಜಾರಿ ( ಸಮಾಜ ಸೇವಕರು, ಮೇಲಿನ ಕುರುವಳ್ಳಿ , ತೀರ್ಥಹಳ್ಳಿ), ಶ್ರೀಮತಿ ಡಾ.ಅನುಪಮ ಡಿ.ಎಸ್. ( ಆರೋಗ್ಯ ಕ್ಷೇತ್ರ), ರಮೇಶ್ ಗಾಂವಸ್ಕರ್ ( ಗಾಯಕರು) ಇವರನ್ನು ಸನ್ಮಾನಿಸಿ ಗೌರವಿಸಲಾಗುವುದು.
ಪತ್ರಿಕಾ ಕ್ಷೇತ್ರದ ಸಾಧಕರಿಗೂ ವಿಶೇಷ ಸನ್ಮಾನ
ಪತ್ರಿಕಾ ಕ್ಷೇತ್ರದಲ್ಲಿ ದುಡಿಯುತ್ತಿರುವ ತೀರ್ಥಹಳ್ಳಿಯ ಶ್ರೀಮತಿ ಭಾಗ್ಯ ಅನಿಲ್ ( ಸಂಪಾದಕರು, ಬೆಳಗಿನ ವಿಧಾತ ದೈನಿಕ , ತೀರ್ಥಹಳ್ಳಿ), ಪ್ರವೀಣ್ ಭಟ್ ( ಹಿರಿಯ ಪತ್ರಕರ್ತ ಮತ್ತು ಮುದ್ರಕ), ರಾಮಚಂದ್ರ ಕೊಪ್ಪಲು ( ಪತ್ರಕರ್ತ, ಪ್ರಸಿದ್ದ ವ್ಯಂಗ್ಯಚಿತ್ರಕಾರ), ತ.ರ. ರಾಘವೇಂದ್ರ ( ಪ್ರಧಾನ ಸಂಪಾದಕರು, ನಮ್ಮೂರ್ ಎಕ್ಸ್ಪ್ರೆಸ್ ಮೀಡಿಯಾ, ತೀರ್ಥಹಳ್ಳಿ), ಪಾರ್ಥಿಬನ್ ( ಮುದ್ರಣ ಕ್ಷೇತ್ರ) ಮತ್ತು ಕು. ಸಿಂಚನ ಮುರುಘರಾಜ್ ( ಕುವೆಂಪು ವಿ.ವಿ. ಬಯೋ ಕೆಮಿಸ್ಟ್ರಿ ಎಂ.ಎಸ್.ಸಿ. 4 ನೇ ರಾಂಕ್), ಕು.ಪ್ರಣತಿ ಸಿ.ಎಸ್. ( ಪಿಯುಸಿ 92%), ಸಂದೇಶ್ ( ಪತ್ರಿಕಾ ವಿತರಕ), ನವ ಎಸ್.ನಾಯಕ್ , ಉದಯೋನ್ಮುಖ ಬಾಲ ಕಲಾವಿದ) ಇವರು ಪತ್ರಕರ್ತರ ಸಂಘದ ವಿಶೇಷ ಸನ್ಮಾನಕ್ಕೆ ಪಾತ್ರರಾಗಲಿದ್ದಾರೆ. ತೀರ್ಥಹಳ್ಳಿ ಕಾರ್ಯನಿರತ ಪತ್ರಕರ್ತರ ಸಂಘದ ತೀರ್ಥಹಳ್ಳಿ ಅಧ್ಯಕ್ಷರಾದ ಮುನ್ನೂರು ಮೋಹನ್, ಪ್ರಧಾನ ಕಾರ್ಯದರ್ಶಿ ಮುರುಘರಾಜ್, ತೀರ್ಥಹಳ್ಳಿ ತಾ.ಕಾ.ಪ.ಸಂ.ನ ಉಪಾಧ್ಯಕ್ಷ ಸಂತೋಷ್ ಕುಮಾರ್, ಸಹ ಕಾರ್ಯದರ್ಶಿ ಮನುಕುಮಾರ್, ಖಜಾಂಚಿ ಶ್ರೀಕಾಂತ್ ನಾಯಕ್ ಹಾಗೂ ಪತ್ರಿಕಾ ಮಿತ್ರರು ಸರ್ವರನ್ನು ಈ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಆಹ್ವಾನಿಸಿದ್ದಾರೆ.
ಇದನ್ನೂ ಓದಿ : ರಾಜ್ಯದಲ್ಲಿ ಮತ್ತೆ ಸುದ್ದಿ ಮಾಡಿದ ತೀರ್ಥಹಳ್ಳಿ ಪ್ರತೀಕ್ ಗೌಡ ಕೇಸ್!
HOW TO APPLY : NEET-UG COUNSELLING 2023