ಸರ್ಜಾಶಂಕರ್ ಹರಳಿಮಠ ಅವರ ಸಂಶೋಧನಾ ಕೃತಿ ಕನ್ನಡತನ ಪುಸ್ತಕ ಬಿಡುಗಡೆ
– ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಗಣ್ಯರು
– ಜನಮನ ಸೆಳೆದ “ಜೊತೆಗಿರುವನು ಚಂದಿರ” ನಾಟಕ
NAMMUR EXPRESS NEWS
ತೀರ್ಥಹಳ್ಳಿ: ‘ದೇಶದಲ್ಲಿ ಜಾತಿ, ಕೋಮು ಸಂಘರ್ಷ ನಡೆದಾಗ ಸಾಮೂಹಿಕ ಬೆಂಬಲ ಇರುವುದಿಲ್ಲ. ಸೌಹಾರ್ದ, ಪ್ರೀತಿ ಬಯಸುವ ಬಹುಸಂಖ್ಯಾತರು ದೇಶದಲ್ಲಿದ್ದಾರೆ. ಆದರೆ ಒಗ್ಗಟ್ಟಿಗಾಗಿ ಧ್ವನಿಗೂಡಿಸು ವಲ್ಲಿ ಹಿಂದೆ ಬಿದ್ದಿದ್ದಾರೆ’ ಎಂದು ಕರ್ನಾಟಕ ಬಯಲಾಟ ಅಕಾಡೆಮಿ ಅಧ್ಯಕ್ಷ ಕೆ.ಆರ್.ದುರ್ಗಾದಾಸ್ ಅಭಿಪ್ರಾಯಪಟ್ಟರು. ಸರ್ಜಾಶಂಕರ್ ಹರಳಿಮಠ ಅವರ ಸಂಶೋಧನಾ ಕೃತಿ ‘ಕನ್ನಡತನ’ ಬಿಡುಗಡೆಗೊಳಿಸಿ ಮಾತನಾಡಿದರು. ಶನಿವಾರ ‘ಸಂಸ್ಕೃತ, ಹಿಂದಿ ಭಾಷಾ ಹೇರಿಕೆ ಭಿನ್ನವಾಗಿಲ್ಲ. ಕನ್ನಡದ ಯಜಮಾನಿಕೆಯ ಗಟ್ಟಿತನವನ್ನೇ ಕನ್ನಡದ ಕವಿಗಳು ಜಾಗೃತಗೊಳಿಸಿದ್ದಾರೆ. ಕುವೆಂಪು ಆ ಸಾಲಿಗೆ ಸೇರುವ ಅಗ್ರ ಗಣ್ಯರು. ಹಗೆತನ, ದ್ವೇಷ, ಅಸೂಯೆ ಬಿಟ್ಟು ಕನ್ನಡಿಗರು ಒಗ್ಗೂಡಬೇಕು. ಕನ್ನಡದ ಜೊತೆಗೆ ಬದುಕುವ ತುಳು, ಕೊಡವ, ಬಂಜಾರ ಮುಂತಾದ ಭಾಷೆಗಳಿಗೂ ಆದ್ಯತೆ ನೀಡಬೇಕು’ ಎಂದು ಸಲಹೆ ನೀಡಿದರು.
ಸಾಹಿತಿ ಜೆ.ಕೆ. ರಮೇಶ್ , ಪಂಚಾಯಿತಿ ಅಧ್ಯಕ್ಷ ಟಿ. ರಹಮತ್ ಉಲ್ಲಾ ಅಸಾದಿ, ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಕೆ. ರಮೇಶ್ ಶೆಟ್ಟಿ, ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಹೆಗಡೆ, ಲೇಖಕ ಸರ್ಜಾಶಂಕರ ಹರಳಿಮಠ ಇದ್ದರು.
ಜನಮನ ಸೆಳೆದ “ಜೊತೆಗಿರುವನು ಚಂದಿರ” ನಾಟಕ
ತೀರ್ಥಹಳ್ಳಿ: ಅದ್ಭುತವಾದ ರಂಗ ಪ್ರಯೋಗದೊಂದಿಗೆ ತೀರ್ಥಹಳ್ಳಿಯಲ್ಲಿ ಭಾನುವಾರ ಸಂಜೆ ಶಾಂತವೇರಿ ಗೋಪಾಲಗೌಡ ರಂಗಮಂದಿರ, ತೀರ್ಥಹಳ್ಳಿಯಲ್ಲಿ “ಜೊತೆಗಿರುವವನು ಚಂದಿರ” ನಾಟಕ ಪ್ರದರ್ಶನಗೊಂಡಿತು.
ಅಪರೂಪದ ರಂಗ ರೂಪ ರಷ್ಯನ್ ಕವಿ ತೊಕೋಮ್ ಅಲೈಖೆಮ್- ಜೋಸೆಫ್ ಸ್ಟೀನ್ ರಚಿತ “ಫಿಡ್ಲರ್ ಆನ್ ದಿ ರೂಫ್” ಕಥೆಗಳನ್ನು ಆಧರಿಸಿ ರಚಿಸಿದ ನಾಟಕದಲ್ಲಿ ಯುದ್ದ, ದೇಶವಿಭಜನೆ, ಅಭಿವೃದ್ದಿ, ಅಣೆಕಟ್ಟು ಇತ್ಯಾದಿಗಳ ನೆಪದಲ್ಲಿ ಮನುಷ್ಯನ ಸ್ಥಾನಾಂತರ ಮತ್ತು ಉಚ್ಚಾಟಣೆಗಳು ವಿಶ್ವದೆಲ್ಲಡೆ ನಡೆದೇ ಇವೆ. ಭಾರತದ ದೇಶವಿಭಜನೆಯ ಸಂಧರ್ಭವನ್ನು ಕಣ್ಣಲ್ಲಿ ಕಟ್ಟುವಂತೆ ಮಾಡಿತು.
ಖ್ಯಾತ ಕವಿ ಶ್ರೀ ಜಯಂತ್ ಕಾಯ್ಕಿಣಿ ಇವರು ಈ ಮೂಲ ಕಥೆಯನ್ನು ಕನ್ನಡಕ್ಕೆ ಭಾಷಾಂತರಿಸಿ ರಂಗರೂಪ ಮಾಡಿದ್ದರು. 350ಕ್ಕೂ ಹೆಚ್ಚು ತೀರ್ಥಹಳ್ಳಿ ರಂಗ ಆಸಕ್ತರು ಭಾಗವಹಿಸಿದ್ದರು.