ಕಿಮ್ಮನೆ ರತ್ನಾಕರ್ ಗೆ ಬಿಜೆಪಿ ಶಾಸಕರ ತಿರುಗೇಟು!
– ಕಾರ್ಯಕರ್ತರಿಗೆ ಅನ್ಯಾಯವಾದಾಗ ಶಾಸಕರು ಧ್ವನಿ ಎತ್ತುತ್ತಾರೆ!
– ಕಿಮ್ಮನೆ ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹೀಗೆ ಮಾತನಾಡುತ್ತಾರೆ – ನವೀನ್ ಹೆದ್ದೂರ್
NAMMUR EXPRESS NEWS
ತೀರ್ಥಹಳ್ಳಿ: ಮಾಜಿ ಶಾಸಕರು ಕಿಮ್ಮನೆ ರತ್ನಾಕರ್ ವಿರುದ್ಧ ಭಾರತೀಯ ಜನತಾ ಪಾರ್ಟಿ ತೀರ್ಥಹಳ್ಳಿ ಮಂಡಲ ಮಯೂರ ಹೋಟೆಲ್ ಸಭಾಂಗಣದಲ್ಲಿ, ನ. 16ರಂದು ಪತ್ರಿಕಾಗೋಷ್ಠಿಯನ್ನು ನಡೆಸಿದರು. ಅರೇಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ,ಸದಸ್ಯರು ಹಾಗೂ ಬಿಜೆಪಿ ನಾಯಕರಾಗಿರುವ ಸಿದ್ದಾರ್ಥ್ ಇವರ ಮೇಲೆ ಅರಣ್ಯ ಇಲಾಖೆಯವರು ಯಾವುದೇ ಸಾಕ್ಷಾಧಾರಗಳಿಲ್ಲದೆ ಇತರ ಒತ್ತಡಗಳಿಂದ ಎಫ್ ಐ ಆರ್ ದಾಖಲಿಸಿದ್ದಾರೆ. ಅರಣ್ಯ ಇಲಾಖೆಯ ತಪ್ಪನ್ನು ವಿರೋಧಿಸಬೇಕೆಂಬ ಕಾರಣಕ್ಕೆ ಮೇಗರವಳ್ಳಿಯ ಅರಣ್ಯ ಇಲಾಖೆಯ ಜಾಗದಲ್ಲಿ ಪ್ರತಿಭಟನೆಯನ್ನು ನಡೆಸಲಾಯಿತು, ಅದರ ವಿರುದ್ಧ ಮಾಜಿ ಗೃಹ ಸಚಿವರು ಶಾಸಕರು ಆರಗ ಜ್ಞಾನೇಂದ್ರ ಅವರು ಮಾತನಾಡಿದ್ದನ್ನು ಬಲವಾಗಿ ಹಿಡಿದುಕೊಂಡು ಮಾಜಿ ಶಾಸಕರು ಕಿಮ್ಮನೆ ಪತ್ರಿಕಾಗೋಷ್ಠಿಯನ್ನು ನಡೆಸಿದ್ದಾರೆ. ಯಾವುದೇ ಪಕ್ಷಪಾತ ಮಾಡದೆ ಪ್ರತಿಭಟನೆಯನ್ನು ನಡೆಸಿದ್ದು, ಕೇವಲ ಪಕ್ಷಕ್ಕೆ ಸೀಮಿತವಾಗಿರದೆ ನಿರಪರಾಧಿಯ ಪರವಾಗಿ ಕಾರ್ಯಕರ್ತರಿಗೆ ಅನ್ಯಾಯವಾದಾಗ ಶಾಸಕರು ಧ್ವನಿ ಎತ್ತುತ್ತಾರೆ ಎಂದು ಹೇಳಿದರು.
ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರತಿ ಬಾರಿ ಪತ್ರಿಕಾಗೋಷ್ಠಿ?
ಕಿಮ್ಮನೆ ರತ್ನಾಕರ್ ಅವರು ಜ್ಞಾನೇಂದ್ರ ವಿರುದ್ಧ ಪತ್ರಿಕಾಗೋಷ್ಠಿಯಲ್ಲಿ ಹಲವಾರು ವಿಷಯಗಳನ್ನು ಉಲ್ಲೇಖ ಮಾಡಿದ್ದಾರೆ. ಸಾಮಾನ್ಯ ಕಾರ್ಯಕರ್ತರಿಗೆ ಅನ್ಯಾಯವಾದಾಗ ಪ್ರತಿಭಟನೆ ನಡೆಸಿ ನ್ಯಾಯ ದೊರಕಿಸಿ ಕೊಡುವುದು ಶಾಸಕರ ಕರ್ತವ್ಯವಾಗಿದ್ದು ಕಿಮ್ಮನೆ ರತ್ನಾಕರವರು ಈ ರೀತಿಯ ಕೆಲಸಗಳನ್ನು ಮಾಡುತ್ತಲೇ ಬಂದಿದ್ದಾರೆ. ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಪ್ರತಿ ಬಾರಿ ಪತ್ರಿಕಾಗೋಷ್ಠಿಗಳನ್ನು ಕರೆದು ವಿಚಾರಗಳನ್ನು ಮಂಡಿಸುವುದು ಅವರ ವ್ಯಕ್ತಿತ್ವವನ್ನು ವಿವರಿಸುತ್ತದೆ ಎಂದು ಬಿಜೆಪಿ ಅಧ್ಯಕ್ಷರು ನವೀನ್ ಹೆದ್ದೂರ್ ಹೇಳಿದ್ದಾರೆ. ಯಾವುದೇ ಆಡಳಿತಾತ್ಮಕ ಮಂಜೂರಾತಿ ಇಲ್ಲದೆ ನಿರ್ಣಯವಿಲ್ಲದೆ, ಸುಮಾರು ಎರಡು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಯಾವುದೇ ಕೌನ್ಸಿಲ್ ಮಂಜೂರಾತಿ ಮಾಡಿರುವುದಿಲ್ಲ. ಹುಲಿ ವೇಷ ಸ್ಪರ್ಧೆಗೆ ಸುಮಾರು 50 ಸಾವಿರ ಖರ್ಚು ಮಾಡಿದ್ದು ನಮ್ಮದು ಯಾವುದೇ ರೀತಿಯ ವಿರೋಧವಿಲ್ಲ, ಆದರೆ ಇದನ್ನು ಯಾವುದೇ ರೀತಿಯ ಕೌನ್ಸಿಲ್ ಜಿಲ್ಲಾಧಿಕಾರಿಯವರಿಗೆ ತಿಳಿಸದೆ ಖರ್ಚು ಮಾಡುವ ಅಗತ್ಯವಿಲ್ಲ. ಅಧ್ಯಕ್ಷರಿಗೂ ಹಣಕಾಸಿನ ವಿಚಾರಕ್ಕೂ ಯಾವುದೇ ರೀತಿಯ ಸಂಬಂಧವಿರುವುದಿಲ್ಲ. ಹಣಕಾಸಿನ ವಿಚಾರ ದುರುಪಯೋಗ ಆಗದ ರೀತಿಯಲ್ಲಿ ನೋಡಿಕೊಳ್ಳುವುದು ಮಾತ್ರ ಅವರ ಕರ್ತವ್ಯ ಎಂದು ಪಟ್ಟಣ ಪಂಚಾಯಿತಿ ಬಿಜೆಪಿ ಸದಸ್ಯ ಸಂದೇಶ್ ಜವಳಿ ತಿಳಿಸಿದ್ದಾರೆ. ಬಿಜೆಪಿ ಜಿಲ್ಲಾ ಯುವಮೋರ್ಚಾ ಅಧ್ಯಕ್ಷರು ಪ್ರಶಾಂತ್ ಕುಕ್ಕೆ, ಅರೇಹಳ್ಳಿ ಗ್ರಾಮಪಂಚಾಯತ್ ಉಪಾಧ್ಯಕ್ಷರು ಗಿರೀಶ್, ಪಂಚಾಯತ್ ಸದಸ್ಯ ಯಶಸ್ವಿ ಕಡ್ತೂರು, ಅರೇಹಳ್ಳಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ,ಸದಸ್ಯರು ಸಿದ್ದಾರ್ಥ್ ಉಪಸ್ಥಿತರಿದ್ದರು.