ತೀರ್ಥಹಳ್ಳಿ ಟಾಪ್ ನ್ಯೂಸ್
ಮೇಗರವಳ್ಳಿ: ಶವದ ಪೆಟ್ಟಿಗೆಯಂತೆ ಬಿಳಿ ಬಟ್ಟೆ ಹೊದಿಸಿರುವ ಎಟಿಎಂ!
– ಮೇಗರವಳ್ಳಿ ಸೇರಿ ತೀರ್ಥಹಳ್ಳಿ ತಾಲೂಕಲ್ಲಿ ಏಟಿಎಂ ಅವ್ಯವಸ್ಥೆ
– 20 ದಿನಗಳಿಂದ ಕಾರ್ಯ ಸ್ಥಗಿತ ಸಾರ್ವಜನಿಕರಿಗೆ ತೊಂದರೆ
– ಸಿಎಂ ರಾಜೀನಾಮೆಗೆ ವಿಧಾನ ಸೌಧದ ಮುಂದೆ ಜ್ಞಾನೇಂದ್ರ ಪ್ರತಿಭಟನೆ
– ಹೆದ್ದೂರು ಬಳಿ ಮರ ಬಿದ್ದು ವಿದ್ಯುತ್ ಕಂಬ ತುಂಡು
NAMMUR EXPRESS NEWS
ಮೇಗರವಳ್ಳಿ: ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಎಸ್ಬಿಐ ಬ್ಯಾಂಕ್ ಒಳಗಿರುವ ಎಟಿಎಂ ಮಿಷನ್ ಕಳೆದ 20 ದಿನಗಳಿಂದ ಕಾರ್ಯನಿರ್ವಹಿಸದಿರುವುದು ಸಾರ್ವಜನಿಕರಿಗೆ ತೊಂದರೆಯಾಗಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ವ್ಯವಸ್ಥಾಪಕರು ಮತ್ತು ಸಿಬ್ಬಂದಿಗಳ ಬೇಜಾಬ್ದಾರಿಯಿಂದ ಸರಿಯಾದ ಮಾಹಿತಿ ನೀಡದೆ ಸಾರ್ವಜನಿಕರು ಪ್ರತಿ ದಿನ ಅಲೆದಾಡುವ ಪರಿಸ್ಥಿತಿ ಬಂದಿರುತ್ತದೆ. ಹಿರಿಯ ನಾಗರೀಕರು ಬ್ಯಾಂಕ್ನೊಳಗೆ ಹೋಗುವ ಹಾಗಿಲ್ಲ. ಬ್ಯಾಂಕ್ ಮುಂದೆ ಹೊಂಡ ಗುಂಡಿಗಳು ಬಿದ್ದಿರುತ್ತದೆ.
20 ದಿನಗಳಿಂದ ಬಿಳಿಬಟ್ಟೆ ಹೊದಿಸಿ ಎಂಟಿಎಂನ್ನು ಶವದಪೆಟ್ಟಿಯಂತೆ ಮುಚ್ಚಿರುತ್ತಾರೆ. ಈ ಬಗ್ಗೆ ಸಂಬಂಧಪಟ್ಟ ಎಸ್ಬಿಐ ಮೇಲಾಧಿಕಾರಿಗಳು ಕ್ರಮಕೈಗೊಳ್ಳಬೇಕಾಗಿ ಮೇಗರವಳ್ಳಿ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿಎಂ ರಾಜೀನಾಮೆಗೆ ವಿಧಾನ ಸೌಧದ ಮುಂದೆ ಜ್ಞಾನೇಂದ್ರ ಪ್ರತಿಭಟನೆ
ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರ ಮುಡಾ ನಿವೇಶನ ಹಂಚಿಕೆ ಆರೋಪ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ತನಿಖೆ ನಡೆಸುವಂತೆ ಹೈಕೋರ್ಟ್ ತೀರ್ಪು ನೀಡಿದೆ. ಹಾಗಾಗಿ ನೈತಿಕ ಹೊಣೆಹೊತ್ತು ಸಿದ್ದರಾಮಯ್ಯರಾಜೀ ನಾಮೆ ನೀಡಲಿ ಎಂದು ಆಗ್ರಹಿಸಿ ಬಿಜೆಪಿ ಬುಧವಾರ ವಿಧಾನ ಸೌಧದ ಮುಂದೆ ಬಿಜೆಪಿ ಪ್ರತಿಭಟನೆ ನಡೆಸಿದೆ. ಬಿಜೆಪಿ ಅಧ್ಯಕ್ಷ ವಿಜಯೇಂದ್ರ, ಆರ್.ಅಶೋಕ್, ಬಿಜೆಪಿಯ ಎಲ್ಲಾ ನಾಯಕರು ಭಾಗಿದ್ದರು. ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಕೂಡ ಭಾಗವಹಿಸಿ ಪ್ರತಿಭಟನೆ ನಡೆಸಿದರು.
ಹೆದ್ದೂರು ಬಳಿ ಮರ ಬಿದ್ದು ವಿದ್ಯುತ್ ಕಂಬ ತುಂಡು!
ತೀರ್ಥಹಳ್ಳಿ: ಹೆದ್ದೂರು ದೋಣಿಕಂಡಿ ಬಳಿ ಮರ ಬಿದ್ದು 3 ವಿದ್ಯುತ್ ಕಂಬ ತುಂಡಾಗಿದೆ. ರಸ್ತೆ ಮೇಲೆ ಮರ ಬಿದ್ದಿದೆ. ಈ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.