ತೀರ್ಥಹಳ್ಳಿಯಲ್ಲಿ ಸಂಗೀತ ಸ್ಪರ್ಧೆ ಗ್ರಾಂಡ್ ಫಿನಾಲೆ!
– ಫೆ.8ರಂದು ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ ಸಂಗೀತ ಸ್ಪರ್ಧೆ ಫೈನಲ್
– ಮಲೆನಾಡು, ಕರಾವಳಿಯ ಖ್ಯಾತ ಗಾಯಕ ಗಾಯಕಿಯರ ಸಂಗೀತ ಸುಧೆ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಫೆ.8ರಂದು ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ ಸಂಗೀತ ಸ್ಪರ್ಧೆ ಗ್ರಾಂಡ್ ಫಿನಾಲೆ ನಡೆಯಲಿದೆ.
ಗಾನಾಂಜಲಿ ಕೋಣಂದೂರು, ತೀರ್ಥಹಳ್ಳಿ ಇವರ ಪ್ರಸ್ತುತಿಯಲ್ಲಿ ಶ್ರೀ ಮಹಾಗಣಪತಿ ಶ್ರೀ ಬನಶಂಕರಿ ಸೇವಾ ಟ್ರಸ್ಟ್ ಕೋಣಂದೂರು, ಸರ್ಜಾ ಚೆಸ್ ತರಬೇತಿ ಕೇಂದ್ರ ಹಿರೇಸರ, ಶ್ರೀ ಲಕ್ಷ್ಮೀ ಕನ್ಸ್ಟ್ರಕ್ಷನ್ ಕೋಣಂದೂರು ಸಹಯೋಗದಲ್ಲಿ ಮಲೆನಾಡು ಮತ್ತು ಕರಾವಳಿ ಕೋಗಿಲೆಗಳ ಧ್ವನಿ ವಾಯ್ಸ್ ಆಫ್ ಮಲೆನಾಡು ಮತ್ತು ಕರಾವಳಿ ಕೋಗಿಲೆ ಸೀಸನ್ ಒಂದರ ಅಂತಿಮ ಹಂತದ ಸಂಗೀತ ಸ್ಪರ್ಧೆ ಗ್ರಾಂಡ್ ಫಿನಾಲೆ ಇದಾಗಿದೆ. ಫೆಬ್ರವರಿ 8ರ ಶನಿವಾರ ತೀರ್ಥಹಳ್ಳಿಯ ಸೊಪ್ಪುಗುಡ್ಡೆಯ ಗೋಪಾಲಗೌಡ ರಂಗಮಂದಿರದಲ್ಲಿ ಸಂಜೆ 6 ರಿಂದ ನಡೆಯಲಿದೆ. ಈ ಸ್ಪರ್ಧೆಯಲ್ಲಿ ಮಲೆನಾಡಿನ ಮತ್ತು ಕರಾವಳಿಯ ಪ್ರತಿಭಾವಂತ ಕಲಾವಿದರು ಸ್ಪರ್ಧೆಯಲ್ಲಿ ಭಾಗವಹಿಸಲಿದ್ದು, ಪ್ರಥಮ ಬಹುಮಾನ : ರೂ 10,000, ದ್ವಿತೀಯ ಬಹುಮಾನ : ರೂ 6,000, ತೃತೀಯ ಬಹುಮಾನ : ರೂ 3,000, ಉಳಿದ ಎಲ್ಲಾ ಸ್ಪರ್ಧಿಗಳಿಗೂ ರೂ 1000 ನಗದು ಪುರಸ್ಕಾರ ನೀಡಲಾಗುವುದು.
ಅಂತಿಮ ಹಂತದ ಸಂಗೀತ ಸ್ಪರ್ಧೆ ಗ್ರಾಂಡ್ ಫಿನಾಲೆಗೆ ಆಯ್ಕೆಯಾದವರು
ಭೂಮಿಕಾ ಹೆಗಡೆ, ಮಂಗಳೂರು,
ಸುಕೇಶ್ ಕಾರ್ಕಳ,
ಚೈತನ್ಯ ಶಿವಪುರ,
ವರ್ಷಿಣಿ ಹರಿಹರಪುರ,
ನಿಧಿ ಸುರೇಶ್ ತೀರ್ಥಹಳ್ಳಿ
ಅಶ್ಚಿತ್ ಮಂಗಳೂರು,
ಗಣೇಶ ಅಜೆಕಾರು,
ರಾಜೇಶ್ ಪ್ರಭು ಹೆಬ್ರಿ
ಸಂದೀಪ್ ಶಿವಪುರ,
ಮೋಹನ್ ಜಿ ಸಾಗರ,
ಕೃಷ್ಣ ಕುಲಾಲ್ ಉಡುಪಿ,
ಸಮಸ್ತ ಸಂಗೀತ ಪ್ರಿಯರಿಗೆ ಸುಸ್ವಾಗತ
ಸ್ಪರ್ಧಾ ವಿಜೇತರಿಗೆ ನಗದು ಪುರಸ್ಕಾರ, ಆಕರ್ಷಕ ಟ್ರೋಫಿ ನೀಡಲಿದ್ದು, ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿಕೊಡಬೇಕಾಗಿ ಕಾರ್ಯಕ್ರಮ ಸಂಯೋಜಕರೂ, ಗಾಯಕರಾದ ಕೆ.ಜಿ.ಶಶಿಕುಮಾರ ಕಾರಂತ ಮತ್ತು ಕಾರ್ಯಕ್ರಮದ ಸಂಘಟಕರು ವಿನಂತಿಸಿದ್ದಾರೆ.