ತೀರ್ಥಹಳ್ಳಿಯಲ್ಲಿ ಹೊಸ ಫ್ಲೈ ಓವರ್ ಸಂಚಾರ ಶುರು!
– ತೀರ್ಥಹಳ್ಳಿ ಪಟ್ಟಣಕ್ಕೆ ಎಂಟ್ರಿ ಆಗುವ ಭಾರತಿಪುರ ಕ್ರಾಸ್ ಫ್ಲೈ ಓವರ್
– 55 ಕೋಟಿ ವೆಚ್ಚದಲ್ಲಿ ಹೊಸ ಫ್ಲೈ ಓವರ್: ರಸ್ತೆ ಸಮಸ್ಯೆಗೆ ಮುಕ್ತಿ
– ತೀರ್ಥಹಳ್ಳಿ -ಕ್ಯಾತರ ಕ್ಯಾಂಪ್ ಚತುಷ್ಪತ ಹೈವೇ ಮಾರ್ಕ್ ಮುಕ್ತಾಯ
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿಯಿಂದ ಶಿವಮೊಗ್ಗ ಸಂಪರ್ಕ ಕಲ್ಪಿಸುವ ಭಾರತಿ ಪುರ ಕ್ರಾಸ್ ಬಳಿ ನೂತನ ಫ್ಲೈ ಓವರ್ ನಿರ್ಮಾಣವಾಗಿದ್ದು 0.5 ಕಿಲೋಮೀಟರ್ ನಷ್ಟು ಫ್ಲೈ ಓವರ್ ರಸ್ತೆ ನಿರ್ಮಾಣವಾಗಿದೆ.
ಸುಮಾರು 55 ಕೋಟಿ ವೆಚ್ಚದಲ್ಲಿ ಫ್ಲೈ ಓವರ್ ನಿರ್ಮಾಣವಾಗಿದ್ದು, ಫ್ಲೈ ಓವರ್ ಮೇಲೆ ವಾಹನ ಚಲಾಯಿಸುವಾಗ ಪರಿಸರದ ರಮಣೀಯ ದೃಶ್ಯಗಳು ಗಮನ ಸೆಳೆಯುತ್ತಿವೆ.
ಈಗಾಗಲೇ ಈ ರಸ್ತೆ ಒಂದು ವಾರದಿಂದ ಶುರುವಾಗಿದ್ದು ಪ್ರವಾಸಿಗರಿಗೆ ಹಾಗೂ ತೀರ್ಥಹಳ್ಳಿ ಜನತೆಗೆ ಸಂತಸವನ್ನ ಉಂಟುಮಾಡಿದೆ. ಬೆಂಗಳೂರಿನ ಕೃಷಿ ಇನ್ಫೋಟೆಕ್ ಈ ಕಾಮಗಾರಿ ಮಾಡಿದೆ. ರಸ್ತೆಗಳ ಅಕ್ಕ ಪಕ್ಕ ಇನ್ನಷ್ಟು ಸರಿಪಡಿಸಬೇಕಿದೆ.
ತೀರ್ಥಹಳ್ಳಿ -ಕ್ಯಾತರ ಕ್ಯಾಂಪ್ ಚತುಷ್ಪತ ಹೈವೇ ಮಾರ್ಕ್ ಮುಕ್ತಾಯ
ತೀರ್ಥಹಳ್ಳಿಯಿಂದ ಕ್ಯಾತರ ಕ್ಯಾಂಪ್ ವರೆಗೆ 538 ಕೋಟಿ ವೆಚ್ಚದಲ್ಲಿ ನೂತನ ಫೋರ್ ವೇ ಹೈವೇ ನಿರ್ಮಾಣವಾಗಲಿದ್ದು ಈಗಾಗಲೇ ಮಾರ್ಕ್ ಹಾಕಿ ಅಂತಿಮಗೊಳಿಸಲಾಗಿದೆ. ನೂತನ ಹೈವೇ ಕೂಡ ಕಾಮಗಾರಿ ಕೂಡ ಶೀಘ್ರದಲ್ಲಿ ಶುರುವಾಗಲಿದೆ.