ಪತ್ರಕರ್ತ ಮಂಜುನಾಥ್ ನುಡಿ ನಮನ!
– ತೀರ್ಥಹಳ್ಳಿ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಮಂಜುನಾಥ್ ಶ್ರದ್ಧಾಂಜಲಿ
– ತೀರ್ಥಹಳ್ಳಿ ತಾಲೂಕಿನ ಹಲವರ ಸಂತಾಪ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಮಿತ್ರ ಪತ್ರಿಕೆ ಸಂಪಾದಕರಾದ ಕುರುವಳ್ಳಿ ಮಂಜುನಾಥ್ ನಿಧನರಾದ ಹಿನ್ನೆಲೆಯಲ್ಲಿ ಬುಧವಾರ ತೀರ್ಥಹಳ್ಳಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶ್ರದ್ದಾಂಜಲಿ ಮತ್ತು ನುಡಿ ನಮನ ಕಾರ್ಯಕ್ರಮ ನಡೆಯಿತು.
ಪತ್ರಕರ್ತರ ಸಂಘದ ಅಧ್ಯಕ್ಷರಾದ ಮೋಹನ್ ಶೆಟ್ಟಿ ಮುನ್ನೂರ್ ಅಧ್ಯಕ್ಷತೆಯಲ್ಲಿ ಇತ್ತೀಚಿಗೆ ಅಗಲಿದ ಪತ್ರಕರ್ತ ಮಂಜುನಾಥ್ ಅವರಿಗೆ ಶ್ರದ್ಧಾಂಜಲಿ ನುಡಿ ನಮನವನ್ನು ಅರ್ಪಿಸಲಾಯಿತು. ಮೋಹನ್ ಶೆಟ್ಟಿ ಮಾತನಾಡಿ, ಮಂಜುನಾಥ್ ತುಂಬಾ ಬಡತನದಿಂದ ಹೋರಾಡಿ ಬೇರೆ ಬೇರೆ ಕೆಲಸಗಳನ್ನು ಜೀವನೋಪಾಯಕ್ಕಾಗಿ ಮಾಡಿಕೊಂಡು, ಪತ್ರಿಕೋದ್ಯಮದಲ್ಲಿ ತನ್ನನ್ನು ತೊಡಗಿಸಿಕೊಂಡು ಬಂದಿದ್ದರು, ಹಠತ್ತಾಗಿ ಕಾಯಿಲೆ ಬಂದೆರೆಗಿ ಅವರು ನಮ್ಮ ಕಣ್ಣಮುಂದೆ ಇಲ್ಲ, ಆದರೆ ಅವರು ತನಗೆ ಬಂದ ಕಾಯಿಲೆಯನ್ನು ಯಾರ ಹತ್ತಿರವೂ ಹೇಳದೆ ಗುಪ್ತವಾಗಿ ವಿಷಯವನ್ನು ಇಟ್ಟಿದ್ದರು. ಅದರ ಪರಿಣಾಮವೇ ಇಂದು ಅವರು ನಮ್ಮ ಕಣ್ಣು ಮುಂದಿಲ್ಲ ಎಂದರು.
ಹಿರಿಯ ಪತ್ರಕರ್ತರು ಮಾತನಾಡಿ, ಹೆಂಡತಿ ಮತ್ತು ಚಿಕ್ಕ ಹೆಣ್ಣು ಮಗುವಿಗೆ ಸಹಾಯದ ಹಸ್ತ ಬೇಕಾಗಿದೆ ನಾವೆಲ್ಲರೂ ಸಹಕರಿಸೋಣ ಹಾಗೂ ದಾನಿಗಳ ಸಹಾಯವನ್ನು ಕೇಳೋಣ , ನೊಂದ ಕುಟುಂಬಕ್ಕೆ ಕಣ್ಣೊರೆಸುವ ಕೆಲಸ ಮಾಡೋಣ ಮತ್ತು ಮಂಜುನಾಥ್ ಅವರ ಆತ್ಮಕ್ಕೆ ಚಿರಶಾಂತಿ ದೊರಕಲಿ ಎಂದರು. ಪತ್ರಕರ್ತ ಶಿವಾನಂದ ಕರ್ಕಿ, ಎಂ.ಕೆ ರಾಘವೇಂದ್ರ,ಡಾನ್ ರಾಮಣ್ಣ, ಪ್ರಸನ್ನ ಇತರರು ಮಾತನಾಡಿದರು. ಎಲ್ಲಾ ಪತ್ರಕರ್ತರು ಇದ್ದರು.
ಕ್ಯಾನ್ಸರ್ ರೋಗಕ್ಕೆ ಬಲಿಯಾದ ಯುವ ಪತ್ರಕರ್ತ
ತೀರ್ಥಹಳ್ಳಿ ಖ್ಯಾತ ಪತ್ರಕರ್ತ ಮಂಜುನಾಥ್ ಶ್ವಾಸಕೋಶ ಕ್ಯಾನ್ಸರ್ ರೋಗಕ್ಕೆ ಬಲಿಯಾಗಿದ್ದರು. ಎರಡು ತಿಂಗಳು ಚಿಕಿತ್ಸೆ ಬಳಿಕ ಅವರು ಚಿಕಿತ್ಸೆ ಫಲ ನೀಡದೆ ಮೃತರಾಗಿದ್ದರು. ಅವರ ಅಂತಿಮ ದರ್ಶನವನ್ನು ಸಂಸದ ರಾಘವೇಂದ್ರ, ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ, ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಂಜುನಾಥ್ ಗೌಡ, ಮದನ್ ಸೇರಿ ಬಹುತೇಕರು ಮನೆಗೆ ತೆರಳಿ ಕುಟುಂಬಕ್ಕೆ ಸಾಂತ್ವನ ಹೇಳಿ ಅಂತಿಮ ದರ್ಶನ ಪಡೆದಿದ್ದರು. ತಾಲೂಕಿನ ಸಾವಿರಾರು ಮಂದಿ ಸಂತಾಪ ವ್ಯಕ್ತಪಡಿಸಿದ್ದರು.