ಅಶ್ಲೀಲ ವಿಡಿಯೋ: ತೀರ್ಥಹಳ್ಳಿ ಬಿಜೆಪಿಯಿಂದ ದೂರು!
– ಎನ್ಎಸ್.ಯು.ಐ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದ ವ್ಯಕ್ತಿ?
– ರಾಜಕೀಯ ದಾಳ ಆಯ್ತಾ ವೈರಲ್ ವಿಡಿಯೋ?
– ಬಿಜೆಪಿ ಯುವ ಮೋರ್ಚಾದಿಂದ ದೂರು ದಾಖಲು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯಲ್ಲಿ ಕಳೆದ ಕೆಲವು ದಿನಗಳಿಂದ ಅಶ್ಲೀಲ ವಿಡಿಯೋ ಸದ್ದು ಮಾಡುತ್ತಿದೆ. ಈ ನಡುವೆ ಯುವ ಕಾಂಗ್ರೆಸ್ ಹಾಗೂ ಎನ್.ಎಸ್.ಯು.ಐ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಎಂದು ಆರೋಪಿಸಲಾದ ತೀರ್ಥಹಳ್ಳಿಯ ನಿವಾಸಿಯೊಬ್ಬ ತಾನು ಯುವತಿಯರ ಜೊತೆಯಲ್ಲಿ ಇರುವ ಖಾಸಗಿ ಕ್ಷಣಗಳನ್ನು ಚಿತ್ರಿಕರಿಸಿ ವಾಟ್ಸಾಪ್ ಮತ್ತು ಇತರ ಸೋಶಿಯಲ್ ಮೀಡಿಯಾದಲ್ಲಿ ಹರಿ ಬಿಟ್ಟ ಬಗ್ಗೆ ಇದೀಗ ದೂರು ದಾಖಲಾಗಿದೆ.
ಯುವಕನೊಬ್ಬ ಹುಡುಗಿಯೊಂದಿಗೆ ಇರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಮಹಿಳೆಯರಿಗೆ ಬೆದರಿಕೆ ಒಡ್ಡಿ ಮಾನಹಾನಿ ಮಾಡುತ್ತಿರುವುದಲ್ಲದೆ, ಕೋಮು ಸಾಮರಸ್ಯಕ್ಕೆ ಧಕ್ಕೆ ತರುತ್ತಿರುವ ಈತನನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳುವಂತೆ ತೀರ್ಥಹಳ್ಳಿ ತಾಲೂಕು ಬಿಜೆಪಿ ಯುವ ಮೋರ್ಚಾದ ಪದಾಧಿಕಾರಿಗಳು ಬುಧವಾರ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಮಾಜಿ ತಾಲೂಕು ಪಂಚಾಯಿತಿ ಸದಸ್ಯರಾದ ಬಿಜೆಪಿಯ ಯುವ ಮುಖಂಡರಾದ ಕುಕ್ಕೆ ಪ್ರಶಾಂತ್, ಹಿಂದೂ ಪರಿಷತ್ತಿನ ಉಲ್ಲಾಸ್, ಗಣೇಶ್ ಪ್ರಸಾದ್, ವಿನುತ್ ಗೌಡ, ದಯಾನಂದ್ ಪೂಜಾರಿ, ಯಶಸ್ವಿ, ಕಾಸರವಳ್ಳಿ ಶ್ರೀನಿವಾಸ್, ಚೇತನ್, ಗಬಡಿ ಪ್ರದೀಪ್, ಗುರು ಸಿ ಗೌಡ, ಅಭಿ ಸೇರಿದಂತೆ ಬಿಜೆಪಿಯ ಪ್ರಮುಖರು ಉಪಸ್ಥಿತರಿದ್ದರು.
ಇದನ್ನೂ ಓದಿ : ಲಕ್ಷಕ್ಕೆ ಬರುತ್ತಾ ಅಡಿಕೆ ದರ?
HOW TO APPLY : NEET-UG COUNSELLING 2023