ಡಿ.23ಕ್ಕೆ ಕೋಣಂದೂರು ಎನ್.ಇ. ಎಸ್ ಶಾಲೆ ಸಾಂಸ್ಕೃತಿಕ ಉತ್ಸವ!
– ಶೀಕೆ ಶಾಲೆ ಮಕ್ಕಳಿಗೆ ಸೇವಾ ಕನ್ನಡಿಗರು ಸಂಸ್ಥೆಯ ಪುಸ್ತಕ ವಿತರಣೆ
– ತುಂಗಾ ಕಾಲೇಜಿನ ಸೂರ್ಯ ರಾಷ್ಟ್ರ ಮಟ್ಟದಲ್ಲಿ ಸಾಧನೆ
NAMMUR EXPRESS NEWS
ತೀರ್ಥಹಳ್ಳಿ: ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ.), ಶಿವಮೊಗ್ಗ ಇದರ ಅಂಗ ಸಂಸ್ಥೆ ರಾಷ್ಟ್ರೀಯ ವಸತಿ ಶಾಲೆ, ಕೋಣಂದೂರು ಇಲ್ಲಿ ಸಾಂಸ್ಕೃತಿಕ ಉತ್ಸವ 23-12-2024ರಂದು ಸಂಜೆ ನಡೆಯಲಿದೆ. ರಾಷ್ಟ್ರೀಯ ವಸತಿ ಶಾಲೆ ಕ್ರೀಡಾಂಗಣದಲ್ಲಿ ಸಂಜೆ 5:30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷತೆಯನ್ನು ಜಿ.ಎಸ್. ನಾರಾಯಣ ರಾವ್( ಅಧ್ಯಕ್ಷರು, ರಾಷ್ಟ್ರೀಯ ಶಿಕ್ಷಣ ಸಮಿತಿ (ರಿ.), ಶಿವಮೊಗ್ಗ) ವಹಿಸಲಿದ್ದಾರೆ. ಉದ್ಘಾಟಕರಾಗಿ ಅನಿಲ್ಕುಮಾರ್ ಬೂಮಾರೆಡ್ಡಿ(ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಶಿವಮೊಗ್ಗ) ಆಗಮಿಸಲಿದ್ದು, ಮುಖ್ಯ ಅತಿಥಿಗಳು ಎಸ್.ಎನ್. ನಾಗರಾಜ್( ಕಾರ್ಯದರ್ಶಿಗಳು, ರಾಷ್ಟ್ರೀಯ ಶಿಕ್ಷಣ ಸಮಿತಿ ಶಿವಮೊಗ್ಗ ಉಪಸ್ಥಿತರಿರಲಿದ್ದಾರೆ. ವೇದಿಕೆ ಕಾರ್ಯಕ್ರಮದಲ್ಲಿ ಪ್ರಾರ್ಥನೆ – ಸ್ವಾಗತ – ಉದ್ಘಾಟನೆ – ಸನ್ಮಾನ– ಉದ್ಘಾಟಕರ ಭಾಷಣ – ಅತಿಥಿಗಳ ಭಾಷಣ ಅಧ್ಯಕ್ಷರ ಭಾಷಣ – ವಂದನಾರ್ಪಣೆ – ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಆಡಳಿತ ಮಂಡಳಿ, ಸ್ಥಳೀಯ ಸಲಹಾ ಸಮಿತಿ, ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಸರ್ವರನ್ನು ಸ್ವಾಗತಿಸಿದ್ದಾರೆ.
ಶೀಕೆ ಶಾಲೆಯಲ್ಲಿ ಸೇವಾ ಕನ್ನಡಿಗರು ಟ್ರಸ್ಟ್ ಸೇವೆ
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಕುಡುವಳ್ಳಿ ಅಂಚೆ ವ್ಯಾಪ್ತಿಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಶೀಕೆಯಲ್ಲಿ ಸೇವಾ ಕನ್ನಡಿಗರು ಟ್ರಸ್ಟ್ ಬೆಂಗಳೂರು ವತಿಯಿಂದ ಮಕ್ಕಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ ಹಾಗೂ ಸುಣ್ಣ ಬಣ್ಣ ಹೊಡೆಯುವ ಕಾರ್ಯಕ್ರಮ ಡಿ.19ರಂದು ನಡೆಯಿತು. ಸೇವಾ ಕನ್ನಡಿಗರು ಟ್ರಸ್ಟ್ ವತಿಯಿಂದ ಶಾಲೆಗೆ ಸಾವಿರಾರು ವೆಚ್ಚದಲ್ಲಿ ಸುಣ್ಣ ಬಣ್ಣ ಹೊಡೆಯಲಾಯಿತು. ಸೇವಾ ಕನ್ನಡಿಗರು ಬೆಂಗಳೂರು ಸಂಸ್ಥೆಯ ಅಧ್ಯಕ್ಷರಾದ ಲಕ್ಷ್ಮಣ್ ನರುಗನಹಳ್ಳಿ, ವೆಂಕಟೇಶ್, ದಯಾನಂದ, ರಾಘವೇಂದ್ರ, ಶಶಿಧರ ಸೇರಿದಂತೆ ಹಲವರು ಇದ್ದರು. ಶಾಲೆಯ ಶಿಕ್ಷಕರು, ಶಾಲಾ ಅಭಿವೃದ್ಧಿ ಸಮಿತಿ, ಪೋಷಕರು ಹಾಜರಿದ್ದರು.
ದಕ್ಷಿಣ ವಲಯ ವಾಲಿಬಾಲ್: ಜೈ ಸೂರ್ಯ ಆಯ್ಕೆ
ತೀರ್ಥಹಳ್ಳಿ: ಯೂನಿವರ್ಸಿಟಿ ಆಫ್ ಕೇರಳ, ತಿರುವಂತಪುರಂ ನಲ್ಲಿ ಪುರುಷರ south zone inter University, Volleyball ಪಂದ್ಯಾವಳಿಯು ನಡೆಯುತ್ತಿದ್ದು, ಕುವೆಂಪು ವಿಶ್ವವಿದ್ಯಾಲಯದ ತಂಡದಿಂದ ತೀರ್ಥಹಳ್ಳಿ ತುಂಗಾ ಮಹಾ ವಿದ್ಯಾಲಯದ ಕ್ರೀಡಾಪಟುವಾದ ಜೈ ಸೂರ್ಯ ದ್ವಿತೀಯ ಬಿಕಾಂ ವಿಭಾಗದ ವಿದ್ಯಾರ್ಥಿಯು ಆಯ್ಕೆಯಾಗಿರುತ್ತಾರೆ. ಇವರಿಗೆ ತುಂಗಾ ಮಹಾವಿದ್ಯಾಲಯದ ಆಡಳಿತ ಮಂಡಳಿ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳು.