ಸೆ.29 ರಂದು“ಜೊತೆಗಿರುವನು ಚಂದಿರ” ನಾಟಕ
* ಜಯಂತ್ ಕಾಯ್ಕಿಣಿ ಅವರ ಕನ್ನಡಕ್ಕೆ ಭಾಷಾಂತರಿಸಿ ರಂಗರೂಪ
* ಅಪರೂಪದ ರಂಗ ಪ್ರದರ್ಶನವಾಗಿದ್ದು, ಅದ್ಭುತ ನಾಟಕ
NAMMUR EXPRESS NEWS
ತೀರ್ಥಹಳ್ಳಿ: ಅದ್ಭುತವಾದ ರಂಗ ಪ್ರಯೋಗದೊಂದಿಗೆ ತೀರ್ಥಹಳ್ಳಿಯಲ್ಲಿ ಸೆ.29 ಸಂಜೆ 7:00ಕ್ಕೆ ಶಾಂತವೇರಿ ಗೋಪಾಲಗೌಡ ರಂಗಮಂದಿರ, ತೀರ್ಥಹಳ್ಳಿಯಲ್ಲಿ “ಜೊತೆಗಿರುವವನು ಚಂದಿರ” ನಾಟಕವನ್ನು ಆಯೋಜಿಸಲಾಗಿದೆ.
ಇದೊಂದು ಅಪರೂಪದ ರಂಗ ರೂಪ ರಷ್ಯನ್ ಕವಿ ತೊಕೋಮ್ ಅಲೈಖೆಮ್- ಜೋಸೆಫ್ ಸ್ಟೀನ್ ರಚಿತ “ಫಿಡ್ಲರ್ ಆನ್ ದಿ ರೂಫ್” ಕಥೆಗಳನ್ನು ಆಧರಿಸಿ ರಚಿಸಿದ ನಾಟಕ ಗೋಪಾಲಗೌಡ ರಂಗಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಸಂದೇಶ್ ಜವಳಿ ಇವರು ಮಾತನಾಡಿದರು.
ರಷ್ಯಾದ ಅಲ್ಪಸಂಖ್ಯಾತ ಕುಟುಂಬವೊಂದರ ಕಥಾ ನಾಟಕವಾಗಿದ್ದು, ಪ್ರತಿಕೂಲ ಪರಿಸ್ಥಿತಿಯನ್ನು ಎದುರಿಸುವ ಏಕ ಮಾತ್ರ ಉಪಾಯದಂತಿರುವ ಜ್ಯೂ ಜನರ ವಿಶಿಷ್ಟ ಹಾಸ್ಯ ಪ್ರಜ್ಞೆ ಮತ್ತು ದಟ್ಟ ಕೌಟುಂಬಿಕತೆ ಈ ನಾಟಕದ ಜೀವಾಳ ಎಂದು ಹೇಳಿದ್ದಾರೆ.
ಯುದ್ದ, ದೇಶವಿಭಜನೆ, ಅಭಿವೃದ್ದಿ, ಅಣೆಕಟ್ಟು ಇತ್ಯಾದಿಗಳ ನೆಪದಲ್ಲಿ ಮನುಷ್ಯನ ಸ್ಥಾನಾಂತರ ಮತ್ತು ಉಚ್ಚಾಟಣೆಗಳು ವಿಶ್ವದೆಲ್ಲಡೆ ನಡೆದೇ ಇವೆ. ಭಾರತದ ದೇಶವಿಭಜನೆಯ ಸಂಧರ್ಭವನ್ನು ಈ ನಾಟಕದಲ್ಲಿ ಅಳವಡಿಸಲು ಯತ್ನಿಸಲಾಗಿದೆ.
ಖ್ಯಾತ ಕವಿ ಶ್ರೀ ಜಯಂತ್ ಕಾಯ್ಕಿಣಿ ಇವರು ಈ ಮೂಲ ಕಥೆಯನ್ನು ಕನ್ನಡಕ್ಕೆ ಭಾಷಾಂತರಿಸಿ ರಂಗರೂಪವನ್ನು ನೀಡಿದ್ದಾರೆ.
ಕಾಯ್ಕಿಣಿರವರು ಮೂಲದಲ್ಲಿ ಇರುವ ಪಾತ್ರ ಚಿತ್ರಣ, ಒಟ್ಟಾರೆ ವಾತಾವರಣ, ಹಾಡು ಮತ್ತು ನೃತ್ಯದ ಲವಲವಿಕೆ ಎಲ್ಲವನ್ನು ಹಿಡಿದಿಡುವಂತೆ ಇದನ್ನು ಅನುವಾದಿಸಿದ್ದಾರೆ. ನಮ್ಮ ಭಾರತೀಯ ಸಂಧರ್ಭಕ್ಕೆ ಹಾಗೂ ಮುಸ್ಲಿಂ ಸಂಸ್ಕೃತಿಗೆ ಒಗ್ಗುವಂತೆ ರೂಪಾಂತರಿಸಿರುವ ಇವರ ಪ್ರತಿಭೆ ನಿಜಕ್ಕೂ ಅದ್ಭುತ ಎಷ್ಟೋಕಡೆ ಇವರ ಅನುವಾದ ಮೂಲವನ್ನೂ ಮೀರಿರುವುದು ನಾಟಕದಲ್ಲಿ ಅಲ್ಲಲ್ಲಿ ಗೋಚರಿಸುತ್ತದೆ.
ಉಚಿತ ಪ್ರವೇಶವಾಗಿದ್ದು ಸಾರ್ವಜನಿಕರು ರಂಗಭೂಮಿಗೆ ಬಂದು ರಂಗ ಪ್ರಯೋಗ ವೀಕ್ಷಿಸಬೇಕಾಗಿ ವಿನಂತಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಾಹಿತ್ಯಾಸಕ್ತರ ಬಳಗದ ನೆಂಪೆದೇವರಾಜ್, ನಟ ಮಿತ್ರರ ಪಂಡದ ಶ್ರೀಪಾದ, ಚೇತನ್, ಶಿವ್ಕುಮಾರ್, ಉಪಸ್ಥಿತರಿದ್ದರು.