ಮಕ್ಕಳ ನೃತ್ಯಕ್ಕೆ ತಲೆದೂಗಿದ ಜನ!
– ಸ್ವಾತಂತ್ರ್ಯ ಸಂಭ್ರಮ: ರೋಟರಿ ಕ್ಲಬ್ ಅಚ್ಚುಕಟ್ಟಿನ ಆಯೋಜನೆ
– ಸಾವಿರಾರು ಜನರ ಮೆಚ್ಚುಗೆ ಪಡೆದ ಮಕ್ಕಳ ನೃತ್ಯ
– ನಿವೃತ್ತ ಯೋಧ ಎ. ಎಂ. ಕೃಷ್ಣಕುಮಾರ್ ಅವರಿಗೆ ಸನ್ಮಾನ
NAMMUR EXPRESS NEWS
ತೀರ್ಥಹಳ್ಳಿ: ಸ್ವಾತಂತ್ರ್ಯ ಸಂಭ್ರಮದ ಅಂಗವಾಗಿ ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯ ಪ್ರಾಥಮಿಕ / ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನೃತ್ಯ ಹಾಗೂ ನೃತ್ಯ ರೂಪಕ ಸ್ಪರ್ಧೆ ಹಾಗೂ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಸಾವಿರಾರು ಜನರ ಸಮ್ಮುಖದಲ್ಲಿ ನಡೆಯಿತು.
ಆರಗ ಜ್ಞಾನೇಂದ್ರ ಮಾತನಾಡಿ, ಇಂತಹ ಅದ್ಭುತ ಕಾರ್ಯಕ್ರಮ ಮಾಡಿದ ರೋಟರಿ ಸಂಸ್ಥೆಗೆ ಅಭಿನಂದನೆಗಳು, ದೇಶ ಭಕ್ತಿ ತುಂಬುವ ಕೆಲಸ ಆಗಿದೆ. ಸ್ವಾತಂತ್ರ್ಯ ಮಹತ್ವವನ್ನು ಪ್ರತೀ ಪೀಳಿಗೆಗೆ ಕೊಂಡೋಯ್ಯಬೇಕು.ದೇಶಕ್ಕಾಗಿ ನಾವೆಲ್ಲರೂ ಕೊಡುಗೆ ನೀಡೋಣ. ಜಗತ್ತಿನ ಮೂರನೇ ಅತೀ ದೊಡ್ಡ ಸೈನ್ಯ ಎಂದು ಬಣ್ಣನೆ ಮಾಡಿದರು.
ರೋಟರಿ ಅ್ಯಕ್ಷರಾದ ಅನಿಲ್ ಮಾತನಾಡಿ, ರೋಟರಿ ಸಂಸ್ಥೆಯ ಈ ಕಾರ್ಯಕ್ರಮಕ್ಕೆ ಸಹಕಾರ ಮಾಡಿದ ಸರ್ವರಿಗೂ ಧನ್ಯವಾದ ಅರ್ಪಿಸಿದ್ದಾರೆ.
ರೋಟರಿ ಕ್ಲಬ್, ತೀರ್ಥಹಳ್ಳಿ ಇವರ ಸಹಯೋಗದಲ್ಲಿ ಆಟೋರಿಕ್ಷಾ ಚಾಲಕರ ಮತ್ತು ಮಾಲೀಕರ ಸಂಘ, ತೀರ್ಥಹಳ್ಳಿ, ನ್ಯಾಶನಲ್ ಗೋಲ್ಡ್ & ಡೈಮಂಡ್, ತೀರ್ಥಹಳ್ಳಿ ಗಾಯತ್ರಿ ಜ್ಯುವೆಲ್ಲರ್ಸ್, ತೀರ್ಥಹಳ್ಳಿ, ಮಲ್ನಾಡ್ ಕ್ಲಬ್, ತೀರ್ಥಹಳ್ಳಿ ಟಿ.ಎಸ್.ಟಿ ಹೈಪರ್ ಮಾರ್ಟ್, ತೀರ್ಥಹಳ್ಳಿ, ಸಪ್ತಸಿರಿ ಚಿಟ್ ಫಂಡ್ಸ್, ತೀರ್ಥಹಳ್ಳಿ, ಎಸ್.ಪಿ ಕೇಟರರ್ಸ್, ರಥಬೀದಿ, ತೀರ್ಥಹಳ್ಳಿ, ಬಳಗಟ್ಟೆ ಗ್ರೀನ್ಸ್ ನೇತೃತ್ವದಲ್ಲಿ 78 ನೇ ಸ್ವಾತಂತ್ರೋತ್ಸವದ ಅಂಗವಾಗಿ ತೀರ್ಥಹಳ್ಳಿ ಪಟ್ಟಣ ವ್ಯಾಪ್ತಿಯ ಪ್ರಾಥಮಿಕ / ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ನೃತ್ಯ ಹಾಗೂ ನೃತ್ಯ ರೂಪಕ ಸ್ಪರ್ಧೆ ಹಾಗೂ ಕಾರ್ಗಿಲ್ ವಿಜಯೋತ್ಸವದ ರಜತ ಮಹೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳ ನೃತ್ಯ ಹಾಗೂ ನೃತ್ಯ ರೂಪಕ ಗಮನ ಸೆಳೆಯಿತು.
ಬಿಇಒ ಗಣೇಶ್ , ಡಿವೈಎಸ್ಪಿ ಗಜಾನನ ವಾಮನ ಸುತಾರ, ಸೊಪ್ಪುಗುಡ್ಡೆ ರಾಘವೇಂದ್ರ, ಅಬ್ದುಲ್ ರೆಹಮಾನ್, ಪ್ರವೀಣ್ ಬಿಳುವೆ,
ಮಹಾಬಲೇಶ್ವರ ಹೆಗಡೆ, ಅನ್ನಪೂರ್ಣ ಜ್ಯುವೆಲ್ಲರೀ ಮಾಲೀಕ ಚಂದ್ರಶೇಖರ್.ಎನ್ ಸೇರಿ ಅನೇಕ ಗಣ್ಯರು ಇದ್ದರು. ನಿವೃತ್ತ ಯೋಧ, ಎಸ್ ಬಿ ಐ ಉದ್ಯೋಗಿ ಎ. ಎಂ. ಕೃಷ್ಣಕುಮಾರ್ ಅವರನ್ನು ಸನ್ಮಾನಿಸಲಾಯಿತು.
ಯಾವ ಯಾವ ಶಾಲೆಗಳಿಗೆ ಬಹುಮಾನ?
ನೃತ್ಯ ಹಾಗೂ ನೃತ್ಯ ರೂಪಕ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು
ಸೈ0ಟ್ ಮೇರಿಸ್ ಇಂಗ್ಲಿಷ್ ಮಾಧ್ಯಮ ಶಾಲೆ ಇಂದಿರಾ ನಗರ, ಸೈ0ಟ್ ಮೇರಿಸ್ ಪ್ರಾಥಮಿಕ ಶಾಲೆ, ದ್ವಿತೀಯ ಬಹುಮಾನ ವಾಗ್ದೇವಿ ಶಾಲೆ, ಸೇವಾ ಭಾರತಿ ಹಾಗೂ ಗರ್ಲ್ಸ್ ಹೈಸ್ಕೂಲ್ ಗೆದ್ದವು. ಸಮಾಧಾನಕರ ಬಹುಮಾನ ಸೈ0ಟ್ ಮೇರಿಸ್ ಶಾಲೆ, ಸೀಬಿನಕರೆ ಸರ್ಕಾರಿ ಪ್ರಾಥಮಿಕ ಶಾಲೆ ಪಡೆದವು.