ತೀರ್ಥಹಳ್ಳಿಯಲ್ಲಿ ಬಾಲ ಭಾರತಿಯಿಂದ ರಕ್ಷಾ ಬಂಧನ್
– ಭಾರತೀಯ ಯೋಗ ಶಿಕ್ಷಣ ಸಮಿತಿಯಿಂದ ಮಕ್ಕಳ ಶಿಬಿರ
– 150ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳಿಂದ ಮಕ್ಕಳಿಗೆ ಉಚಿತ ಶಿಕ್ಷಣ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಪ್ರೇರಣದಲ್ಲಿ ಬಾಲಭಾರತಿ ಮಕ್ಕಳ ವಿಕಾಸ ಶಿಬಿರದಲ್ಲಿ ಭಾನುವಾರ ರಕ್ಷಾ ಬಂಧನ್ ಕಾರ್ಯಕ್ರಮವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ತಾಲ್ಲೂಕು ವಿಸ್ತಾರಕ್ ವೆಂಕಟೇಶ್ ಜೀ ಅವರು ಭಾಗವಹಿಸಿದ್ದರು. ರಾಷ್ಟ್ರ ಸೇವಿಕಾ ಸಮಿತಿಯ ತಾಲ್ಲೂಕು ಸಂಪರ್ಕ ಪ್ರಮುಖ್ ವಾಣಿ ನಿರಂಜನ್ ರಾವ್ ಅವರು ಶಿಬಿರದ ಮಕ್ಕಳಿಗೆ ರಕ್ಷಾ ಬಂಧನದ ಮಹತ್ವ ತಿಳಿಸಿ ರಕ್ಷಾ ಬಂಧನದ ಶ್ಲೋಕ ಮತ್ತು ರಕ್ಷಾ ಗೀತೆಯನ್ನು ಹೇಳಿಕೊಟ್ಟರು.
ಯೋಗ ಶಿಕ್ಷಕರಾದ ಯಶೋಧ ಕೃಷ್ಣಮೂರ್ತಿ ಅವರು ಯೋಗ ಮತ್ತು ಪ್ರಾಣಾಯಾಮದ ಅಭ್ಯಾಸವನ್ನು ಮಾಡಿಸಿದರು. ರಾಜರಾಜೇಶ್ವರಿ ನೃತ್ಯ ಕಲಾ ಶಿಕ್ಷಣದ ಮುಖಸ್ಥರಾದ ಅರುಂಧತಿ ಭಟ್ ಅವರು ನೃತ್ಯವನ್ನು ಹೇಳಿಕೊಟ್ಟರು.ಪ್ರಸ್ತುತ ಇಟಲಿಯ ಮಿಲಾನ್ ನಲ್ಲಿ ಎಂ ಎಸ್ ಅಭ್ಯಾಸ ಮಾಡುತ್ಿರುವ ಸಂಗೀತಗಾರ್ತಿ, ಚಿತ್ರಕಲಾಗಾರ್ತಿ ಹಾಗೂ ಭರತನಾಟ್ಯ ಕಲಾವಿದೆಯಾದ ರಚನ ಅವರು ನೈತಿಕ ಶಿಕ್ಷಣದ ಮಹತ್ವವನ್ನು ತಿಳಿಸಿಕೊಟ್ಟರು. ಕುಶಾವತಿ ನಿವಾಸಿಯಾದ ಶೋಭ ಪ್ರಶಾಂತ್, ರೇಣುಕ ಸದಾಶಿವ ಮತ್ತು ಸವಿನ ಪ್ರಶಾಂತ್ ಅವರು ಮಕ್ಕಳಿಗೆಲ್ಲಾ ಆಟಗಳನ್ನು ಆಡಿಸುವಲ್ಲಿ ಯಶಸ್ವಿಯಾದರು.
ಅಕ್ಟೋಬರ್ 10 ರಂದು ಬಾಲಭಾರತಿ ಶಿಬಿರವು ಯಶಸ್ವಿಯಾಗಿ ಮೂರನೇ ವರ್ಷವನ್ನು ಯಶಸ್ವಿಯಾಗಿ ಪೂರೈಸಲಿದ್ದು ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಬೇಕಾದ ಯೋಗ ಶಿಕ್ಷಣ, ಸಂಸ್ಕೃತ ಶಿಕ್ಷಣ, ನೈತಿಕ ಶಿಕ್ಷಣ, ಲಲಿತಕಲಾ ಶಿಕ್ಷಣ, ದೈಹಿಕ ಶಿಕ್ಷಣವನ್ನು ನುರಿತ ಅನುಭವಿ ತರಬೇತುದಾರರಿಂದ ನೀಡಲಾಗುತ್ತಿದ್ದು ಈ ವರೆಗೂ ಸುಮಾರು ,150ಕ್ಕೂ ಹೆಚ್ಚು ಸಂಪನ್ಮೂಲ ವ್ಯಕ್ತಿಗಳು ಉಚಿತವಾಗಿ ಮಕ್ಕಳಿಗೆ ಶಿಕ್ಷಣವನ್ನು ನೀಡಿರುತ್ತಾರೆ.
ಬಾಲಭಾರತಿ ಶಿಬಿರವು ಭಾರತೀಯ ಯೋಗ ಶಿಕ್ಷಣ ಸಮಿತಿ ತೀರ್ಥಹಳ್ಳಿಯ ಸಹಯೋಗದೊಂದಿಗೆ ನಡೆಯುತ್ತಿದ್ದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ತೀರ್ಥಹಳ್ಳಿ ಸೇರಿದಂತೆ ಅನೇಕ ಸಂಘ ಸಂಸ್ಥೆಗಳ ಸಹಕಾರದಿಂದ ಈ ವರೆಗೂ ಯಶಸ್ವಿಯಾಗಿ ಮುನ್ನಡೆಸಿಕೊಂಡು ಬರಲು ಸಹಕಾರಿಯಾಗಿದೆ.