ಜಿಲ್ಲಾ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಪಿ.ಯು. ಕಾಲೇಜು ಮತ್ತೊಮ್ಮೆ ಮೇಲುಗೈ!
– 23 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ: ಸಹ್ಯಾದ್ರಿ ಶಿಕ್ಷಣ ಸಂಸ್ಥೆಗೆ ಕೀರ್ತಿ
NAMMUR EXPRESS NEWS
ತೀರ್ಥಹಳ್ಳಿ: ಶಿವಮೊಗ್ಗ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಸಹ್ಯಾದ್ರಿ ಪಿ.ಯು. ಕಾಲೇಜು ಮತ್ತೊಮ್ಮೆ ಮೇಲುಗೈ ಸಾಧಿಸಿದೆ.
ಸೆಪ್ಟೆಂಬರ್ 29 ಮತ್ತು 30 ರಂದು ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ನಡೆದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ನಮ್ಮ ಕಾಲೇಜಿನ ತಂಡವು ವಿವಿಧ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜಯಶಾಲಿಗಳಾಗುವ ಮೂಲಕ ಒಂದೇ ಕಾಲೇಜಿನ 23 ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗುವುದರೊಂದಿಗೆ ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಸಹ್ಯಾದ್ರಿ ಶಿಕ್ಷಣ ಸಂಸ್ಥೆಗೆ ಕೀರ್ತಿಯನ್ನು ತಂದಿರುತ್ತಾರೆ.
ರಾಜ್ಯಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳು
ಥ್ರೋಬಾಲ್ : ಆದ್ವಿ, ಮಾನ್ಯ, ಕವಿಶ್ರೀ, ನಾಗಶ್ರೀ, ನಮನ, ರೋಹಾನಿ, ಆಪ್ತ ರೈ, ತೇಜಸ್ವಿನಿ, ಸಾನಿಕ, ದೀಕ್ಷಾ.
ವಾಲಿಬಾಲ್: ಆರ್ಯ, ಸೃಷ್ಟಿ, ದೃತಿ, ನವಮಿ, ನವ್ಯ.
ಜಾವೆಲಿನ್ ಥ್ರೋ : ಸಾಗರ್
400 ಮೀ. & 4× 400 ರಿಲೇ: ಸೃಜನ್ ಪ್ರಭು
4× 400 ರಿಲೇ: ಅನುರಾಜ್
4× 400 ರಿಲೇ : ರಿಹಾನ್
4× 400 ರಿಲೇ : ಕಿರಣ್
ವಾಲಿಬಾಲ್: ಸಿದ್ದಾರ್ಥ್, ಆಸೀಫ್, ಹೇಮಂತ್ .
ಈ ಉದಯೋನ್ಮುಖ ಸಾಧಕ ಕ್ರೀಡಾ ಪ್ರತಿಭೆಗಳನ್ನು ಹಾಗೂ ಇವರನ್ನು ತರಬೇತಿಗೊಳಿಸುವ ಮೂಲಕ ರಾಜ್ಯ ಮಟ್ಟದ ಕ್ರೀಡಾಪಟುಗಳನ್ನಾಗಿ ತರಬೇತಿ ನೀಡದ ದೈಹಿಕ ಶಿಕ್ಷಣದ ನಿರ್ದೇಶಕರಾದ ಜಗದೀಶ್ ಎಂ.ಎಸ್. ಹಾಗೂ ಅಥ್ಲೆಟಿಕ್ಸ್ ತರಬೇತುದಾರರಾದ ಸಿರಾಜುದ್ದೀನ್ ಇವರನ್ನು ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ, ಆಡಳಿತ ಅಧಿಕಾರಿಗಳು, ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವೃಂದದವರು ಹಾರ್ದಿಕವಾಗಿ ಅಭಿನಂದಿಸಿ ಶುಭಹಾರೈಸಿದ್ದಾರೆ.
ಸಹ್ಯಾದ್ರಿ ಹಿರಿಯ ಪ್ರಾಥಮಿಕ ಶಾಲೆ ಮಕ್ಕಳ ಕ್ರೀಡಾ ಸಾಧನೆ!
ತೀರ್ಥಹಳ್ಳಿ: ಸರ್ಕಾರಿ ಪ್ರೌಢಶಾಲೆ ಮಳಲಿಮಕ್ಕಿಯ ಕ್ರೀಡಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ 14 ವರ್ಷ ವಯೋಮಿತಿಯೊಳಗಿನ ಬಾಲಕ-ಬಾಲಕಿಯರ ಕ್ರೀಡಾಕೂಟದಲ್ಲಿ ತೀರ್ಥಹಳ್ಳಿ ಸಹ್ಯಾದ್ರಿ ಆಂಗ್ಲ ಮಾದ್ಯಮ, ಕುಶಾವತಿ ಶಾಲೆಯ ವಿದ್ಯಾರ್ಥಿಗಳು ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗುವ ಮೂಲಕ ಶಾಲೆಗೆ ಕೀರ್ತಿ ತಂದಿದ್ದಾರೆ.
ವಿಜೇತ ವಿದ್ಯಾರ್ಥಿಗಳ ವಿವರ:
ಬಾಲಕಿಯರ ವಿಭಾಗ:
ತಟ್ಟೆ ಎಸೆತ – ದರ್ಶಿನಿ
ಗುಂಡು ಎಸೆತ – ದರ್ಶಿನಿ
ವಾಲೀಬಾಲ್ : ಫಾತಿಮಾ , ದರ್ಶಿನಿ, ಮಾನ್ಯ, ಪ್ರೀತಿ, ಶಿವಾನಿ, ಆಶ್ರಿತ, ದಿಶಾ, ಪ್ರತಿತ, ದ್ವಿತಿ, ಅಕ್ಷರ
ಬಾಲಕರ ವಿಭಾಗ :
ತಟ್ಟೆ ಎಸೆತ – ಪ್ರೀತಮ್
600 ಮೀ ಓಟ – ಆಶ್ರಯ್
ಈ ಕ್ರೀಡಾಕೂಟದಲ್ಲಿ ಭಾಗವಹಿಸಿ ಪ್ರಶಸ್ತಿ ಪಡೆದ ಹಾಗೂ
ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ ಕೀರ್ತಿ ತಂದಿರುವ
ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ
ಶಿಕ್ಷಕರಾದ ಹೆಚ್.ಆರ್. ಶ್ರೀಧರ್ ಇವರನ್ನು ಶಾಲಾ ಆಡಳಿತ
ಮಂಡಳಿ, ಆಡಳಿತಾಧಿಕಾರಿಗಳು ಮುಖ್ಯೋಪಾಧ್ಯಾಯಿನಿ ಯವರು ಹಾಗೂ ಸಹ ಶಿಕ್ಷಕ ವೃಂದ ಮತ್ತು ಪೋಷಕ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿದ್ದಾರೆ.