ತೀರ್ಥಹಳ್ಳಿಗೆ ಬಂದ ಶ್ರೀರಾಮ, ಲಕ್ಷ್ಮಣ, ಆಂಜನೇಯ!
– ಕೊಪ್ಪ ಸರ್ಕಲ್ ಅಲ್ಲಿ 45 ಅಡಿ ಎತ್ತರದ ಪ್ರತಿಮೆ
– ದಸರಾ ಅಂಗವಾಗಿ ತೀರ್ಥಹಳ್ಳಿಯಲ್ಲಿ ಹೊಸ ಮೆರುಗು
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಗೆ ಬಂದ ಶ್ರೀರಾಮ, ಲಕ್ಷ್ಮಣ, ಆಂಜನೇಯ…!
ಹೌದು. ತೀರ್ಥಹಳ್ಳಿ ಪಟ್ಟಣದ ಕೊಪ್ಪ ಸರ್ಕಲ್ ನಲ್ಲಿ ಸುಮಾರು 45 ಅಡಿ ಪ್ರತಿಮೆಯನ್ನು ಕೊಪ್ಪ ಸರ್ಕಲ್ ಅಲ್ಲಿ ದಸರಾ ಅಂಗವಾಗಿ ಪ್ರತಿಷ್ಠಾಪನೆ ಮಾಡಲಾಗಿದೆ. ಈ ಪ್ರತಿಮೆ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಎಲ್ಲಾ ಸ್ಟೇಟಸ್, ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗುತ್ತಿದೆ.
ಲಕ್ಷ್ಮಣ, ಶ್ರೀರಾಮ, ಆಂಜನೇಯ ಇರುವ ಮಹಾದ್ವಾರ ಇದೀಗ ತಾಲೂಕಿನ ಗಮನ ಸೆಳೆದಿದೆ. ಈ ಬಾರಿಯ ತೀರ್ಥಹಳ್ಳಿ ದಸರಾಕ್ಕೆ ಮಹಾದ್ವಾರ ಹೆಚ್ಚಿನ ರಂಗು ನೀಡಲಿದೆ