ಮಕ್ಕಳ ಹೆಸರಲ್ಲಿ ದುಡ್ಡು ವಸೂಲಿ ಮಾಡಿದ ಅಪರಿಚಿತರು!
– ತೀರ್ಥಹಳ್ಳಿ ತಾಲೂಕಿನಲ್ಲಿ ಹಲವೆಡೆ ಪ್ರಕರಣ: ಏನಿದು ಘಟನೆ?
– ಮನೆ ಮನೆಗೆ ಹೋಗಿ ಮಕ್ಕಳ ಪೋಷಕರಿಂದ ಹಣ ವಸೂಲಿ!
NAMMUR EXPRESS NEWS
ತೀರ್ಥಹಳ್ಳಿ: ಮಾಳೂರು ಕುವೆಂಪು ಶತಮಾನೋತ್ಸವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಮಾಳೂರು ಹೆಸರು ಹೇಳಿಕೊಂಡು ವಿದ್ಯಾರ್ಥಿಗಳ ಮನೆಗೆ ಇಬ್ಬರು ವ್ಯಕ್ತಿಗಳು ಭೇಟಿ ನೀಡಿ ಹಣ ಲಪಟಾಯಿಸಿರುವ ಘಟನೆ ವರದಿಯಾಗಿದೆ.
ಶಾಲೆಯ ವಿದ್ಯಾರ್ಥಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ನಿಖರವಾಗಿ ತಿಳಿಸಿ ( ಉದಾ : ಹೆಸರು, ಶಾಲೆ ಹೆಸರು, ತಂದೆ ತಾಯಿ ಹೆಸರು, ಸ್ನೇಹಿತರ ಹೆಸರು, ತರಗತಿ, ಶಿಕ್ಷಕರ ಹೆಸರು, …. ) ನಿಮ್ಮ ಮಗ / ಮಗಳು ಯಾವುದೋ ಒಂದು ಸ್ಪರ್ಧೆಯ ಹೆಸರು ಹೇಳಿ, ಆ ಸ್ಪರ್ಧೆಗೆ ಸೆಲೆಕ್ಟ್ ಆಗಿದ್ದಾನೆ / ಳೆ. ನಿಮಗೆ ಈ ಪುಸ್ತಕಗಳ ಅವಶ್ಯಕತೆ ಇದೆ. ಇದನ್ನು ಕೊಂಡುಕೊಳ್ಳಲೇಬೇಕು, ಶಾಲಾ ಮುಖ್ಯ ಶಿಕ್ಷಕರು, ಶಿಕ್ಷಕರು ತಿಳಿಸಿದ್ದಾರೆ ಹೀಗೆ ಅದು, ಇದು ಹೇಳಿ ಪೋಷಕರನ್ನು, ವಿದ್ಯಾರ್ಥಿಗಳನ್ನು ನಂಬಿಸಿ ₹ 1900 ಮೊತ್ತದ ಪುಸ್ತಕಗಳನ್ನು ಮಾರಾಟ ಮಾಡಿ ವಂಚಿಸಿರುವ ಮೂರು ನಾಲ್ಕು ಪ್ರಕರಣ ಇಂದು ಜರುಗಿದೆ.
ಆದ ಕಾರಣ ಈಗಾಗಲೇ ನಮ್ಮ ಶಾಲೆಯ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಈ ಕುರಿತು ಎಚ್ಚರಿಕೆಯ ಸಂದೇಶ ಕಳುಹಿಸಿ ಜಾಗೃತಗೊಳಿಸಿದೆ. ಇದೆ ರೀತಿಯ ಪ್ರಕರಣ ತಾಲ್ಲೂಕಿನ ಇತರೆ ಶಾಲಾ ಮಕ್ಕಳಿಗೆ ಆಗಬಾರದೆಂದು ಈ ಮಾಹಿತಿಯನ್ನು ಈ ಗ್ರೂಪ್ ನಲ್ಲಿ ಹಂಚಿಕೊಳ್ಳಲಾಗಿದೆ. ಈ ಬಗ್ಗೆ ಪೋಷಕರು ಜಾಗೃತಿ ವಹಿಸಬೇಕಿದೆ.
ಕಳೆದ ವರ್ಷವೂ ನಡೆದಿತ್ತು ವಂಚನೆ!
ಕಳೆದ ವರ್ಷ ಕೂಡ ಕೆಲ ಅಪರಿಚಿತರು ಇದೇ ರೀತಿ ಮೋಸ ಮಾಡಿದ್ದರು. ಕೆಲವು ಪುಸ್ತಕಗಳನ್ನು ಕೊಟ್ಟು ತಮ್ಮ ಮಕ್ಕಳಿಗೆ ಶಾಲಾ ಶಿಕ್ಷಕರು ತೆಗೆದುಕೊಳ್ಳಲು ಹೇಳಿದ್ದಾರೆ ಎಂದು ಹಣ ತೆಗೆದುಕೊಂಡು ಹೋಗಿ ಮೋಸ ಮಾಡಿದರು