ಟಾಪ್ 4 ನ್ಯೂಸ್ ಮಲ್ನಾಡ್
ತೀರ್ಥಹಳ್ಳಿ : ಆ.19 ತೀರ್ಥಹಳ್ಳಿಯಲ್ಲಿ ಬೃಹತ್ ಪ್ರತಿಭಟನೆ
– ಶಿವಮೊಗ್ಗ : ಹೋಮ್ ಗಾರ್ಡ ರೈಲಿಗೆ ಬಿದ್ದು ಆತ್ಮಹತ್ಯೆ
– ಸಾಗರ: ಕುಡಿದು ವಾಹನ ಚಾಲನೆ, 24 ಸಾವಿರ ರೂ. ದಂಡ
– ಶಿವಮೊಗ್ಗ : ಜಿಂಕೆ ಶಿಕಾರಿ ಐವರು ಸೆರೆ
NAMMUR EXPRESS NEWS
ತೀರ್ಥಹಳ್ಳಿ: ಈಗಾಗಲೇ ಅರಣ್ಯ ಒತ್ತುವರಿ ತೆರವು ಬಗ್ಗೆ ನಾವೆಲ್ಲರೂ ಸಭೆ ನಡೆಸಿದ್ದೇವೆ. ಅದೊಂದು ಅವೈಜ್ಞಾನಿಕ ಒತ್ತುವರಿ ತೆರವು ಪ್ರಕ್ರಿಯೆ ಆಗಿದೆ. ಈ ಕಾರಣಕ್ಕೆ ಆಗಸ್ಟ್ 19 ಕ್ಕೆ ಬೃಹತ್ ಪ್ರತಿಭಟನೆ ನಡೆಸಲಿದ್ದೇವೆ ಎಂದು ರೈತ ಸಂಘದ ಮುಖಂಡರಾದ ಕಂಬಳಿಗೆರೆ ರಾಜೇಂದ್ರ ತಿಳಿಸಿದರು. ಅವೈಜ್ಞಾನಿಕ ಒತ್ತುವರಿ ತೆರವು ಖಂಡಿಸಿ 19 ರಂದು ಪಕ್ಷಾತೀತವಾಗಿ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಗೆ ರೈತ ಸಂಘ, ಸಮಾನ ಮನಸ್ಕರು, ಕರ್ನಾಟಕ ರಕ್ಷಣಾ ವೇದಿಕೆ, ದಲಿತ ಸಂಘರ್ಷ ಸಮಿತಿ ಸೇರಿ ಹಲವು ಸಂಘಟನೆಗಳು ಭಾಗಿಯಾಗಲಿವೆ ಎಂದರು. ತೀರ್ಥಹಳ್ಳಿಯ ವಿಚಾರಗಳನ್ನು ರಾಜ್ಯದ ಪ್ರತಿಯೊಬ್ಬರು ಗಮನವಿಟ್ಟು ನೋಡುತ್ತಾರೆ. ಹಗಾಗಿ ಈ ಪ್ರತಿಭಟನೆ ಮಹತ್ವದ್ದಾಗಿದೆ. ಇಲ್ಲಿ ಯಾರು ಬೇರೆ ಕಡೆಯಿಂದ ಬಂದು ವಲಸೆ ಸಾಗುವಳಿ ಮಾಡಿದವರಲ್ಲ, ಇಲ್ಲಿ ಇದ್ದಂತಹವರೇ ಸಾಗುವಳಿ ಮಾಡಿ ಬೆಳೆ ಬೆಳೆದವರು. ಅಂತವರ ಭೂಮಿಯನ್ನು ತೆರವು ಮಾಡುವುದು ಸರಿಯಲ್ಲ. ಅರಣ್ಯ ಇಲಾಖೆಯವರೇ ಒತ್ತುವರಿ ಮಾಡುತ್ತಾರೆ. ಇಲ್ಲಿನ ಜನರಿಗೆ ರಸ್ತೆ, ಮನೆ, ಕುಡಿಯಲು ನೀರಿನ ವ್ಯವಸ್ಥೆ, ಅದಕ್ಕೂ ಮೀರಿ ಮತದಾನದ ಹಕ್ಕು ಕೊಡುತ್ತಾರೆ. ಇದೆಲ್ಲಾ ಆದ ಮೇಲೆ ಕಟ್ಟಿಕೊಂಡ ಮನೆ ಒತ್ತುವರಿ ಜಾಗ ಎಂದು ಹೇಳುತ್ತಾರೆ. ಇದರಲ್ಲಿ ನ್ಯಾಯ ಎಲ್ಲಿದೆ? ಎಂದು ಪ್ರಶ್ನೆ ಮಾಡಿದರು.
– ಶಿವಮೊಗ್ಗ : ಹೋಮ್ ಗಾರ್ಡ ರೈಲಿಗೆ ಬಿದ್ದು ಆತ್ಮಹತ್ಯೆ
ಶಿವಮೊಗ್ಗ : ನಗರದ ಮಲವಗೊಪ್ಪದ ಬಳಿ ರೈಲ್ವೆ ಹಳಿ ಮೇಲೆ ಪುರಷರೊಬ್ಬರ ಮೃತದೇಹ ಪತ್ತೆಯಾಗಿದೆ. ಇವರನ್ನು ಹೋಮ್ ಗಾರ್ಡ್ ಡ್ಯೂಟಿ ಮಾಡುವ ಮಂಜುನಾಥ್ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಇವರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಶಿವಮೊಗ್ಗ ರೈಲ್ವೆ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.
– ಸಾಗರ: ಕುಡಿದು ವಾಹನ ಚಾಲನೆ, 24 ಸಾವಿರ ರೂ. ದಂಡ
ಸಾಗರ : ಜೋಗ ಜಲಪಾತ ನೋಡಲು ಸಾವಿರಾರು ಮಂದಿ ಬರುತ್ತಿದ್ದು, ಈ ನಡುವೆ ಮದ್ಯಪಾನಿಗಳ ಹಾವಳಿ ಹೆಚ್ಚಾಗುತ್ತಿದೆ. ಇದಕ್ಕೆ ಪೂರಕ ಎಂಬಂತೆ ಜೋಗ ಜಲಪಾತ ನೋಡಲು ಆಗಮಿಸಿದ್ದ ಮೂವರು ಕುಡಿದು ವಾಹನ ಚಾಲನೆ ಮಾಡಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಕಾರ್ಗಲ್ ಠಾಣೆ ಪೊಲೀಸರು ಮೊಕದ್ದಮೆ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯ ಮೂವರಿಗೆ ತಲಾ 8000 ರೂ. ಗಳಂತೆ ಒಟ್ಟು 24,000 ರೂ. ದಂಡ ವಿಧಿಸಿ. ಆದೇಶಿಸಿದೆ.
– ಶಿವಮೊಗ್ಗ : ಜಿಂಕೆ ಶಿಕಾರಿ ಐವರು ಸೆರೆ
ಶಿವಮೊಗ್ಗ : ಖಾಸಗಿ ಎಸ್ಟೇಟ್ ಒಂದರಲ್ಲಿ ಜಿಂಕೆಯನ್ನು ಶಿಕಾರಿ ಮಾಡಿ ಕಾರಿನಲ್ಲಿ ಸಾಗಿಸುತ್ತಿದ್ದ ತಂಡವನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ಬಂಧಿಸಿದ್ದಾರೆ. ಭದ್ರಾ ವನ್ಯಜೀವಿ ವಿಭಾಗದ ಅಧಿಕಾರಿಗಳು ಈ ಕಾರ್ಯಾ ಚರಣೆಯನ್ನು ನಡೆಸಿದ್ದಾರೆ. ಹಬ್ಬೆ ಅರಣ್ಯ ವಲಯದ ಲಿಮಿಟ್ನಲ್ಲಿ ಬರುವ ಚಿಕ್ಕಮಗಳೂರು ತಾಲ್ಲೂಕು ಕೋಡಿ ಗ್ರಾಮದಲ್ಲಿ ಆಗಸ್ಟ್ 10 ರಂದು ಚುಕ್ಕಿ ಜಿಂಕೆ ಯನ್ನು ಬೇಟೆಯಾಡಲಾಗಿತ್ತು. ಈ ಬಳಿಕ ಅದನ್ನು ಕಾರಿನಲ್ಲಿ ಸಾಗಿಸಲು ಆರೋಪಿಗಳು ಯತ್ನಿಸುತ್ತಿದ್ದಾಗ ಭದ್ರಾ ವನ್ಯಜೀವಿ ವಿಭಾಗದ ಬೇಟೆ ತಡೆ ಶಿಬಿರದ ಸಿಬ್ಬಂದಿಗಳು ಅಡ್ಡಗಟ್ಟಿ ವಶಪಡಿಸಿಕೊಂಡಿದ್ದಾರೆ. ನಂತರ ವಾಹನವನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿ ಸಿಂಗಲ್ ಬ್ಯಾರೆಲ್ ಗನ್ ಹಾಗು ಜಿಂಕೆಯ ಅವಶೇಷ ಇರುವುದು ಗೊತ್ತಾಗಿದೆ. ತಕ್ಷಣವೇ ವಾಹನದಲ್ಲಿದ್ದ ಐವರನ್ನು ಅರೆಸ್ಟ್ ಮಾಡಿದ್ದಾರೆ. ಐವರನ್ನು ಭಾನುವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.