ತೀರ್ಥಹಳ್ಳಿ ಶ್ರೀ ರಾಮೇಶ್ವರ ದಸರಾ ರಂಗು!
* ಕಣ್ಮನ ಸೆಳೆಯುವ ಆಕರ್ಷಕ ದಸರಾ ಮೆರವಣಿಗೆ
* ಸಭಾ ಕಾರ್ಯಕ್ರಮದ ನಂತರ ಯುವ ದಸರಾ
* ಗಿಚ್ಚಿ ಗಿಲಿಗಿಲಿ ಸ್ಪರ್ಧೆ ವಿಜೇತ ಹುಲಿ ಕಾರ್ತಿಕ್ ಸೇರಿ ಅನೇಕರಿಗೆ ಗೌರವ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ದಸರಾ ಉತ್ಸವ ವಿಜೃಂಭಣೆ ಹಾಗೂ ವಿಭಿನ್ನ ರೀತಿಯಲ್ಲಿ ಆಚರಿಸಲು ಸಿದ್ಧತೆ ನಡೆಯುತ್ತಿದೆ. ಇಡೀ ತೀರ್ಥಹಳ್ಳಿ ಪಟ್ಟಣ ದಸರಾಗೆ ಸಿಂಗಾರಗೊಳ್ಳುತ್ತಿದೆ.
ತೀರ್ಥಹಳ್ಳಿ ಪಟ್ಟಣದ ಉದ್ದಕ್ಕೂ ವಿದ್ಯುತ್ ಅಲಂಕಾರ ಮಾಡಲಾಗಿದೆ. ದಸರಾ ನಡೆಯುವ ಕುಶಾವತಿ ಪಾರ್ಕ್ ಕೂಡ ಅಲಂಕಾರ ನಡೆಯುತ್ತಿದೆ
ತೀರ್ಥಹಳ್ಳಿಯ ಸಂಪ್ರಾದಾಯಿಕ ಶ್ರೀ ರಾಮೇಶ್ವರ ದಸರಾ ಉತ್ಸವವನ್ನು ಪ್ರತಿ ವರ್ಷದಂತೆ ಈ ವರ್ಷವೂ ವೈವಿಧ್ಯಮಯವಾಗಿ ವಿಜೃಂಭಣೆಯಿಂದ ಆಚರಿಸಲಾಗುವುದೆಂದು ದಸರಾ ಸಮಿತಿಯ ಮುಖ್ಯ ಸಂಚಾಲಕ ಸಂದೇಶ್ ಜವಳಿ ಮಾಹಿತಿ ನೀಡಿದ್ದಾರೆ.
ಈ ಬಾರಿ ದಸರಾ ಆಕರ್ಷಣೆಯಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಅಂತರ ಜಿಲ್ಲಾ ದಸರಾ ಕವಿಗೋಷ್ಠಿ ಮತ್ತು ಅ.10-2024 ರ ಚಾಮುಂಡೇಶ್ವರಿ ದೇವಿಯ ಅಂಬಾರಿಯೊಂದಿಗೆ ಶ್ರೀ ರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವವವನ್ನು ಐತಿಹಾಸಿಕ, ಪೌರಾಣಿಕ, ಸಮಕಾಲಿನ ಕಥಾ ವಸ್ತುಗಳ ಸ್ಥಬ್ದ ಚಿತ್ರಗಳು ಮತ್ತು ಕರ್ನಾಟಕದ ಪಾರಂಪರಿಕ ಜಾನಪದ ಕಲಾ ತಂಡಗಳು, ಈ ಬಾರಿಯ ವಿಶೇಷ ಆಕರ್ಷಣೆಯಾಗಿ ಕೇರಳದ ”ಥೈಯಂ” ಜಾನಪದ ಗೊಂಬೆಗಳೊಂದಿಗೆ ಮೆರವಣಿಗೆಯಲ್ಲಿ ಬನ್ನಿಮಂಟಪಕ್ಕೆ ಕೊಂಡೊಯ್ಯಲಾಗುವುದೆಂದರು.
ಅಂತರ ಜಿಲ್ಲಾ ದಸರಾ ಕವಿಗೋಷ್ಠಿ!
ಇತಿಹಾಸದಲ್ಲೆ ಪ್ರಥಮ ಎಂಬಂತೆ ಈ ಬಾರಿ ಅಂತರ ಜಿಲ್ಲಾ ಕವಿಗೋಷ್ಠಿಯಲ್ಲಿ ಬೇರೆ ಬೇರೆ ಜಿಲ್ಲೆಗಳ ಸುಮಾರು 40 ಉದಯೋನ್ಮುಖ ಕವಿಗಳು ಭಾಗವಹಿಸಲಿದ್ದು,ಅ.10ರಂದು ಬೆಳಿಗ್ಗೆ 10.00ರಿಂದ ಶಾಂತವೇರಿ ಗೋಪಾಲಗೌಡ ರಂಗ ಮಂದಿರ ತೀರ್ಥಹಳ್ಳಿ ಅಂತರ ಜಿಲ್ಲಾ ದಸರಾ ಕವಿಗೋಷ್ಠಿ ಅಯೋಜಿಸಲಾಗಿದೆ.
ಶಾಸಕರು, ತೀರ್ಥಹಳ್ಳಿ ಕ್ಷೇತ್ರ ಆರಗ ಜ್ಞಾನೇಂದ್ರ, ಉದ್ಘಾಟನೆ ಮಾಡಲಿದ್ದು,ನಿಟ್ಟೂರು, ಸಾಹಿತಿಗಳು, ಶಾಂತಾರಾಮ್ ಪ್ರಭು, ಕವಿಗೋಷ್ಠಿ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಸಂಚಾಲಕರು, ದಸರಾ ಸಾಂಸ್ಕೃತಿಕ ಸಮಿತಿ ಡಾನ್ ರಾಮಣ್ಣ, ನಿರ್ವಹಣೆ ವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ನಂತರ ಯುವ ದಸರಾ
ತೀರ್ಥಹಳ್ಳಿಯ ಯುವ ಕಲಾವಿದರಿಂದ ಆಕರ್ಷಕ ಸಂಗೀತ, ನೃತ್ಯ, ಜಾನಪದ ಕಾರ್ಯಕ್ರಮಗಳ ಸಂಗಮ. ಅ.11ರ ಶುಕ್ರವಾರ, ನೆಹರೂ ಉದ್ಯಾನವನ, ಕುಶಾವತಿ, ತೀರ್ಥಹಳ್ಳಿಯಲ್ಲಿ ಸ್ಥಳೀಯ ಕಲಾವಿದರಿಂದ
ನೃತ್ಯ ಪ್ರದರ್ಶನ,ರಾತ್ರಿ 8.00 ರಿಂದ ಕರ್ನಾಟಕದ ಖ್ಯಾತ ಗಾಯಕರ ಶ್ರೀ ಸಿಂಫೋನಿ ಮೆಲೋಡಿಯಸ್ ಕಲಾವಿದರಿಂದ ಪ್ಯೂಷನ್ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಾನಪದ ಕಲಾ ತಂಡಗಳ ಮೆರವಣಿಗೆ
ಅ.12ರ ಶನಿವಾರ ಚಾಮುಂಡೇಶ್ವರಿ ದೇವಿಯ ಅಂಬಾರಿಯೊಂದಿಗೆ ಶ್ರೀ ರಾಮೇಶ್ವರ ದೇವರ ಪಲ್ಲಕ್ಕಿ ಉತ್ಸವ. ಐತಿಹಾಸಿಕ, ಪೌರಾಣಿಕ, ಸಮಕಾಲೀನ ಕಥಾ ವಸ್ತುಗಳ ಸ್ತಬ್ಧ ಚಿತ್ರಗಳು, ಕರ್ನಾಟಕದ ಸುಪ್ರಸಿದ್ಧ ಜಾನಪದ ಕಲಾ ತಂಡಗಳ ಕಣ್ಮನ ಸೆಳೆಯುವ ಆಕರ್ಷಕ ದಸರಾ ಮೆರವಣಿಗೆ ಕಾರ್ಯಕ್ರಮ. ಮಧ್ಯಾಹ್ನ 2.00 ರಿಂದ, ಶ್ರೀರಾಮೇಶ್ವರ ದೇವಸ್ಥಾನದ ಆವರಣದಿಂದ ಸಾಂಪ್ರದಾಯಿಕ ದಸರಾ ಮೆರವಣಿಗೆ ಮತ್ತು ಕಾರ್ಯಕ್ರಮಕ್ಕೆ ಮಾಜಿ ಗೃಹಸಚಿವರು ಮತ್ತು ಶಾಸಕರು ತೀರ್ಥಹಳ್ಳಿ ಆರಗ ಜ್ಞಾನೇಂದ್ರ ಚಾಲನೆ, ದಸರಾ ಮೆರವಣಿಗೆ ಕುಶಾವತಿಯ ನೆಹರು ಉದ್ಯಾನವನ ತಲುಪಿ ಬನ್ನಿಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳ ನಂತರ ಸಭಾಕಾರ್ಯಕ್ರಮ. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಮತ್ತು ಸಾಧನೆಗೈದ ಗಣ್ಯರಿಗೆ ಅಭಿನಂದನೆ ಕಾರ್ಯಕ್ರಮ ಆಯೋಜಿಸಲಾಗಿದೆ.
2024 ದಸರಾ ಗೌರವ: ಹಲವರಿಗೆ ಸನ್ಮಾನ
ಕಲರ್ಸ್ ಕನ್ನಡ ಚಾನೆಲ್ನ ಗಿಚ್ಚಿ ಗಿಲಿಗಿಲಿ ಸ್ಪರ್ಧೆಯ ವಿಜೇತರು ತೀರ್ಥಹಳ್ಳಿಯ ಹುಲಿ ಕಾರ್ತಿಕ್,ಮಾಳೂರು ಪೊಲೀಸ್ ಠಾಣೆ ರಾಮಪ್ಪ ಹೆಡ್ ಕಾನ್ಸ್ಟೇಬಲ್,ಸಮಾಜ ಸೇವಕರು, ಹೊಸ ಬೆಳಕು ಸೇವಾ ಸಂಸ್ಥೆ, ಬೈಲೂರು ತನುಲಾ ತರುಣ್, ತೀರ್ಥಹಳ್ಳಿ ಪೊಲೀಸ್ ಠಾಣೆ
ಲೋಕೇಶ್ ಹೆಡ್ ಕಾನ್ಸ್ಟೇಬಲ್ ಇವರಿಗೆ ಸನ್ಮಾನ ನಡೆಯಲಿದೆ.
ಸಮಿತಿ ಗೌರವಾಧ್ಯಕ್ಷರು, ಶಾಸಕರು ಆರಗ ಜ್ಞಾನೇಂದ್ರ, ಸಂಚಾಲಕರಾದ ಸಂದೇಶ್ ಜವುಳಿ, ಸೊಪ್ಪುಗುಡ್ಡೆ ರಾಘವೇಂದ್ರ, ಜಯಪ್ರಕಾಶ್ ಶೆಟ್ಟಿ ಡಾನ್ ರಾಮಣ್ಣ ಶೆಟ್ಟಿ, ಟಿ. ಜೆ ಅನಿಲ್, ರತ್ನಾಕರ ಶೆಟ್ಟಿ ಉಪಸ್ಥಿತರಿದ್ದರು.