ತೀರ್ಥಹಳ್ಳಿ ಜೆಸಿಐ ಪೂರ್ವಾಧ್ಯಕ್ಷರುಗಳಿಗೆ ಕೃತಜ್ಞತೆ
– ಸಂಸ್ಥೆಯ ಸೇವೆ, ಸಾಮಾಜಿಕ ಕೆಲಸಗಳ ಮೆಲುಕು
– ಸೆ.14ರಂದು ಜೆಸಿಐ ಭಾರತದ ವಜ್ರ ಮಹೋತ್ಸವ ಕಾರ್ಯಕ್ರಮ
NAMMUR EXPRESS NEWS
ತೀರ್ಥಹಳ್ಳಿ: ಜೆಸಿಐ ಸಪ್ತಾಹ 2024 ರ ಮೊದಲ ದಿನದ ಪ್ರಯುಕ್ತ ಜೆಸಿಐ ತೀರ್ಥಹಳ್ಳಿ ಸಂಸ್ಥೆಯ ಹಿರಿಯ ಸದಸ್ಯರು, ಪೂರ್ವ ಅಧ್ಯಕ್ಷರಿಗೆ ಗೌರವ ಸಮರ್ಪಣೆ, ಕೃತಜ್ಞತಾ ಕಾರ್ಯಕ್ರಮ ರಥ ಬೀದಿಯಲ್ಲಿರುವ ಶ್ರೀ ಲಕ್ಷ್ಮಿ ಗೋಪಾಲ ಸಭಾಭವನದಲ್ಲಿ ನಡೆಯಿತು.
ಜೆಸಿಐ ತೀರ್ಥಹಳ್ಳಿ ಸಂಸ್ಥೆಯ ಕಾರ್ಯಕ್ರಮ ವಿಭಾಗದ ಉಪಾಧ್ಯಕ್ಷರಾದ ಜೆಸಿ ಸುಮಾ ಉಪೇಂದ್ರ ಗಣ್ಯರನ್ನು ವೇದಿಕೆಗೆ ಆಹ್ವಾನಿಸಿ, ಜೆಸಿ ರಾಜೇಂದ್ರ ಆಚಾರ್ಯ ಜೆಸಿ ವಾಣಿಯನ್ನು ವಾಚಿಸುವುದರ ಮೂಲಕ ಕಾರ್ಯಕ್ರಮ ಆರಂಭವಾಯಿತು. ಜೆಸಿಐ ತೀರ್ಥಹಳ್ಳಿ ಸಂಸ್ಥೆಯ ಅಧ್ಯಕ್ಷರಾದ ಜೆಸಿ ಹರೀಶ್ ಸರ್ಜಾ ಪ್ರಾಸ್ತಾವಿಕವಾಗಿ ಪ್ರಸಕ್ತ ಸಾಲಿನಲ್ಲಿ ನಡೆಸಿದ ಕಾರ್ಯಕ್ರಮಗಳ ಮುನ್ನೋಟ ಬೀರಿ, ಕಾರ್ಯಕಾರಿ ಸಮಿತಿ ಹಾಗೂ ಪೂರ್ವಾಧ್ಯಕ್ಷರುಗಳಿಗೆ ಕೃತಜ್ಞತೆ ಸಲ್ಲಿಸಿದರು. ತದನಂತರ ಜೆಸಿಐ ತೀರ್ಥಹಳ್ಳಿ ಸಂಸ್ಥೆಯಲ್ಲಿ ಅತ್ಯಂತ ಕ್ರಿಯಾಶೀಲರಾಗಿದ್ದ ಶ್ರೀ ಯುವಿ ಗಣ ಅಕಾಿಕ ರಣಕ್ಕೆ ಮೌನಚರಣೆ ಮಾಡುವುದರ ಮೂಲಕ ಅವರ ಆತ್ಮಕ್ಕೆ ಸಂತಾಪ ಸಲ್ಲಿಸಲಾಯಿತು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಪೂರ್ವ ಅಧ್ಯಕ್ಷರುಗಳು ಜೆಸಿಐ ತೀರ್ಥಹಳ್ಳಿ ಸಂಸ್ಥೆ ಬೆಳೆದು ಬಂದ ಹಾದಿಯನ್ನು ಅವರವರ ಅವಧಿಯಲ್ಲಿ ನಡೆಸಿದ ಕಾರ್ಯಕ್ರಮಗಳ ಮೆಲಕು ಹಾಕುವುದರ ಮೂಲಕ ನೆನಪಿನ ಬುತ್ತಿಯನ್ನು ತೆರೆದಿಟ್ಟು ಹಳೇ ಬೇರು ಹೊಸ ಚಿಗುರು ಪ್ರಯತ್ನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ತೀರ್ಥಹಳ್ಳಿ ಸಂಸ್ಥೆ ಪೂರ್ವ ಅಧ್ಯಕ್ಷರು ಮತ್ತು ಪೂರ್ವ ವಲಯ ಅಧ್ಯಕ್ಷರಾದ ಜೆಸಿ ಟಿ ಎನ್ ಜಗದೀಶ್ ರವರು ಜೆಸಿ ವಾಣಿಯ ಅರ್ಥವನ್ನು ಸಂದರ್ಭೋಚಿತವಾಗಿ ತಿಳಿಸಿದರು. ಜೆಸಿ ತೀರ್ಥಹಳ್ಳಿ ಸಂಸ್ಥೆಯ ಪೂರ್ವಾಧ್ಯಕ್ಷರುಗಳಾದ ಜೆಸಿ ಬಿಸಿಲುಮನೆ ಮಂಜುನಾಥ್, ಜೆಸಿ ಕೆಪಿಎಸ್ ಸ್ವಾಮಿ, ಜೆಸಿ ಸರ್ಜಾ ಕೈಲಾಸ್ ನಾಥ್, ಜೆಸಿ ರಾಘವೇಂದ್ರ ಆಚಾರ್ಯ, ಜೆಸಿ ಸರ್ಜಾ ಕೃಷ್ಣಮೂರ್ತಿ, ಜೆಸಿ ಮನೋಜ್ ಆಚಾರ್ಯ, ಜೆಸಿ ವಿನುತಾ ಮುರಳಿಧರ್, ಜೆಸಿ ಹೆಚ್ ಎಲ್ ಸೂರ್ಯನಾರಾಯಣ, ಜೆಸಿಐ ತೀರ್ಥಹಳ್ಳಿ ಘಟಕ ಬೆಳೆದ ಹಾದಿ, ಒಡನಾಟಗಳು, ಪ್ರಮುಖ ಕಾರ್ಯಕ್ರಮಗಳು, ಪ್ರಸಕ್ತ ವರ್ಷದ ಕಾರ್ಯಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ ಕಾರ್ಯಕಾರಿ ಸಮಿತಿಗೆ ಶುಭ ಹಾರೈಸಿದರು.
ವಲಯ ತರಬೇತಿದಾರರಾದ ಜೆಸಿ ಡಾ I ಮುರಳಿಧರ್ ಕಿರಣ್ ಕೆರೆ ರವರು ತರಬೇತಿ ಕಾರ್ಯಕ್ರಮಗಳ ಬಗೆಗೆ ಕವನವನ್ನು ರಚಿಸಿ ವಾಚಿಸಿದ್ದು ವಿಶೇಷವಾಗಿತ್ತು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಜೆಸಿಐ ತೀರ್ಥಹಳ್ಳಿ ಸಂಸ್ಥೆಯ ಪೂರ್ವಾಧ್ಯಕ್ಷರು ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ತೀರ್ಥಹಳ್ಳಿ ಲಿಜನ್ ಪ್ರಸಕ್ತ ಸಾಲಿನ ಅಧ್ಯಕ್ಷರಾದ ಜೆಸಿ ಹೆಚ್ಎಲ್ ಸೂರ್ಯನಾರಾಯಣರವರು ಜೆಸಿಐ ತೀರ್ಥಹಳ್ಳಿ ಘಟಕದ ಟಿ-ಶರ್ಟ್ ಅನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳ ಭಾಷಣದಲ್ಲಿ ಜೆಸಿಐ ತೀರ್ಥಹಳ್ಳಿ ಸಂಸ್ಥೆಯ ರ್ಷ ಕಾರ್ಯ ವೈರಿಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸಾರ್ವಜನಿಕ ಸೇವೆ, ವ್ಯಕ್ತಿತ್ವ ವಿಕಸನದಂತಹ ತರಬೇತಿ ಕಾರ್ಯಕ್ರಮಗಳನ್ನು ನಡೆಸಿ ವಲಯ ಮಟ್ಟದಲ್ಲಿ ಇನ್ನೂ ಹೆಚ್ಚಿನ ಪ್ರಾತಿನಿಧ್ಯ, ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು.
ನಿಕಟ ಪೂರ್ವ ಅಧ್ಯಕ್ಷರಾದ ಜೆಎಫ್ಎಂ ಅಭಿಜಿತ್ ಹಿರಿಯ ರವರ ಕಾರ್ಯಕ್ರಮದ ನಿರೂಪಣೆ ಅಚ್ಚುಕಟ್ಟಾಗಿ ಮೂಡಿ ಬಂತು.
ಜೆಸಿಐ ತೀರ್ಥಹಳ್ಳಿ ಘಟಕದ ಸದಸ್ಯರು ಕೂಡ ತಮ್ಮ ಜೆಸಿಐ ಸಂಸ್ಥೆಯ ಅನುಭವವನ್ನು ಹಂಚಿಕೊಂಡರು.
ಜೆಸಿಐ ತೀರ್ಥಹಳ್ಳಿ ಸಂಸ್ಥೆಯ ಕಾರ್ಯದರ್ಶಿಯಾದ ಜೆಸಿ ರವಿ ಆಚಾರ್ಯರವರು ಕಾರ್ಯಕ್ರಮದ ವಂದನಾರ್ಪಣೆ ನಡೆಸಿಕೊಟ್ಟರು.
ಇದೇ ದಿನದಂದು ಹಿರಿಯರಿಗೆ ತಂದೆ/ ತಾಯಿ, ಅಜ್ಜ /ಅಜ್ಜಿ ಯವರ ಯೋಗಕ್ಷೇಮ ವಿಚಾರಿಸುವ ಸಲುವಾಗಿ ಶಾಲಾ ಮಕ್ಕಳಿಗೆ ಕಾಗದ ಪತ್ರ ಬರೆಯುವ ಹವ್ಯಾಸ ಉತ್ತೇಜಿಸುವ ಕಾರ್ಯಕ್ರಮವನ್ನು ಸಹ ಹಮ್ಮಿಕೊಳ್ಳಲಾಗಿತ್ತು, ಸುಮಾರು190 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಈ ಕಾರ್ಯಕ್ರಮದಲ್ಲಿ ನಿಕಟಪೂರ್ವ ಅಧ್ಯಕ್ಷರಾದ ಜೆಎಫ್ಎಂ ಅಭಿಜಿತ್ ಹಿರಿಯ, ಜೆಸಿಐ ತೀರ್ಥಹಳ್ಳಿ ಸಂಸ್ಥೆಯ ಅಧ್ಯಕ್ಷರಾದ ಜೆಸಿ ಹರೀಶ್ ಸರ್ಜಾ, ಕಾರ್ಯದರ್ಶಿಯಾದ ಜೆಸಿ ರವಿ ಆಚಾರ್ಯ,
ಜೆಸಿ ಪುಷ್ಪಾ ಸರ್ಜಾ, ಜೆಸಿ ಸುಮನ ಆಚಾರ್ಯರವರು ಉಪಸ್ಥಿತರಿದ್ದರು.
ಜೆಸಿಐ ಭಾರತದ ವಜ್ರ ಮಹೋತ್ಸವ
ಜೆಸಿಐ ಭಾರತದ ವಜ್ರ ಮಹೋತ್ಸವದ ಪ್ರಯುಕ್ತ ಜೆಸಿಐ ತೀರ್ಥಹಳ್ಳಿ ಘಟಕದ ವತಿಯಿಂದ ಸಪ್ತಾಹದ ಪ್ರಯುಕ್ತ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಇದರ ಪ್ರಯುಕ್ತ ಸೆಪ್ಟೆಂಬರ್ 14ರ ಶನಿವಾರದಂದು ಶ್ರೀ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಆಯೋಜಿಸುತ್ತಿರುವ ಹಾಸನದ ರಂಗ ಹೃದಯ ಪ್ರಸ್ತುತಿ ‘ತಾಯಿಯಾಗುವುದೆಂದರೆ,’ ಎಂಬ ಏಕವ್ಯಕ್ತಿ ರಂಗ ಪ್ರದರ್ಶನಕ್ಕೆ ಜೆಸಿ ಸಂಸ್ಥೆಯವರು ಸರ್ವರನ್ನು ಆಹ್ವಾನಿಸಿರುತ್ತಾರೆ.