ಸ್ವಾತಂತ್ರ್ಯ ಹಬ್ಬದಲ್ಲಿ ದೇಶ ಪ್ರೇಮ ಮೆರೆದ ತೀರ್ಥಹಳ್ಳಿ ಜನ!
– 78ನೇ ಸ್ವಾತಂತ್ರೋತ್ಸವದ ಸವಿ ನೆನಪಿಗೆ 78ನೇ ಬಾರಿ ಫ್ರಾನ್ಸಿಸ್ ರಕ್ತದಾನ
– ಸೈಂಟ್ ಮಿಲಾಗ್ರಿಸ್ ಬ್ಯಾಂಕ್ ವತಿಯಿಂದ ವೃದ್ಧಾಶ್ರಮಕ್ಕೆ ವಸ್ತುಗಳ ವಿತರಣೆ
– ಸಂಗೊಳ್ಳಿ ರಾಯಣ್ಣನ ವೇಷ ಧರಿಸಿದ ಪುಟಾಣಿ!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿಯ ಎಲ್ಲೆಡೆ ಸ್ವಾತಂತ್ರ್ಯ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಅನೇಕ ಕಡೆ ವಿವಿಧ ಸಾಮಾಜಿಕ ಕೆಲಸಗಳು ನಡೆದಿವೆ.
78ನೇ ಬಾರಿ ಫ್ರಾನ್ಸಿಸ್ ರಕ್ತದಾನ..!
78ನೇ ಸ್ವಾತಂತ್ರೋತ್ಸವದ ಸವಿ ನೆನಪಿಗೆ 78ನೇ ಬಾರಿ ರಕ್ತದಾನ ಮಾಡಿದ ಶಿವಮೊಗ್ಗ ಜಿಲ್ಲಾ ಟಿ ಸಿ ಸಿ ಓ ಎಚ್ ಜಿಲ್ಲಾ ಅಧ್ಯಕ್ಷರು ಆದ ಪ್ರಾನ್ಸಿಸ್ ಅವರು ಇದೀಗ ಎಲ್ಲರಿಗೂ ಮಾದರಿ ಆಗಿದ್ದಾರೆ.
ಸಂಗೊಳ್ಳಿ ರಾಯಣ್ಣನ ವೇಷ ಧರಿಸಿದ ಪುಟಾಣಿ!
ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ, ಹೆಮ್ಮೆಯ ಕನ್ನಡಿಗ, ರಾಣಿ ಚೆನ್ನಮ್ಮನ ಬಂಟನಾಗಿ ಬ್ರಿಟೀಷರಿಗೆ ಸಿಂಹಸ್ವಪ್ನನಾಗಿದ್ದ ಕ್ರಾಂತಿ ಕಿಡಿ “ಸಂಗೊಳ್ಳಿ ರಾಯಣ್ಣ” ಜನ್ಮ ದಿನದಂದು ಸ್ವಾರ್ಥವಿಲ್ಲದ ಸವಾಮಿನಿ್ಟೆ, ಸಾಮಾಜಿಕ ಕಾಳಜಿ ಮತ್ತು ತ್ಯಾಗ-ಬಲಿದಾನಗಳನ್ನು ಸ್ಮರಿಸುತ್ತಾ
ಸ್ವಾತಂತ್ರ್ಯ ದಿನಾಚರಣೆ. ಶ್ರೇಯಸ್ ರಾವ್ ಹಾಗೂ ಸೌಜನ್ಯ ಶ್ರೇಯಸ್ ಅವರ ಪುತ್ರ ಶ್ರೇಯಾಂಶ್ ಸಂಗೊಳ್ಳಿ ರಾಯಣ್ಣನ ವೇಷ ಗಮನ ಸೆಳೆಯಿತು.
ಸೈಂಟ್ ಮಿಲಾಗ್ರಿಸ್ ಬ್ಯಾಂಕ್ ವತಿಯಿಂದ ಅಗತ್ಯ ವಸ್ತುಗಳ ವಿತರಣೆ
ತೀರ್ಥಹಳ್ಳಿ ತಾಲೂಕು ಆಗುಂಬೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಶಾಂತಿ ನಿಕೇತನ ಚಾರಿಟಬಲ್ ರಿ. ಜೀವಜ್ಯೋತಿ ವೃದ್ಧಾಶ್ರಮ ಎಂಸಿಬಿಎಸ್ ಹೌಸ್ ಹೋಲಿ ಫ್ಯಾಮಿಲಿ ಚರ್ಚ್ ಆಗುಂಬೆ ವೃದ್ಧಾಶ್ರಮಕ್ಕೆ ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಸೈಂಟ್ ಮಿಲಾಗ್ರಿಸ್ ಕ್ರೆಡಿಟ್ ಸೌಹಾರ್ದ ಕೊ-ಅಪರೇಟಿವ್ ಸೊಸೈಟಿ ಲಿ. ತೀರ್ಥಹಳ್ಳಿ ಶಾಖೆ ವತಿಯಿಂದ ಅಗತ್ಯ ವಸ್ತುಗಳನ್ನು ನೀಡಲಾಯಿತು. ಈ ವಿತರಣಾ ಸಂದರ್ಭದಲ್ಲಿ ವಿಶೇಷ ಅತಿಥಿಯಾಗಿ ಆಗುಂಬೆ ಪೋಲಿಸ್ ಠಾಣೆಯ ಪಿಎಸ್ಐ ರಂಗನಾಥ ಅಂತರಗಟ್ಟಿ ಆಗಮಿಸಿದ್ದು ವೃದ್ಧಾಶ್ರಮದಲ್ಲಿರುವ ಪ್ರತಿಯೊಬ್ಬರಿಗೂ ಅಗತ್ಯ ವಸ್ತುಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ಆಗುಂಬೆ ಪೋಲಿಸ್ ಠಾಣೆಯ ಸಿಬ್ಬಂದಿಗಳು, ಸೈಂಟ್ ಮಿಲಾಗ್ರಿಸ್ ಬ್ಯಾಂಕ್ ವ್ಯವಸ್ಥಾಪಕರಾದ ಸುನಿಲ್, ವೃದ್ಧಾಶ್ರಮದ ಫಾದರ್, ಸೈಂಟ್ ಮಿಲಾಗ್ರಿಸ್ ಸಂಸ್ಥೆಯ ಸಿಬ್ಬಂದಿ ವರ್ಗದವರು ಭಾಗಿಯಾಗಿದ್ದರು.
ಉಗ್ರರ ಗುಂಡಿಗೆ ಎದೆ ಕೊಟ್ಟ ಯೋಧನಿಗೆ ಸನ್ಮಾನ!
ಉಮಾಕಾಂತ್ ದತ್ತರಾಜಪುರ ಇವರು 2 ವರ್ಷಗಳ ಹಿಂದೆ ಕಾಶ್ಮೀರದಲ್ಲಿ ನಡೆದ ಉಗ್ರಗಾಮಿಗಳ ಗುಂಡಿನ ದಾಳಿಗೆ ಒಳಗಾಗಿದ್ದರು. ಅಸ್ಸಾಂ ಮತ್ತು ವಯಾನಾಡ್ ಪ್ರವಾಹ ದುರಂತ ಗಳಲ್ಲಿಯೂ ಅವರ ಸೇವೆಯನ್ನು ಗುರುತಿಸಬಹುದಾಗಿದೆ. ಈ ಕಾರ್ಯಕ್ರಮಕ್ಕ ನೇತಾಜಿ ಸರ್ಲ್ ನ ವರ್ತಕರೂ, ಸಾರ್ವಜನಿಕರೂ ಭಾಗಿಯಾಗಿದ್ದರು. ಲಘು ಉಪಹಾರದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯವಾಯಿತು.
ಜೋಪಡಿಯಲ್ಲಿ ಸ್ವಾತಂತ್ರ ಸಂಭ್ರಮ
ಸ್ವಾತಂತ್ರ ದಿನಾಚರಣೆಯನ್ನು ಕುರುವಳ್ಳಿ ಜೊಪಡಿಯಲ್ಲಿ ಸಂಭ್ರಮದಿಂದ ಆಚರಿಸಲಾಯಿತು .ಸತತ 15 ವರ್ಷಗಳಿಂದ ಸ್ವಾತಂತ್ರ ದಿನ ಆಚರಿಸುತ್ತಿದ್ದು ಇಲ್ಲಿ ಈ ಬಾರಿ ಅಂತಿಮವಾಗಿ ಆಚರಿಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಬುಕ್ಲಾಪುರ ಗ್ರಾಮದ ಬದಲಿ ನಿವೇಶದಲ್ಲಿ ಆಚ ರಿಸಲಿದ್ದೇವೆ ಎಂದು ನಿಶ್ಚಲ್ ಜಾದೂ ಗಾರ್ ಹೇಳಿದರು. ಧ್ವಜಾರೋಹಣಪಟ್ಟಣ ಪಂಚಾಯತ್ ಮಾಜಿ ಅಧ್ಯಕ್ಷರು, ಹಾಲಿ ಸದಸ್ಯ ರಹ ಮತ್ ಉಲ್ಲಾ ಅಸಾದಿ, ಸದಸ್ಯರಾದ ಮಂಜುಳಾ ನಾಗೇಂದ್ರ, ಸುಶೀಲಾ ಶೆಟ್ಟಿ, ಕುರುವಳ್ಳಿ ಪದ್ಮನಾಭ,ಖ್ಯಾತ ಶಿಲ್ಪಿ ಮಣಿಕಂಠ ಶಿಲ್ಪಕಲಾಕೇಂದ್ರ ಅಭಿರಾಂ, ಕಲಾವಿದ ಸಿದ್ದಾರ್ಥ್ ಇದ್ದರು.