ಕ್ರೀಡೆಯಲ್ಲಿ ತೀರ್ಥಹಳ್ಳಿ ಮಕ್ಕಳ ಗೆಲುವಿನ ದಾಖಲೆ!
– ವಾಗ್ದೇವಿ ಶಾಲೆಯ ಅನುಜ್, ಉತ್ಸವ್, ವರ್ಚಸ್, ಪೂರ್ವ ವಿಭಾಗ ಮಟ್ಟಕ್ಕೆ
– ಸಹ್ಯಾದ್ರಿ ಶಾಲೆ ಸಹೋದರಿಯರಾದ ಪಾವನಿ, ಗಾನವಿ ರಾಜ್ಯ ಮಟ್ಟಕ್ಕೆ
– ಯೋಗದಲ್ಲಿ ತೀರ್ಥಹಳ್ಳಿ ಗರ್ಲ್ಸ್ ಹೈಸ್ಕೂಲ್ ಶ್ರಾವಣಿ ಸಾಧನೆ
ತೀರ್ಥಹಳ್ಳಿ: ಭದ್ರಾವತಿಯಲ್ಲಿ ಶಾಲಾಶಿಕ್ಷಣ ಇಲಾಖೆಯವರು
ನಡೆಸಿದ 14 ಮತ್ತು 17 ವರ್ಷ ವಯೋಮಿತಿಯೊಳಗಿನ ಜಿಲ್ಲಾಮಟ್ಟದ ಕ್ರಿಕೆಟ್ ಆಯ್ಕೆಯಲ್ಲಿ ವಾಗ್ದೇವಿ ಆಂಗ್ಲಮಾಧ್ಯಮ ಶಾಲೆಯ ಅನುಜ್ ( 9 ನೆಯ ತರಗತಿ), ಉತ್ಸವ್ ಗೌಡ (8 ನೆಯ
ತರಗತಿ), ವರ್ಚಸ್ (8 ನೆಯ ತರಗತಿ) ಮತ್ತು ಪೂರ್ವ (7 ನೆಯ ತರಗತಿ) ಇವರು ಅತ್ಯುತ್ತಮವಾಗಿ ತಮ್ಮ ಆಟವನ್ನು ಪ್ರದರ್ಶಿಸಿ ಶೈಕ್ಷಣಿಕ ವಿಭಾಗವಾಗಿರುವ ಬೆಂಗಳೂರು ವಿಭಾಗೀಯ ಮಟ್ಟಕ್ಕೆ
ಆಯ್ಕೆಯಾಗಿದ್ದಾರೆ.
ಅತ್ಯುತ್ತಮ ಮಾರ್ಗದರ್ಶನವನ್ನು ನೀಡಿ, ವಿದ್ಯಾರ್ಥಿಗಳ ಬೆಳವಣಿಗೆಗೆ ಸಹಕರಿಸಿದ ಸಿಟಿ ಕ್ರಿಕೆಟ್ ಕ್ಲಬ್ ಮುಖ್ಯಸ್ಥರಾದ ಅಬ್ದುಲ್ ಕಲಾಂ ಆಜಾದ್ ರವರಿಗೆ ಹಾಗೂ ತರಬೇತುದಾರರಾದ ಸುಬ್ರಹ್ಮಣ್ಯ ಇವರಿಗೆ ವಾಗ್ದೇವಿ ಬಳಗ ಅಭಿನಂದನೆ ಸಲ್ಲಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಯನ್ನು ವಾಗ್ದೇವಿ ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಸದಸ್ಯರು, ಶಿಕ್ಷಕರು ಹಾಗೂ ಪೋಷಕರು ಅಭಿನಂದಿಸಿ ಮುಂದಿನ ಕ್ರೀಡೆಗೆ ಶುಭಹಾರೈಸಿದ್ದಾರೆ.
ಸಹ್ಯಾದ್ರಿ ಶಾಲೆ ಸಹೋದರಿಯರಾದ ಪಾವನಿ, ಗಾನವಿ ರಾಜ್ಯ ಮಟ್ಟಕ್ಕೆ
ಭದ್ರಾವತಿಯಲ್ಲಿ ನಡೆದ ೧೭ ವರ್ಷ ವಯೋಮಿತಿಯೊಳಗಿನ ಪ್ರೌಢಶಾಲಾ ವಿಭಾಗದ ಜಿಲ್ಲಾ ಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ಸಹ್ಯಾದ್ರಿ ಶಾಲೆಯ ವಿದ್ಯಾರ್ಥಿನಿಯರಾದ ಕು| ಪಾವನಿ (೯ನೇ ತರಗತಿ) ಹಾಗೂ ಕು|ಗಾನವಿ (೧೦ನೇ ತರಗತಿ) ಜಿಲ್ಲಾ ಮಟ್ಟದಲ್ಲಿ ಪ್ರಥಮ ಸ್ಥಾನ
ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ,
ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಕೀರ್ತಿ
ತಂದಿದ್ದಾರೆ.ಈ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ನಿರ್ದೇಶಕರಾದ ಜಗದೀಶ್ ಎಂ.ಎಸ್
ಇವರನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು,
ಪದಾಧಿಕಾರಿಗಳು, ನಿರ್ದೇಶಕರು, ಆಡಳಿತಾಧಿಕಾರಿಗಳು,
ಪ್ರಾಂಶುಪಾಲರು ಭೋದಕ – ಭೋದಕೇತರ
ವರ್ಗದವರು `ಹಾರ್ದಿಕವಾಗಿ ಅಭಿನಂದಿಸಿ ಶುಭ ಹಾರೈಸಿರುತ್ತಾರೆ.
ಯೋಗದಲ್ಲಿ ಗರ್ಲ್ಸ್ ಹೈಸ್ಕೂಲ್ ಶ್ರಾವಣಿ ಸಾಧನೆ
ತೀರ್ಥಹಳ್ಳಿ: ಸರ್ಕಾರಿ ಬಾಲಕಿಯರ ಪ್ರೌಢ ಶಾಲೆಯ ಎಂಟನೇ ತರಗತಿ ವಿದ್ಯಾರ್ಥಿನಿ ಶ್ರಾವಣಿ ಭದ್ರಾವತಿಯಲ್ಲಿ ನಡೆದ ಜಿಲ್ಲಾ ಮಟ್ಟದ ಯೋಗಾಸನದ ಸ್ಪರ್ಧೆಯಲ್ಲಿ ಭಾಗವಹಿಸಿ, ಗೆದ್ದು ವಿಭಾಗ ಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಸಾಧಕ ವಿದ್ಯಾರ್ಥಿಗೆ ಶಾಲೆಯ ಉಪ ಪ್ರಾಂಶುಪಾಲರು, ಮತ್ತು ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು, ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರುಗಳು, ಎಲ್ಲಾ ಮಕ್ಕಳು ಮತ್ತು ಪೋಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.