ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ಕ್ಷಣಗಣನೆ
– ಯಾರಿಗೆ ಒಲಿಯುತ್ತೆ ಪ.ಪಂ. ಅಧ್ಯಕ್ಷಗಿರಿ?: ಒಂದು ಸ್ಥಾನಕ್ಕೆ ಒಂಭತ್ತು ಆಕಾಂಕ್ಷಿ ಸ್ಪರ್ಧೆ?
– ಕೊನೆ ಗಳಿಗೆಯಲ್ಲಿ ನಾಯಕರ ಮಾತಿಗೆ ಒಪ್ತಾರಾ ಸದಸ್ಯರು?
NAMMUR EXPREES NEWS
ತೀರ್ಥಹಳ್ಳಿ: ತೀರ್ಥಹಳ್ಳಿ ಪಟ್ಟಣ ಪಂಚಾಯ್ತಿಯ ಮುಂದಿನ 26 ತಿಂಗಳಿಗೆ ಅಧ್ಯಕ್ಷಸ್ಥಾನ ಸಾಮಾನ್ಯ ವರ್ಗಕ್ಕೆ, ಉಪಾಧ್ಯಕ್ಷ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದ್ದು, ಆಗಸ್ಟ್ 27ರ ಮಂಗಳವಾರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದೆ.
ಪ.ಪಂ.ನಲ್ಲಿ ಬಹುಮತ ಇರುವ ಕಾಂಗ್ರೆಸ್ ಒಂಭತ್ತು ಕೌನ್ಸಿಲರ್ಗಳು ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು ಇಟ್ಟಿದ್ದಾರೆ. ಉಪಾಧ್ಯಕ್ಷ ಸ್ಥಾನಕ್ಕೆ ಗೀತಾ ರಮೇಶ್, ಶಬ್ನಂ ಅವರಿಗೆ ಅವಧಿ ಹಂಚಿಕೆಯಾಗುವ ಸಾಧ್ಯತೆ ಇದೆ.
20 ವರ್ಷಗಳ ಬಳಿಕ ಬಹುಮತ ಪಡೆದ ಕಾಂಗ್ರೆಸ್
20 ವರ್ಷಗಳ ನಂತರ ಕಾಂಗ್ರೆಸ್ ಇಲ್ಲಿ ಬಹುಮತ ಪಡೆದಿದೆ. ಆಗಸ್ಟ್ 27ರಂದು ಚುನಾವಣೆಗೂ ಮುನ್ನ ಈ ಕುರಿತು ಅಂತಿಮ ತೀರ್ಮಾನ ಕೈಗೊಳ್ಳಲು ಕಿಮ್ಮನೆ-ಆರ್ಎಂಎಂ ನೇತೃತವಲ್ಲಿ ಪಕ್ಷದ ಹಿರಿಯರು ಹಾಗೂ ಕಾಂಗ್ರೆಸ್ ಕೌನ್ಸಿಲರ್ಗಳ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಒಮ್ಮತದ ನಿರ್ಧಾರವಾಗುತ್ತೋ? ಅಧಿಕಾರ ಹಂಚಿಕೆ ಸೂತ್ರ ರೂಪುಗೊಳ್ಳುತ್ತೋ? ಅಥವಾ ಭಿನ್ನಾಭಿಪ್ರಾಯ ಸ್ಫೋಟವಾಗುತ್ತೋ ಎಂಬ ಕುತೂಹಲವಿದೆ.
ರೇಸ್ ಅಲ್ಲಿ ಯಾರು ಯಾರು?
ಹಿರಿಯ ಸದಸ್ಯ ರೆಹಮತ್ ಉಲ್ಲಾ ಅಸಾದಿ, ಜಯಪ್ರಕಾಶ್ ಶೆಟ್ಟಿ, ಮೊದಲ ಬಾರಿಗೆ ಗೆದ್ದರೂ ತಮ್ಮ ಕ್ರಿಯಾಶೀಲತೆಯಿಂದ ಗಮನ ಸೆಳೆದ ರತ್ನಾಕರ್ ಶೆಟ್ಟಿ ಈಗಾಗಲೇ ವರಿಷ್ಟರ ಬಳಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪರಿಶಿಷ್ಟ ಜಾತಿಗೆ ಸೇರಿದರೂ ಸಾಮಾನ್ಯ ಕ್ಷೇತ್ರದಿಂದ ಗೆದ್ದ ಮಂಜುಳಾ ನಾಗೇಂದ್ರ ಕಾಂಗ್ರೆಸ್ ಪಕ್ಷ ಎಸ್ಸಿ ಸಮುದಾಯಕ್ಕೆ ಈ ಬಾರಿ ಅವಕಾಶ ಕಲ್ಪಿಸಿ ಸಾಮಾಜಿಕ ನ್ಯಾಯ ಪಾಲಿಸಬಹುದೆಂಬ ನಿರೀಕ್ಷೆಯಲ್ಲಿದ್ದಾರೆ. ಅದೇ ರೀತಿ ಎಸ್ಟಿ ಸಮುದಾಯದ ಬಿ.ಗಣಪತಿ ಕಳೆದ 40 ವರ್ಷಗಳಿಂದ ಪಟ್ಟಣ ಪಂಚಾಯ್ತಿಯಲ್ಲಿ ಎಸ್ಟಿ ಸಮುದಾಯಕ್ಕೆ ಅವಕಾಶ ಸಿಕ್ಕಿಲ್ಲ. ಈ ಬಾರಿ ಕಾಂಗ್ರೆಸ್ ಪರಿಶಿಷ್ಟ ಪಂಗಡಕ್ಕೊಂದು ಅವಕಾಶ ನೀಡಬೇಕು. ನಾನು ಜಾತಿ-ಮೀಸಲಾತಿಯನ್ನು ಹೊರತು ಪಡಿಸಿಯೂ ಅಧ್ಯಕ್ಷ ಸ್ಥಾನಕ್ಕೆ ಅರ್ಹ ಎಂಬ ವಾದವನ್ನು ಬಿ.ಗಣಪತಿ ಮಂಡಿಸುತ್ತಾರೆ. ನಮೃತ್, ಗೀತಾ ರಮೇಶ್, ಶಬ್ದಂ, ಸುಶೀಲಾ ಶೆಟ್ಟಿ ಅವರುಗಳೂ ಅರ್ಹರಿದ್ದಾರೆ.
–ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರ ಕಾರ್ಯಕರ್ತರ ಸಭೆ
ತೀರ್ಥಹಳ್ಳಿ ಪಟ್ಟಣ ಪಂಚಾಯತ್ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಸಂಬಂಧ ಮಹತ್ವದ ಚರ್ಚೆ ನಡೆಸುವ ಸಲುವಾಗಿ 27-8-2024 ಂದು ಮಂಗಳವಾರ, ಬೆಳ್ಗೆ 10 ಗಂಟೆಗೆ ಕಾಂಗ್ರೆಸ್ ಕಚೇರಿ (ಗಾಂಧಿ ಭವನ)ಯಲ್ಲಿ ವಿಶೇಷ ಸಭೆಯನ್ನು ಕರೆಯಲಾಗಿದೆ. ಈ ಸಭೆಯಲ್ಲಿ ಅಧ್ಯಕ್ಷತೆಯನ್ನು ಕಾಂಗ್ರೆಸ್ ರಾಜ್ಯ ನಾಯಕರು, ಮಾಜಿ ಸಚಿವರಾದ ಶ್ರೀ ಕಿಮ್ಮನೆ ರತ್ನಾಕರ್ ವಹಿಸಲಿದ್ದಾರೆ. ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಆರ್. ಪ್ರಸನ್ನ ಕುಮಾರ್, ಪಕ್ಷದ ನಾಯಕರಾದ ಎಂಎಡಿಬಿ ಅಧ್ಯಕ್ಷರಾದ ಡಾ. ಆರ್.ಎಂ. ಮಂಜುನಾಥ್ ಗೌಡರು, ಕೆಪಿಸಿಸಿ ವೀಕ್ಷಕರು ಮತ್ತು ವಿಧಾನ ಪರಿಷತ್ ಸದಸ್ಯರಾದ ಶ್ರೀ ರಾಮೋಜಿ ಗೌಡ, ಕೆಪಿಸಿಸಿ ಉಸ್ತುವಾರಿ ಕಾರ್ಯದರ್ಶಿಗಳಾದ ಶ್ರೀ ಕಲಗೋಡು ರತ್ನಾಕರ್ ಸೇರಿದಂತೆ ಪಕ್ಷದ ವರಿಷ್ಠರು ಪಾಲ್ಗೊಳ್ಳಲಿದ್ದಾರೆ. ಈ ಸಭೆಯಲ್ಲಿ ಪಕ್ಷದ ಎಲ್ಲಾ ಕಾರ್ಯಕರ್ತರು, ಮುಖಂಡರುಗಳು ಜನಪ್ರತಿನಿಧಿಗಳು, ಸರ್ಕಾರದ ನಾಮ ನಿರ್ದೇಶನ ಸದಸ್ಯರುಗಳು, ವಿವಿಧ ಘಟಕಗಳ ಅಧ್ಯಕ್ಷರುಗಳು, ಪದಾಧಿಕಾರಿಗಳು ಭಾಗವಹಿಸಬೇಕೆಂದು ಕೋರಲಾಗಿದೆ.