ತೀರ್ಥಹಳ್ಳಿ: ಹಿಂದೂ ಹಿತರಕ್ಷಣಾ ಸಮಿತಿಯಿಂದ ಮಾನವ ಸರಪಳಿ
– ಬಾಂಗ್ಲಾದಲ್ಲಿ ಹಿಂದೂಗಳ ವಿರುದ್ಧ ಜನಾಂಗೀಯ ದ್ವೇಷಕ್ಕೆ ಖಂಡನೆ
– ಆ.13ಕ್ಕೆ ಪ್ರತಿಭಟನೆ, ತಹಸೀಲ್ದಾರ್ ಮೂಲಕ ಆಗ್ರಹ ಪತ್ರ
NAMMUR EXPRESS NEWS
ತೀರ್ಥಹಳ್ಳಿ: ಹಿಂದೂ ಹಿತರಕ್ಷಣಾ ಸಮಿತಿ, ತೀರ್ಥಹಳ್ಳಿ ವತಿಯಿಂದ ಬಾಂಗ್ಲಾದೇಶದಲ್ಲಿ ಮೀಸಲಾತಿ ವಿರುದ್ಧ ಆರಂಭವಾದ ಪ್ರತಿಭಟನೆ,
ಕ್ರಮೇಣ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳ ವಿರುದ್ಧ ಜನಾಂಗೀಯ ದ್ವೇಷ,ಅನಾಚಾರ-ಅತ್ಯಾಚಾರ,ಸುಲಿಗೆ,ದರೋಡೆ, ಪೂಜಾ ಮಂದಿರ ಹಾನಿ, ಆಸ್ತಿ-ಮಾನ-ಜೀವ ಹರಣಕ್ಕೆ ತಿರುಗಿದೆ.
ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂ ಸಹಿತ ಇನ್ನಿತರ ಮುಗ್ದ ಜೀವಿಗಳಿಗೆ ಆಗುತ್ತಿರುವ ಜನಾಂಗೀಯ ದ್ವೇಷದಿಂದ ರಕ್ಷಣೆ ಒದಗಿಸಲು ಆಗ್ರಹಿಸಿ, ಈ ಕಾರಣಕ್ಕಾಗಿ ಮಾನವ ಸರಪಳಿ ಹೋರಾಟ 13.08.2024ರ ಮಂಗಳವಾರ ಬೆಳಿಗ್ಗೆ 10 ಗಂಟೆಗೆ ಪ್ರತಿಭಟನೆ ಮತ್ತು
ತಾಲೂಕು ದಂಡಾಧಿಕಾರಿಗಳ ಮೂಲಕ ಆಗ್ರಹ ಪತ್ರ ನೀಡಲು ಹಿಂದೂ ಹಿತರಕ್ಷಣಾ ಸಮಿತಿ ನಿರ್ಧಾರ ಮಾಡಿದೆ. ಹಿಂದೂ ಪ್ರಮುಖರು ಪ್ರೇರಣದಲ್ಲಿ ಮಂಗಳವಾರ ಬೆಳಿಗ್ಗೆ l 10 ಗಂಟೆಗೆ ಸೇರಲು ಕರೆ ನೀಡಲಾಗಿದೆ.