ಟಾಪ್ 3 ನ್ಯೂಸ್
– ಶಿಕಾರಿಪುರ: ಆಸ್ಪತ್ರೆ ಆವರಣದ ನೀರಿನ ತೊಟ್ಟಿಗೆ ಬಿದ್ದು ಮೂರು ವರ್ಷದ ಬಾಲಕ ಸಾವು
– ತೀರ್ಥಹಳ್ಳಿ : ಹಣಕ್ಕಾಗಿ ಬೇಡಿಕೆ ಇಟ್ಟು ವಿಡಿಯೋ ರಿಲೀಸ್ ಮಾಡುವುದಾಗಿ ಬೆದರಿಕೆ
– ಹೊಸನಗರ : ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಲಾರಿ ಚಂಡಿಕಾಂಬಾ ದೇವಸ್ಥಾನದ ಮುಂಭಾಗ ಪಲ್ಟಿ
NAMMUR EXPRESS NEWS
ಶಿಕಾರಿಪುರ : ಆಸ್ಪತ್ರೆ ಆವರಣದಲ್ಲಿ ನೀರಿನ ಸಂಪ್ಗೆ ಬಿದ್ದು 3 ವರ್ಷದ ಬಾಲಕ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಶಿಕಾರಿಪುರ ಸರ್ಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ನಡೆದಿದೆ. ಮೊಹಮ್ಮದ್ ಐಯಾನ್(3) ಮೃತ ಬಾಲಕ ಆಸ್ಪತ್ರೆ ಸಿಬ್ಬಂದಿ ನಿರ್ಲಕ್ಷ್ಯದಿಂದ ಮಗು ಮೃತಪಟ್ಟಿರುವ ಆರೋಪ ಕೇಳಿಬಂದಿದೆ. ಘಟನಾ ಸ್ಥಳಕ್ಕೆ ಶಿಕಾರಿಪುರ ಠಾಣೆ ಪೊಲೀಸರ ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ಸರ್ಕಾರಿ ಆಸ್ಪತ್ರೆಯಲ್ಲಿ ಇಮ್ರಾನ್ ಸಂಬಂಧಿ ಚಿಕಿತ್ಸೆ ಪಡೆಯುತ್ತಿದ್ದರು. ಈ ವೇಳೆ ಸಂಬಂಧಿಯ ಆರೋಗ್ಯ ವಿಚಾರಿಸಲು ಕುಟುಂಬ ಆಸ್ಪತ್ರೆಗೆ ಬಂದಿದ್ದರು. ಆಸ್ಪತ್ರೆ ಒಳಗಡೆಯಿಂದ ಆಟವಾಡುತ್ತಾ ಮೊಹಮ್ಮದ್ ಹೊರಗೆ ಬಂದಿದ್ದು, ತುಂಬಿದ್ದ ನೀರಿನ ತೊಟ್ಟಿಗೆ ಬಿದ್ದು ಸಾವನ್ನಪ್ಪಿದ್ದಾನೆ. ಮುಚ್ಚಳ ಮುಚ್ಚದಿದ್ದಕ್ಕೆ ತೊಟ್ಟಿಗೆ ಬಿದ್ದು ಮಗು ಸಾವು ಎಂದು ಆರೋಪ ಮಾಡಲಾಗಿದೆ.
ಮಗು ಮೃತಪಟ್ಟ ನಂತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
– ತೀರ್ಥಹಳ್ಳಿ : ಹಣಕ್ಕಾಗಿ ಬೇಡಿಕೆ ಇಟ್ಟು ವಿಡಿಯೋ ರಿಲೀಸ್ ಮಾಡುವುದಾಗಿ ಬೆದರಿಕೆ
ತೀರ್ಥಹಳ್ಳಿ : ತಾಲೂಕಿನ ಮೇಗರವಳ್ಳಿ ಮೂಲದ ವ್ಯಕ್ತಿ ಓರ್ವರಿಗೆ ಕೈಮರ ಮೂಲದ ಮಹಿಳೆ ಹಾಗೂ ಆಕೆಯ ಸಹೋದರ ಮೇಗರವಳ್ಳಿ ಮೂಲದ ವ್ಯಕ್ತಿಯ ವಿಡಿಯೋ ಇಟ್ಟುಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದು ಅದು ಈಗ ದೂರಿನಲ್ಲಿ ದಾಖಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಮೇಗರವಳ್ಳಿ ಮೂಲದ ವ್ಯಕ್ತಿ ಓರ್ವರು ಕೈಮರ ಮೂಲದ ಮಹಿಳೆಯ ಜೊತೆ ಇದ್ದ ವಿಡಿಯೋ ಇಟ್ಟುಕೊಂಡು ಆಕೆಯ ಸಹೋದರ ಮೊದಲು ತಂದೆಗೆ ನಂತರ ಮಗನಿಗೆ ಹಣಕ್ಕಾಗಿ ಬೇಡಿಕೆ ಇಟ್ಟು ಕೊಡದಿದ್ದರೆ ವಿಡಿಯೋ ರಿಲೀಸ್ ಮಾಡುವುದಾಗಿ ಬೆದರಿಸುತ್ತಿದ್ದರಿಂದ ಬೇರೆ ದಾರಿ ಕಾಣದೆ ಇಲಾಖೆ ಮರೆಹೋದ ನೊಂದ ವ್ಯಕ್ತಿಗೆ ಇಲಾಖೆ ಸೂಕ್ತ ರಕ್ಷಣೆ ನೀಡಿದ್ದು ಆಕೆಯ ವಿರುದ್ಧ ಹಾಗೂ ಆಕೆಯ ಸಹೋದರನ ವಿರುದ್ಧ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
– ಹೊಸನಗರ : ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಲಾರಿ ಚಂಡಿಕಾಂಬಾ ದೇವಸ್ಥಾನದ ಮುಂಭಾಗ ಪಲ್ಟಿ
ಹೊಸನಗರ : ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಲಾರಿ ಬಾಳೆಬರೆಯ ಚಂಡಿಕಾಂಬಾ ದೇವಸ್ಥಾನದ ಮುಂಭಾಗ ಪಲ್ಟಿಯಾಗಿದೆ. ದೇಗುಲದ ಧರ್ಮದರ್ಶಿಯವರ ಬೊಲೇರೋ ವಾಹನ ಜಖಂ ಆಗಿದೆ. ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಕ್ಯಾಂಟರ್ ಲಾರಿ ದೇವಸ್ಥಾನದ ಕಾಂಪೌಂಡ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಲಾರಿ ಚಾಲಕ ಆಂಧ್ರದ ಕರ್ನೂಲು ಜಿಲ್ಲೆಯ ಪದ್ದಿಲೇಟಿ ಗಂಭೀರ ಗಾಯಗೊಂಡಿದ್ದಾರೆ. ಧರ್ಮದರ್ಶಿ ಮೋಹನ್ ನಂಬಿಯಾರ್ ಅವರ ಬೊಲೇರೋ ವಾಹನ ಜಖಂ ಆಗಿದೆ. ನಗರ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.